ಶಾರ್ಜಾ, ಅ. 22: ಟಿ20 ವಿಶ್ವಕಪ್ ತಮ್ಮ ಪಾಲಿಗೆ ಅಳಿವು ಉಳಿವಿನ ಪ್ರಶ್ನೆ ಎಂದು ಹೇಳಿದ್ದ ನಮೀಬಿಯಾ ಕ್ರಿಕೆಟಿಗರು ಇದೀಗ ಸೂಪರ್-12 ಹಂತಕ್ಕೆ ಹುಮ್ಮಸ್ಸಿನಿಂದ ಲಗ್ಗೆ ಹಾಕಿದ್ದಾರೆ. ಈ ಬಾರಿ ವಿಶ್ವಕಪ್ನ ಪ್ರಧಾನ ಹಂತಕ್ಕೆ ಸ್ಕಾಟ್ಲೆಂಡ್ ಮತ್ತ ನಮೀಬಿಯಾ ಪ್ರವೇಶ ಮಾಡಿರುವುದು ವಿಶ್ವ ಕ್ರಿಕೆಟ್ನ ಹೊಸ ಆಮಾಮ ಸೃಷ್ಟಿಯಾದಂತಾಗಿದೆ. ಇಂದು ನಡೆದ ಎ ಗುಂಪಿನ ಪಂದ್ಯದಲ್ಲಿ ನಮೀಬಿಯಾ ತಂಡ ಐರ್ಲೆಂಡ್ ವಿರುದ್ಧ 8 ವಿಕೆಟ್ಗಳಿಂದ ಜಯಭೇರಿ ಭಾರಿಸಿ ತನ್ನ ಗುಂಪಿನಲ್ಲಿ ಎರಡನೇ ತಂಡವಾಗಿ ಸೂಪರ್-12 ಪ್ರವೇಶಿಸಿತು. ನಾಯಕ ಜೆರಾರ್ಡ್ ಎರಾಸ್ಮಸ್ ಅವರ ಅಮೋಘ ಬ್ಯಾಟಿಂಗ್ ಹಾಗು ಡೇವಿಡ್ ವಿಯೆಸ್ ಅವರ ಆಲ್ರೌಂಡ್ ಆಟ ನಮೀಬಿಯಾಗೆ ಐತಿಹಾಸಿಕ ಗೆಲುವು ತಂದುಕೊಟ್ಟಿತು. ಐರ್ಲೆಂಡ್ನ 125 ರನ್ಗೆ ಪ್ರತಿಯಾಗಿ ನಮೀಬಿಯಾ 9 ಎಸೆತ ಬಾಕಿ ಇರುವಂತೆ ಗುರಿ ಮುಟ್ಟಿತು.
ರನ್ ಚೇಸಿಂಗ್ನಲ್ಲಿ ನಮೀಬಿಯಾ ಆರಂಭದಲ್ಲಿ ರನ್ ಗಳಿಸಲು ತುಸು ತಡವರಿಸಿದರೂ ವಿಕೆಟ್ಗಳನ್ನ ಕಾಪಾಡಿಕೊಂಡು ಬರಲು ಯಶಸ್ವಿಯಾಯಿತು. ಜೆರಾರ್ಡ್ ಎರಾಸ್ಮಸ್ ಮತ್ತು ಡೇವಿಡ್ ವಿಯೆಸ್ 3ನೇ ವಿಕೆಟ್ಗೆ 5 ಓವರ್ನಲ್ಲಿ 53 ರನ್ ಮುರಿಯದ ಜೊತೆಯಾಟ ನೀಡಿ ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು.
ಇದಕ್ಕೆ ಮುನ್ನ ಐರ್ಲೆಂಡ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿತು. ಮೊದಲ 3 ಆಟಗಾರರು ಮಾತ್ರ ಎರಡಂಕಿ ಸ್ಕೋರ್ ಗಳಿಸಿದರು. ಪೌಲ್ ಸ್ಟರ್ಲಿಂಗ್ 38, ಕೆವಿನ್ ಓ ಬ್ರಿಯಾನ್ 25 ಮತ್ತು ನಾಯಕ ಆಂಡಿ ಬಾಲ್ಬರ್ನೀ 21 ರನ್ ಗಳಿಸಿದರು. ಉಳಿದವರು ಒಂದಂಕಿ ಸ್ಕೋರ್ಗೆ ಔಟಾದರು. ನಮೀಬಿಯಾದ ಜೇನ್ ಫ್ರೈಲಿಂಕ್ 21 ರನ್ಗೆ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಡೇವಿಡ್ ವಿಯೆಸ್ 22 ರನ್ಗೆ 2 ವಿಕೆಟ್ ಪಡೆದರು. ಆಲ್ರೌಂಡ್ ಆ ಪ್ರದರ್ಶಿಸಿದ ಡೇವಿಡ್ ವಿಯೆಸ್ ಅವರಿಗೆ ಪಂದ್ಯ ಶ್ರೇಷ್ಠ ಗೌರವ ಲಭಿಸಿತು.
ಸೂಪರ್-12 ಹಂತದ ಎರಡನೇ ಗುಂಪಿನಲ್ಲಿ ನಮೀಬಿಯಾ:
ಎ ಗುಂಪಿನಲ್ಲಿ ಶ್ರೀಲಂಕಾ ಮೊದಲ ಸ್ಥಾನ ಪಡೆದರೆ, ನಮೀಬಿಯಾ ಎರಡನೇ ಸ್ಥಾನ ಪಡೆಯಿತು. ಸೂಪರ್-12 ಹಂತರದಲ್ಲಿ ಶ್ರೀಲಂಕಾ ಮೊದಲ ಗುಂಪಿಗೆ ಪ್ರವೇಶ ಪಡೆದರೆ, ನಮೀಬಿಯಾ ಎರಡನೇ ಗುಂಪಿಗೆ ಲಗ್ಗೆ ಹಾಕಿದೆ. ಈ ಎರಡನೇ ಗುಂಪಿನಲ್ಲಿ
ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ತಂಡಗಳಿವೆ. ಭಾರತ, ಪಾಕಿಸ್ತಾನ್, ನ್ಯೂಜಿಲೆಂಡ್ ತಂಡದಂಥ ಶ್ರೇಷ್ಠ ತಂಡಗಳೊಂದಿಗೆ ಸೆಣಸುವ ಅವಕಾಶ ನಮೀಬಿಯಾಗೆ ಲಭ್ಯವಾದಂತಾಗಿದೆ.
ಇಂದು ಲಂಕಾ-ನೆದರ್ಲೆಂಡ್ಸ್ ಎರಡನೇ ಪಂದ್ಯ ಬರೇ ನಾಮಕಾವಸ್ತೆ:
ಇಂದು ಎ ಗುಂಪಿನಲ್ಲಿ ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ನಡುವೆ ಪಂದ್ಯವಿದೆ. ಈಗಾಗಲೇ ಶ್ರೀಲಂಕಾ ಮತ್ತು ನಮೀಬಿಯಾ ಸೂಪರ್-12 ಹಂತದ ಪ್ರವೇಶ ಖಚಿತಪಡಿಸಿಕೊಂಡಿರುವುದರಿಂದ ಈ ಎರಡನೇ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಆಗಿದೆ. ಶ್ರೀಲಂಕಾ ಸತತ ಎರಡು ಪಂದ್ಯ ಗೆದ್ದು ಗುಂಪಿನಲ್ಲಿ ಟಾಪರ್ ಆಗಿದೆ. ಒಂದು ವೇಳೆ ನೆದರ್ಲೆಂಡ್ಸ್ ವಿರುದ್ಧ ಸೋತರೂ ಶ್ರೀಲಂಕಾದ ಸ್ಥಾನ ಕುಸಿಯುವ ಸಂಭವ ಇಲ್ಲ. ಯಾಕೆಂದರೆ ಲಂಕಾದ ನೆಟ್ ರನ್ ರೇಟ್ ಬರೋಬ್ಬರಿ 3.165 ಇದೆ. ಅದು ಮೈನಸ್ 0.5 ಇರುವ ನಮೀಬಿಯಾದಕ್ಕಿಂತ ಕೆಳಗಿಳಿಯುವ ಸಾಧ್ಯತೆ ಇಲ್ಲವೇ ಇಲ್ಲ.
ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ
ಇದೇ ವೇಳೆ, ಬಿ ಗುಂಪಿನ ಎಲ್ಲಾ ಪಂದ್ಯಗಳು ನಿನ್ನೆಗೆ ಮುಗಿದಿವೆ. ಸ್ಕಾಟ್ಲೆಂಡ್ ತಂಡ ಆ ಗುಂಪಿನ ಟಾಪರ್ ಆಗಿ ಸೂಪರ್-12 ಹಂತದಲ್ಲಿ ಎರಡನೇ ಗುಂಪಿಗೆ ಪ್ರವೇಶ ಪಡೆದಿದೆ. ಬಾಂಗ್ಲಾದೇಶ ಎರಡನೇ ಸ್ಥಾನ ಪಡೆದು ಸೂಪರ್-12 ಹಂತದಲ್ಲಿ ಮೊದಲ ಗುಂಪಿಗೆ ಪ್ರವೇಶ ಪಡೆದಿದೆ.
ಸೂಪರ್-12 ಹಂತ:
ಗ್ರೂಪ್ 1: ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌಥ್ ಆಫ್ರಿಕಾ, ವೆಸ್ಟ್ ಇಂಡೀಸ್, ಶ್ರೀಲಂಕಾ, ಬಾಂಗ್ಲಾದೇಶ
ಗ್ರೂಪ್ 2: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ್, ಸ್ಕಾಟ್ಲೆಂಡ್, ನಮೀಬಿಯಾ.
ನಾಳೆಯಿಂದಲೇ ಸೂಪರ್-12 ಹಂತದ ಪಂದ್ಯಗಳು ನಡೆಯುತ್ತವೆ. ನಾಳೆ, ಮೊದಲ ಗುಂಪಿನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಹಣಾಹಣಿ ನಡೆಸುತ್ತವೆ. ಭಾನುವಾರ ಶ್ರೀಲಂಕಾ vs ಬಾಂಗ್ಲಾದೇಶ ಮತ್ತು ಭಾರತ vs ಪಾಕಿಸ್ತಾನ ಪಂದ್ಯಗಳಿವೆ.
ಟಿ 20 ವಿಶ್ವಕಪ್ 2021- ಸೂಪರ್-12 ವೇಳಾಪಟ್ಟಿ
ದಿನಾಂಕ |
ಸಮಯ |
ಪಂದ್ಯಗಳು |
ಸ್ಥಳ |
ಅ. 23 |
ಮಧ್ಯಾಹ್ನ 3:30 |
ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ |
ಅಬುಧಾಬಿ |
ಅ. 23 |
ಸಂಜೆ 7:30 |
ಇಂಗ್ಲೆಂಡ್ vs ವೆಸ್ಟ್ ಇಂಡೀಸ್ |
ದುಬೈ |
ಅ. 24 |
ಮಧ್ಯಾಹ್ನ 3:30 |
ಬಾಂಗ್ಲಾದೇಶ್ vs ಶ್ರೀಲಂಕಾ |
ಶಾರ್ಜಾ |
ಅ. 24 |
ಸಂಜೆ 7:30 |
ಭಾರತ vs ಪಾಕಿಸ್ತಾನ |
ದುಬೈ |
ಅ. 25 |
ಸಂಜೆ 7:30 |
ಅಫ್ಘಾನಿಸ್ತಾನ್ vs ಸ್ಕಾಟ್ಲೆಂಡ್ |
ಶಾರ್ಜಾ |
ಅ. 26 |
ಮಧ್ಯಾಹ್ನ 3:30 |
ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ |
ದುಬೈ |
ಅ. 26 |
ಸಂಜೆ 7:30 |
ಪಾಕಿಸ್ತಾನ್ vs ನ್ಯೂಜಿಲೆಂಡ್ |
ಶಾರ್ಜಾ |
ಅ. 27 |
ಮಧ್ಯಾಹ್ನ 3:30 |
ಬಾಂಗ್ಲಾದೇಶ್ vs ಇಂಗ್ಲೆಂಡ್ |
ಅಬುಧಾಬಿ |
ಅ. 27 |
ಸಂಜೆ 7:30 |
ಸ್ಕಾಟ್ಲೆಂಡ್ vs ನಮೀಬಿಯಾ |
ಅಬುಧಾಬಿ |
ಅ. 28 |
ಸಂಜೆ 7:30 |
ಆಸ್ಟ್ರೇಲಿಯಾ vs ಶ್ರೀಲಂಕಾ |
ದುಬೈ |
ಅ. 29 |
ಮಧ್ಯಾಹ್ನ 3:30 |
ಬಾಂಗ್ಲಾದೇಶ್ vs ವೆಸ್ಟ್ ಇಂಡೀಸ್ |
ಶಾರ್ಜಾ |
ಅ. 29 |
ಸಂಜೆ 7:30 |
ಅಫ್ಘಾನಿಸ್ತಾನ್ vs ಪಾಕಿಸ್ತಾನ್ |
ದುಬೈ |
ಅ. 30 |
ಮಧ್ಯಾಹ್ನ 3:30 |
ಸೌಥ್ ಆಫ್ರಿಕಾ vs ಶ್ರೀಲಂಕಾ |
ಶಾರ್ಜಾ |
ಅ. 30 |
ಸಂಜೆ 7:30 |
ಆಸ್ಟ್ರೇಲಿಯಾ vs ಇಂಗ್ಲೆಂಡ್ |
ದುಬೈ |
ಅ. 31 |
ಮಧ್ಯಾಹ್ನ 3:30 |
ಅಫ್ಗಾನಿಸ್ತಾನ್ vs ನಮೀಬಿಯಾ |
ಅಬುಧಾಬಿ |
ಅ. 31 |
ಸಂಜೆ 7:30 |
ಭಾರತ vs ನ್ಯೂಜಿಲೆಂಡ್ |
ದುಬೈ |
ನ. 1 |
ಸಂಜೆ 7:30 |
ಇಂಗ್ಲೆಂಡ್ vs ಶ್ರೀಲಂಕಾ |
ಶಾರ್ಜಾ |
ನ. 2 |
ಮಧ್ಯಾಹ್ನ 3:30 |
ಬಾಂಗ್ಲಾದೇಶ್ vs ಸೌಥ್ ಆಫ್ರಿಕಾ |
ಅಬುಧಾಬಿ |
ನ. 2 |
ಸಂಜೆ 7:30 |
ಪಾಕಿಸ್ತಾನ್ vs ನಮೀಬಿಯಾ |
ಅಬುಧಾಬಿ |
ನ. 3 |
ಮಧ್ಯಾಹ್ನ 3:30 |
ನ್ಯೂಜಿಲೆಂಡ್ vs ಸ್ಕಾಟ್ಲೆಂಡ್ |
ದುಬೈ |
ನ. 3 |
ಸಂಜೆ 7:30 |
ಅಫ್ಘಾನಿಸ್ತಾನ್ vs ಭಾರತ |
ಅಬುಧಾಬಿ |
ನ. 4 |
ಮಧ್ಯಾಹ್ನ 3:30 |
ಆಸ್ಟ್ರೇಲಿಯಾ vs ಬಾಂಗ್ಲಾದೇಶ್ |
ದುಬೈ |
ನ. 4 |
ಸಂಜೆ 7:30 |
ವೆಸ್ಟ್ ಇಂಡೀಸ್ vs ಶ್ರೀಲಂಕಾ |
ಅಬುಧಾಬಿ |
ನ. 5 |
ಮಧ್ಯಾಹ್ನ 3:30 |
ನ್ಯೂಜಿಲೆಂಡ್ vs ನಮೀಬಿಯಾ |
ಶಾರ್ಜಾ |
ನ. 5 |
ಸಂಜೆ 7:30 |
ಭಾರತ vs ಸ್ಕಾಟ್ಲೆಂಡ್ |
ದುಬೈ |
ನ. 6 |
ಮಧ್ಯಾಹ್ನ 3:30 |
ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ |
ಅಬುಧಾಬಿ |
ನ. 6 |
ಸಂಜೆ 7:30 |
ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ |
ಶಾರ್ಜಾ |
ನ. 7 |
ಮಧ್ಯಾಹ್ನ 3:30 |
ಅಫ್ಘಾನಿಸ್ತಾನ್ vs ನ್ಯೂಜಿಲೆಂಡ್ |
ಅಬುಧಾಬಿ |
ನ. 7 |
ಸಂಜೆ 7:30 |
ಪಾಕಿಸ್ತಾನ್ vs ಸ್ಕಾಟ್ಲೆಂಡ್ |
ಶಾರ್ಜಾ |
ನ. 8 |
ಸಂಜೆ 7:30 |
ಭಾರತ vs ನಮೀಬಿಯಾ |
ದುಬೈ |
ನ. 10 |
ಸಂಜೆ 7:30 |
ಸೆಮಿಫೈನಲ್ |
ಅಬುಧಾಬಿ |
ನ. 11 |
ಸಂಜೆ 7:30 |
ಸೆಮಿಫೈನಲ್ |
ದುಬೈ |
ನ. 14 |
ಸಂಜೆ 7:30 |
ಫೈನಲ್ |
ದುಬೈ |
ಭಾರತದ ಪಂದ್ಯಗಳು:
ಅ. 24: ಪಾಕಿಸ್ತಾನ
ಅ. 31: ನ್ಯೂಜಿಲೆಂಡ್
ನ. 3: ಅಫ್ಘಾನಿಸ್ತಾನ್
ನ. 5: ಸ್ಕಾಟ್ಲೆಂಡ್
ನ. 8: ನಮೀಬಿಯಾ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ