ನೇಪಾಳ ಕ್ರಿಕೆಟ್ ತಂಡದ ಆಟಗಾರ, ಕ್ಯಾಪ್ಟನ್ ಸಹ ಆಗಿರುವ ಸಂದೀಪ್ ಲಮಿಚ್ಚನೆ (Sandeep Lamichhane) ಮೇಲೆ ಗಂಭೀರ ಆರೋಪ ಕೇಳಿಬಂದಿದೆ. 17 ವರ್ಷದ ಅಪ್ರಾಪ್ತ ಯುವತಿ ನೇಪಾಳ ಕ್ರಿಕೆಟ್ ಆಟಗಾರ, ನೇಪಾಳ ಕ್ರಿಕೆಟ್ ತಂಡದ ನಾಯಕ (Nepal Cricket Team Captain) ಸಂದೀಪ್ ಲಮಿಚ್ಚನೆ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಕಠ್ಮಂಡು ಪೊಲೀಸ್ ಠಾಣೆಯಲ್ಲಿ ಕಂಪ್ಲೇಟ್ ದಾಖಲಾಗಿದ್ದು ಈ ಕುರಿತು ಪೊಲೀಸ್ ಮೂಲಗಳು ಸಹ ಖಚಿತಪಡಿಸಿವೆ. ಕಠ್ಮಂಡುವಿನ ಖಾಸಗಿ ಹೊಟೇಲ್ ಒಂದರಲ್ಲಿ ತನ್ನ ಮೇಲೆ ನೇಪಾಳ ಕ್ರಿಕೆಟ್ ತಂಡದ ಆಟಗಾರ ಸಂದೀಪ್ ಲಮಿಚ್ಚನೆ ಅತ್ಯಾಚಾರ (Sandeep Lamichhane Rape Case) ಎಸಗಿದ್ದಾಗಿ 17 ವರ್ಷದ ಅಪ್ರಾಪ್ತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಆಗಸ್ಟ್ 21 ರಂದು ಅತ್ಯಾಚಾರ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾನು ಕ್ರಿಕೆಟಿಗ ಸಂದೀಪ್ ಲಮಿಚ್ಚನೆ ಅವರ ಅಭಿಮಾನಿಯಾಗಿದ್ದೆ. ವಾಟ್ಸ್ಆ್ಯಪ್ ಮತ್ತು ಸ್ನಾಪ್ಚಾಟ್ಗಳಲ್ಲಿ ಆಗಾಗ ಸಂದೀಪ್ ಲಮಿಚ್ಚನೆ ಜೊತೆ ಚಾಟ್ ಮಾಡುತ್ತಿದೆ. ಅಲ್ಲದೇ ಅವರನ್ನು ಭೇಟಿಯೂ ಆಗುತ್ತಿದೆ. ಮೊದಲ ಭೇಟಿಯಲ್ಲೇ ಸಂದಿಪ್ ಲಮಿಚ್ಚನೆ ನನಗೆ ಪ್ರಪೋಸ್ ಸಹ ಮಾಡಿದ್ದರು. ಆಗಸ್ಟ್ 21 ರಂದು ಕಠ್ಮಂಡುವಿನ ಹೋಟೆಲ್‌ನಲ್ಲಿ ಸಂದೀಪ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ಸಂತೃಸ್ತೆಯ ಆರೋಗ್ಯ ತಪಾಸಣೆ
ಪೊಲೀಸರು ಇಂತಹ ಗಂಭೀರ ಘಟನೆಗಳಿಗೆ ಸಂವೇದನಾಶೀಲರಾಗಿ ತನಿಖೆ ನಡೆಸುತ್ತೇವೆ. ನಾವು ಸಂತೃಸ್ತೆಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದ್ದೇವೆ. ಜೊತೆಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಕಠ್ಮಂಡು ಕಣಿವೆ ಪೊಲೀಸ್ ಕಚೇರಿ ಮುಖ್ಯಸ್ಥ ರವೀಂದ್ರ ಪ್ರಸಾದ್ ಧನುಕ್ ಹೇಳಿದ್ದಾರೆ.
ಇದನ್ನೂ ಓದಿ: China: ಚೀನಾ ನಾಗರಿಕರ ಸ್ಥಿತಿ ನರಕ; ಕಂಡು ಕೇಳರಿಯದ ಭೂಕಂಪ
Nepal Police starts investigation over alleged rape complaint against Nepali national Cricket team Captain Sandeep Lamichhane, after a minor aged 17 lodged the case, stated Nepal Police in a statement
(Photo courtesy: Sandeep Lamichhane's Twitter handle) pic.twitter.com/3HK386a6n5
— ANI (@ANI) September 7, 2022
ಇದನ್ನೂ ಓದಿ: Acid Attack: ಬಾಲಕಿಯ ಬಾಯಿಗೆ ಆ್ಯಸಿಡ್ ಸುರಿದು ಲೈಂಗಿಕ ದೌರ್ಜನ್ಯ; ಕತ್ತು ಸೀಳಿ ಭಯಾನಕ ವಿಕೃತಿ
ನೇಪಾಳ ತಂಡದ ಕ್ರಿಕೆಟಿಗ ಸಂದೀಪ್ ಲಮಿಚ್ಚನೆ ವಿರುದ್ಧ ಜಿಲ್ಲಾ ಪೊಲೀಸ್ ವ್ಯಾಪ್ತಿ ಕಠ್ಮಂಡು ದೂರು ಸ್ವೀಕರಿಸಲಾಗಿದೆ ಎಂದು ಪೊಲೀಸರು ಸಹ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಪೊಲೀಸ್ ವರದಿಯ ಪ್ರಕಾರ ಸೆಪ್ಟೆಂಬರ್ 22 ರಂದು ನೇಪಾಳ ಕ್ರಿಕೆಟ್ ತಂಡ ಕೀನ್ಯಾ ಪ್ರವಾಸಕ್ಕೆ ತೆರಳುವ ಮುನ್ನ ಸಂದೀಪ್ ಲಮಿಚಾನೆ ಸಂತೃಸ್ತೆಯನ್ನು ಹೊಟೇಲ್ನಲ್ಲೇ ಉಳಿಸಿಕೊಂಡಿದ್ದರು. ರಾತ್ರಿ 8 ಗಂಟೆಗೆಸಂದೀಪ್ ಲಮಿಚ್ಚನೆ ಮತ್ತು ಸಂತೃಸ್ತೆ ಉಳಿದುಕೊಂಡ ಹೊಟೇಲ್ಗಳ ಗೇಟ್‌ಗಳನ್ನು ಮುಚ್ಚಿದ್ದರಿಂದ ಆಕೆ ತನ್ನ ಹಾಸ್ಟೆಲ್‌ಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ರಾತ್ರಿಯಡೀ ಹೋಟೆಲ್ನಲ್ಲೇ ಉಳಿಯುವಂತೆ ಸಂದೀಪ್ ಲಮಿಚ್ಚನೆ ಒತ್ತಾಯಿಸಿದ್ದ ಎಂದು ಸಹ ಸಂತೃಸ್ತೆ ಆರೋಪಿಸಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ