ಬೆಂಗಳೂರು (ಅ. 04): ನೆದರ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ರ್ಯಾನ್ ಟೆನ್ ಡಾಸ್ಚೇಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಿ ಕ್ಷಮೆಯಾಚಿಸಿದ್ದಾರೆ. ಇದಕ್ಕೆ ಕಾರಣ ಇವರು ಮಾಡಿರುವ ನೂತನ ದಾಖಲೆ ಎಂಬುದು ವಿಶೇಷ!
ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಬಾಬರ್ ಅಜಮ್ ದಾಖಲೆ ಮುರಿದಿರುವ ಕಾರಣಕ್ಕೆ ಟೆನ್ ಡಾಸ್ಚೇಟ್ ಈ ಇಬ್ಬರು ಆಟಗಾರರ ಬಳಿ ಕ್ಷಮೆಯಾಚಿಸಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ 1 ಸಾವಿರ ರನ್ ಬಾರಿಸಿ ಗರಿಷ್ಠ ಸರಾಸರಿ ಹೊಂದಿದ ನಂಬರ್ ಓನ್ ಬ್ಯಾಟ್ಸ್ಮನ್ ಎಂಬ ಸಾಧನೆಯನ್ನು ಟೆನ್ ಡಾಸ್ಚೇಟ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ಮೊದಲ ಸ್ಥಾನ ಕೊಹ್ಲಿಗಿದ್ದರೆ ಎರಡನೇ ಸ್ಥಾನದಲ್ಲಿ ಬಾಬರ್ ಅಜಾಮ್ ಇದ್ದರು. ಸದ್ಯ ಟೆನ್ ಡಾಸ್ಚೇಟ್ 67.00 ಸರಾಸರಿ ಹೊಂದಿ ಅಗ್ರಸ್ಥಾನಕ್ಕೇರಿದ್ದಾರೆ.
ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು? ಎಂಬ ಪ್ರಶ್ನೆಗೆ ಪ್ರಿಯಾಂಕ ಚೋಪ್ರಾ ನೀಡಿದ ಉತ್ತರವೇನು ಗೊತ್ತಾ..?
ಸದ್ಯ ಕೊಹ್ಲಿ 60.31 ಸರಾಸರಿಯೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಬಾಬರ್ 54.17 ಸರಾಸರಿ ಹೊಂದಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಬಗ್ಗೆ ಇಎಸ್ಪಿಎಲ್ ಕ್ರಿಕ್ ಇನ್ಫೊ ಟ್ವೀಟ್ ಮಾಡಿದೆ. ಇದಕ್ಕೆ ಟೆನ್ ಡಾಸ್ಚೇಟ್ ಅವರು ಕಮೆಂಟ್ ಮಾಡಿದ್ದು ಉಳಿದ ಎಲ್ಲ ಆಟಗಾರರ ಬಳಿ ಕ್ಷಮೆಯಾಚಿಸುತ್ತೇನೆ ಎಂಬಂತೆ ಬರೆದುಕೊಂಡಿದ್ದಾರೆ.
ವಿಶೇಷ ಎಂದರೆ ಟೆನ್ ಡಾಸ್ಚೇಟ್ ಅವರು 2011 ವಿಶ್ವಕಪ್ ಮುಗಿದ ಬೆನ್ನಲ್ಲೆ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಬಳಿಕ ಟಿ-20 ಕ್ರಿಕೆಟ್ನಲ್ಲಿ ನಿರತಾಗಿರುವ ಇವರು ಐರ್ಲೆಂಡ್ ವಿರುದ್ಧ ಕಳೆದ ಫೆಬ್ರವರಿಯಲ್ಲಿ ಕೊನೆಯ ಪಂದ್ಯವನ್ನಾಡಿದ್ದರು.
ನೆದರ್ಲೆಂಡ್ ಪರ 33 ಏಕದಿನ ಪಂದ್ಯವನ್ನಾಡಿರುವ ಟೆನ್ ಡಾಸ್ಚೇಟ್ 1541 ರನ್ ಕಲೆಹಾಕಿದ್ದಾರೆ. ಇದರಲ್ಲಿ 5 ಶತಕ ಬಾರಿಸಿದ್ದರೆ, 2 ಶತಕ 2011 ಏಕದಿನ ವಿಶ್ವಕಪ್ನಿಂದ ಬಂದಿದ್ದಾಗಿದೆ. ಐಪಿಎಲ್ನಲ್ಲೂ ಆಡಿದ್ದ ಇವರು ಕೆಕೆಆರ್ ಪರ ಐದು ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ