ಕ್ರಿಕೆಟ್​ನಲ್ಲಿ ಈರೀತಿ ಎಂದೂ ನೋಡಿರಲಿಲ್ಲ; ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಕೆಂಡಾಮಂಡಲ ಆಗಿದ್ದೇಕೆ?

ಅಸಮಾಧಾನಗೊಂಡ ವಿಂಡೀಸ್ ಆಟಗಾರರು ಅಂಪೈರ್ ಬಳಿ ಚರ್ಚೆಗೆ ಇಳಿಯುತ್ತಾರೆ. ಹೀಗಾಗಿ ಟೆಲಿವಿಷನ್‌ ರೀಪ್ಲೇ ನೋಡಿದ ಅಂಪೈರ್ ತಪ್ಪಿನ ಅರಿವಾಗಿ ಆನಂತರ ಥರ್ಡ್‌ ಅಂಪೈರ್‌ ಮೊರೆ ಹೋದರು. ಇದು ವಿರಾಟ್ ಕೊಹ್ಲಿಯ ಸಿಟ್ಟಿಗೆ ಕಾರಣವಾಗಿದೆ.

news18-kannada
Updated:December 16, 2019, 11:14 AM IST
ಕ್ರಿಕೆಟ್​ನಲ್ಲಿ ಈರೀತಿ ಎಂದೂ ನೋಡಿರಲಿಲ್ಲ; ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಕೆಂಡಾಮಂಡಲ ಆಗಿದ್ದೇಕೆ?
ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ
  • Share this:
ನಿನ್ನೆ ಚೆನ್ನೈನ ಎಂ. ಚಿದಂಬರಂ  ಕ್ರೀಡಾಂಗಂಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ ಹೀನಾಯ ಸೋಲುಕಂಡಿದೆ. ಟೀಂ ಇಂಡಿಯಾ ದುರ್ಬಲ ಬೌಲಿಂಗ್ ಅನ್ನು ಚೆನ್ನಾಗಿ ಉಪಯೋಗಿಸಿಕೊಂಡ ಶಿಮ್ರೋನ್ ಹೆಟ್ಮೇರ್ ಹಾಗೂ ಶಾಯ್ ಹೋಪ್ ವಿಂಡೀಸ್​ಗೆ ಸುಲಭ ಜಯ ತಂದಿಟ್ಟರು.

ಇದಕ್ಕೆ ಹೊರತಾಗಿ ಈ ಪಂದ್ಯದಲ್ಲಿ ಸುದ್ದಿಯಾಗಿದ್ದು, ನಾಯಕ ವಿರಾಟ್​​ ಕೊಹ್ಲಿಯ ಸಿಟ್ಟು. ಇದಕ್ಕೆ ಕಾರಣ ರವಿಂದ್ರ ಜಡೇಜಾ ರನೌಟ್ ವಿಚಾರ. ಭಾರತ ಬ್ಯಾಟಿಂಗ್ ಇನ್ನಿಂಗ್ಸ್​ನ ಅಂತ್ಯದ 48ನೇ ಓವರ್​​ನಲ್ಲಿ ಸಿಂಗಲ್ ರನ್ ತೆಗೆಯಲು ಹೋದ ಜಡೇಜಾ ಅವರನ್ನು ವೆಸ್ಟ್‌ ಇಂಡೀಸ್‌ನ ಫೀಲ್ಡರ್‌ ರಾಸ್ಟನ್‌ ಚೇಸ್‌ ಡೈರೆಕ್ಟ್‌ ಹಿಟ್‌ ಮಾಡುವ ಮೂಲಕ ಔಟ್‌ಗಾಗಿ ಮನವಿ ಮಾಡಿದರು. ಈ ಸಂದರ್ಭ ಜಡೇಜಾ ಕ್ರೀಸ್‌ ತಲುಪದೇ ಇದ್ದರು ಆನ್‌ಫೀಲ್ಡ್‌ ಅಂಪೈರ್‌ ದಕ್ಷಿಣ ಆಫ್ರಿಕಾ ಮೂಲದ ಶಾನ್‌ ಜಾರ್ಜ್‌ ನಾಟ್‌ ಔಟ್‌ ನಿರ್ಧಾರ ನೀಡಿದ್ದರು.

India vs West Indies: ಹೆಟ್ಮೇರ್-ಹೋಪ್ ಅಬ್ಬರದ ಬ್ಯಾಟಿಂಗ್; ಭಾರತಕ್ಕೆ ಸೋಲು!

ಇದರಿಂದ ಅಸಮಾಧಾನಗೊಂಡ ವಿಂಡೀಸ್ ಆಟಗಾರರು ಅಂಪೈರ್ ಬಳಿ ಚರ್ಚೆಗೆ ಇಳಿಯುತ್ತಾರೆ. ಹೀಗಾಗಿ ಟೆಲಿವಿಷನ್‌ ರೀಪ್ಲೇ ನೋಡಿದ ಅಂಪೈರ್ ತಪ್ಪಿನ ಅರಿವಾಗಿ ಆನಂತರ ಥರ್ಡ್‌ ಅಂಪೈರ್‌ ಮೊರೆ ಹೋದರು. ಇದು ವಿರಾಟ್ ಕೊಹ್ಲಿಯ ಸಿಟ್ಟಿಗೆ ಕಾರಣವಾಗಿದೆ.

 ಅಂಪೈರ್​ಗಳ ಎಡವಟ್ಟಿನಿಂದ ಕೆಂಡಾಮಂಡಲರಾದ ಕೊಹ್ಲಿ ತಕ್ಷಣವೇ ಮೈದಾನದ ಬೌಂಡರಿ ಗೆರೆಯತ್ತ ಬಂದು ಅಲ್ಲಿಂದಲೇ ಅಂಪೈರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಪಂದ್ಯದ ನಂತರ ಮಾತನಾಡಿದ ಕೊಹ್ಲಿ, ಫೀಲ್ಡರ್ ಔಟ್ ಎಂದು ಕೇಳಿದಾಗ ಅಂಪೈರ್ ನಾಟೌಟ್ ಎಂದು ತೀರ್ಪು ನೀಡುತ್ತಾರೆ. ಅಲ್ಲಿಗೆ ಮುಗಿಯಿತು.

IPL 2020: ಐಪಿಎಲ್​​ನ ಒಂದೇ ಪಂದ್ಯದಲ್ಲಿ 5 ವಿಕೆಟ್ ಕಿತ್ತ ಟಾಪ್ ಬೌಲರ್​​ಗಳು ಯಾರೆಲ್ಲ ಗೊತ್ತಾ?

ಅದುಬಿಟ್ಟು ಹೊರಗೆ ಕುಳಿತು ನೋಡುವ ವ್ಯಕ್ತಿಗಳು ಪಂದ್ಯದ ನಿರ್ಧಾರ ಮಾಡುವಂತಾಗಬಾರದು. ಅಂಪೈರ್​​ಗಳು ಮತ್ತು ರೆಫರಿಗಳು ಇಂತಹ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕ್ರಿಕೆಟ್​ನಲ್ಲಿ ಈರೀತಿ ನಾನು ಎಂದೂ ನೋಡಿರಲಿಲ್ಲ ಎಂದು ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ರಿಷಭ್ ಪಂತ್(71) ಹಾಗೂ ಶ್ರೇಯಸ್ ಐಯರ್(70) ಅರ್ಧಶತಕದ ನೆರವಿನಿಂದ 50 ಓವರ್​ನಲ್ಲಿ 8 ವಿಕೆಟ್ ಕಳೆದುಕೊಂಡು 287 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ಶಾಯ್ ಹೋಪ್(102*) ಹಾಗೂ ಶಿಮ್ರೋನ್ ಹೆಟ್ಮೇರ್(139) ದ್ವಿಶತಕದ ಜೊತೆಯಾಟದ ನೆರವಿನಿಂದ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.

First published:December 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ