7 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿದ ಬ್ಯಾಟ್ಸ್​ಮನ್ಸ್​; ಇಲ್ಲಿದೆ ರೋಚಕ ಕ್ಷಣದ ವಿಡಿಯೋ!

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಅಫ್ಘಾನ್​ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು. ಆದರೆ, 5 ಹಾಗೂ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಜಿಬುಲ್ಲ ಜಾದ್ರನ್ ಹಾಗೂ ಮೊಹಮ್ಮದ್ ನಬಿ ಜಿಂಬಾಬ್ವೆ ಬೌಲರ್​ಗಳನ್ನು ಕಾಡಿದರು.

Vinay Bhat | news18-kannada
Updated:September 15, 2019, 5:38 PM IST
7 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿದ ಬ್ಯಾಟ್ಸ್​ಮನ್ಸ್​; ಇಲ್ಲಿದೆ ರೋಚಕ ಕ್ಷಣದ ವಿಡಿಯೋ!
ನಜಿಬುಲ್ಲ ಜಾದ್ರನ್
  • Share this:
ಬೆಂಗಳೂರು (ಸೆ. 15): ಅಪರೂಪದಲ್ಲೇ ಅಪರೂಪ ಎಂಬಂತೆ 6 ಎಸೆತಗಳಲ್ಲಿ 6 ಸಿಕ್ಸರ್​​ ಬಾರಿಸಿರುವುದು ನೀವು ಕೇಳಿರಬಹುದು. ಈ ಹಿಂದೆ 2007ರ ವಿಶ್ವಕಪ್ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಈ ಸಾಧನೆ ಮಾಡಿದ್ದಾರೆ. ಆದರೆ, 7 ಎಸೆತಗಳಲ್ಲಿ 7 ಸಿಕ್ಸರ್?. ಹೌದು ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ತಂಡದ ಆಟಗಾರರು ಈ ಸಾಧನೆಯನ್ನು ಮಾಡಿ ತೋರಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ತ್ರಿಕೋನ ಟಿ-20 ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಅಫ್ಘಾನ್ ತಂಡದ ಪ್ರಮುಖ ಬ್ಯಾಟ್ಸ್​ಮನ್​ಗಳಾದ ಮೊಹಮ್ಮದ್ ನಬಿ ಹಾಗೂ ನಜಿಬುಲ್ಲ ಜಾದ್ರನ್ ಈ ಸಾಧನೆ ಮಾಡಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಅಫ್ಘಾನ್​ಗೆ ರೆಹ್ಮತುಲ್ಲ ಗರ್ಬಜ್ 43 ರನ್ ಬಾರಿಸಿ ಉತ್ತಮ ಆರಂಭ ನೀಡಿದರಾದರು, ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು. ಆದರೆ, 5 ಹಾಗೂ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಜಿಬುಲ್ಲ ಜಾದ್ರನ್ ಹಾಗೂ ಮೊಹಮ್ಮದ್ ನಬಿ ಜಿಂಬಾಬ್ವೆ ಬೌಲರ್​ಗಳನ್ನು ಕಾಡಿದರು.

ಇಂದು ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ-20 ಪಂದ್ಯ ನಡೆಯುವುದು ಅನುಮಾನ!

ಅಫ್ಘಾನ್ ಇನ್ನಿಂಗ್ಸ್​ನ 17 ಹಾಗೂ 18ನೇ ಓವರ್​​ನಲ್ಲಿ ನಬಿ-ಜಾದ್ರನ್ ಸಿಡಿದೆದ್ದರು. 17ನೇ ಓವರ್​ನ ಕೊನೆಯ 4 ಎಸೆತಗಳನ್ನು ನಬಿ ಸಿಕ್ಸ​ಗೆ ಅಟ್ಟಿದರೆ, ಮುಂದಿನ 18ನೇ ಓವರ್​ನ ಮೊದಲ ಮೂರು ಎಸೆತಗಳಲ್ಲಿ ಜಾದ್ರನ್ 3 ಸಿಕ್ಸ್​ ಚಚ್ಚಿದರು. ಈ ಮೂಲಕ 7 ಎಸೆತಗಳಲ್ಲಿ 7 ಸಿಕ್ಸರ್ ಸಿಡಿದು ಬಂತು.ಅಂತಿಮವಾಗಿ ಅಫ್ಘಾನಿಸ್ತಾನ 20 ಓವರ್​ಗೆ 5 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿತು. ಜಾದ್ರನ್ 30 ಎಸೆತಗಳಲ್ಲಿ ಅಜೇಯ 69 ರನ್ ಬಾರಿಸಿದರೆ, ನಬಿ 18 ಎಸೆತಗಳಲ್ಲಿ 38 ರನ್ ಸಿಡಿಸಿದರು.198 ರನ್​ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಕೊನೆಯಲ್ಲಿ ರೆಗಿಸ್ ಚಕಬ್ವ ಅಜೇಯ 42 ರನ್ ಬಾರಿಸಿದರು ಉಪಯೋಗವಾಗಲಿಲ್ಲ. ಅಂತಿಮವಾಗಿ ಜಿಂಬಾಬ್ಬೆ 20 ಓವರ್​ನಲ್ಲಿ 7 ವಿಕೆಟ್ ಕಳೆದುಕೊಂಡು 169 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು. ಅಫ್ಘಾನಿಸ್ತಾನ 28 ರನ್​ಗಳಿಂದ ಗೆದ್ದು ಬೀಗಿತು.
First published:September 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ