HOME » NEWS » Sports » CRICKET NATARAJAN GIFTED HIS MAHINDRA THAR TO HIS COACH JAYAPRAKASH ZP

T Natarajan: ತನಗೆ ಸಿಕ್ಕ ಉಡುಗೊರೆಯನ್ನು ಕೋಚ್​ಗೆ ನೀಡಿದ ಟಿ ನಟರಾಜನ್..!

ತಮ್ಮ ಹೆಸರಿನ ಮುಂದೆ ಕೋಚ್​ಗೆ ಗೌರವ ಸಲ್ಲಿಸುವ ಸಲುವಾಗಿ ಅವರು ಜೆಪಿ ಎಂದು ಸೇರಿಸುತ್ತಿದ್ದಾರೆ. ಅಲ್ಲದೆ ಗುರುವಿನ ಗೌರವಾರ್ಥವಾಗಿ ಎಡ ಮೊಣಕೈಯಲ್ಲಿ JP ಎಂಬ ಟ್ಯಾಟೂವನ್ನು ಕೂಡ ಹಾಕಿಕೊಂಡಿದ್ದಾರೆ ನಟರಾಜನ್.

news18-kannada
Updated:April 4, 2021, 7:28 PM IST
T Natarajan: ತನಗೆ ಸಿಕ್ಕ ಉಡುಗೊರೆಯನ್ನು ಕೋಚ್​ಗೆ ನೀಡಿದ ಟಿ ನಟರಾಜನ್..!
ನಟರಾಜನ್
  • Share this:
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅತ್ಯಾದ್ಭುತ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾದ ಹೊಸ ಆರು ಆಟಗಾರರಿಗೆ ಖ್ಯಾತ ಉದ್ಯಮಿ, ಮಹೀಂದ್ರಾ ಕಂಪೆನಿಯ ಮಾಲೀಕ ಆನಂದ್ ಮಹೀಂದ್ರಾ ಥಾರ್ ಎಸ್​ಯುವಿ ಜೀಪ್​ಗಳನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದರು.

ಇದೀಗ ತಮ್ಮ ಮಾತಿನಂತೆ ಆನಂದ್ ಮಹೀಂದ್ರಾ ಕಡೆಯಿಂದ ಆಸ್ಟ್ರೇಲಿಯಾ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಆರು ಆಟಗಾರರಾದ ಟಿ ನಟರಾಜನ್, ಶಾರ್ದುಲ್ ಠಾಕುರ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಶುಭ್​ಮನ್ ಗಿಲ್ ಹಾಗೂ ನವದೀಪ್ ಸೈನಿಗೆ ಮಹೀಂದ್ರಾ ಥಾರ್ ಜೀಪ್​ಗಳನ್ನು ಕಳುಹಿಸಿ ಕೊಡಲಾಗಿದೆ.

ಆದರೆ ನಟರಾಜನ್ ಈ ಕಾರನ್ನು ಇನ್ನೊಬ್ಬರಿಗೆ ಗಿಫ್ಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಹೌದು, ಟೀಮ್ ಇಂಡಿಯಾದ ಎಡಗೈ ವೇಗಿ ತಮಗೆ ಸಿಕ್ಕ ಉಡುಗೊರೆಯನ್ನು ತಮ್ಮ ಕೋಚ್/ಮೆಂಟರ್​ ಜಯಪ್ರಕಾಶ್ ಅವರಿಗೆ ನೀಡಿದ್ದಾರೆ.

ತಮ್ಮ ಕ್ರಿಕೆಟ್​ ಬದುಕಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿದ್ದ ಜಯಪ್ರಕಾಶ್​ ಅವರನ್ನು ನಟರಾಜನ್ ಈ ಹಿಂದೆ ಕೂಡ ಹಲವು ಬಾರಿ ಸ್ಮರಿಸಿಕೊಂಡಿದ್ದರು. ಇದೀಗ ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನದೊಂದಿಗೆ ಐಪಿಎಲ್​ನಲ್ಲಿ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿರುವ ನಟರಾಜನ್, ತಮ್ಮ ಬೆಳವಣಿಗೆಗೆ ಕಾರಣರಾದ ಗುರುವಿಗೆ ತಮಗೆ ಸಿಕ್ಕ ಮೊದಲ ಉಡುಗೊರೆಯನ್ನು ನೀಡಿದ್ದಾರೆ.

ಐಪಿಎಲ್​ನಲ್ಲಿ ನಟರಾಜನ್ ತಮ್ಮ ಜೆರ್ಸಿ ಹೆಸರಿನ ಮುಂದೆ 'JP' ಎಂದು ಬರೆದುಕೊಂಡಿರುವುದು ನೀವು ಕೂಡ ನೋಡಿರಬಹುದು. ಟಿ. ನಟರಾಜನ್ ಆಗಿರುವ ಅವರೇಕೆ ಜೆಪಿ ಎಂದು ಬರೆದುಕೊಳ್ಳುತ್ತಾರೆ ಎಂಬ ಪ್ರಶ್ನೆಗೂ ಇದೇ ಕೋಚ್ ಜಯಪ್ರಕಾಶ್ ಅವರೇ ಉತ್ತರ.

ಹೌದು, ತಮ್ಮ ಹೆಸರಿನ ಮುಂದೆ ಕೋಚ್​ಗೆ ಗೌರವ ಸಲ್ಲಿಸುವ ಸಲುವಾಗಿ ಅವರು ಜೆಪಿ ಎಂದು ಸೇರಿಸುತ್ತಿದ್ದಾರೆ. ಅಲ್ಲದೆ ಗುರುವಿನ ಗೌರವಾರ್ಥವಾಗಿ ಎಡ ಮೊಣಕೈಯಲ್ಲಿ JP ಎಂಬ ಟ್ಯಾಟೂವನ್ನು ಕೂಡ ಹಾಕಿಕೊಂಡಿದ್ದಾರೆ ನಟರಾಜನ್. ಇದೀಗ ಆನಂದ್ ಮಹೀಂದ್ರಾ ಅವರ ಕಡೆಯಿಂದ ಸಿಕ್ಕ ಮೊದಲ ಉಡುಗೊರೆಯನ್ನು ಕೋಚ್​ ಜಯಪ್ರಕಾಶ್ ಅವರಿಗೆ ಒಪ್ಪಿಸುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ ನಟರಾಜನ್.
ಇನ್ನು ಚೊಚ್ಚಲ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದಕ್ಕೆ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ ಅವರಿಗೆ ನಟರಾಜನ್ ಗಬ್ಬಾ ಟೆಸ್ಟ್​ನಲ್ಲಿ ತಾನು ಧರಿಸಿದ್ದ ಜೆರ್ಸಿಗೆ ಸಹಿ ಹಾಕಿ ಕಳುಹಿಸಿಕೊಟ್ಟು ಧನ್ಯವಾದ ಅರ್ಪಿಸಿದ್ದಾರೆ.
Published by: zahir
First published: April 4, 2021, 7:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories