ಟೀಂ ಇಂಡಿಯಾದ ಸಿಕ್ಸರ್ಗಳ ಸರದಾರ, 2011ರ ವಿಶ್ವಕಪ್ ಗೆಲುವಿನ ರೂವಾರಿ ಯುವರಾಜ್ ಸಿಂಗ್ ತಮ್ಮ 19 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮುಂಬೈಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ 37ರ ಹರೆಯದ ಯುವಿ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಈ ಮಧ್ಯೆ ಯುವರಾಜ್ ಸುದ್ದಿಗೋಷ್ಠಿಯಲ್ಲಿ ಹೇಳಿರುವ ಮಾತು ಕ್ರೀಡಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಕಡ್ಡಾಯವಾಗಿರುವ ಯೋ ಯೋ ಟೆಸ್ಟ್ ಅನ್ನು ಯುವರಾಜ್ ಪಾಸ್ ಮಾಡಿದ್ದರೂ ಮ್ಯಾನೇಜ್ಮೆಂಟ್ ಅವರಿಗೆ ಅವಕಾಶ ನೀಡಲಿಲ್ಲವಂತೆ.
2017ರಲ್ಲಿ ಯುವರಾಜ್ ಸಿಂಗ್ ಯೋ-ಯೋ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಹೀಗಾಗಿ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಕೆಲ ವಾರಗಳ ಕಾಲಾವಕಾಶ ನೀಡಿ, ಖಂಡಿತವಾಗಿ ಪಾಸ್ ಆಗುವೆ ಎಂದು ಯುವಿ ಮನವಿ ಮಾಡಿಕೊಂಡಿದ್ದರು.
ಇದಕ್ಕೆ ಟೀಂ ಮ್ಯಾನೇಜ್ಮೆಂಟ್ ನೀನು ಯೋ-ಯೋ ಪರೀಕ್ಷೆಯಲ್ಲಿ ಪಾಸ್ ಆಗದಿದ್ದರೂ ವಿದಾಯದ ಪಂದ್ಯ ಆಡಿಸುವುದಾಗಿ ಹೇಳಿತ್ತು. ಆದರೆ, ಇದಕ್ಕೆ ನಾನು ಯೋ-ಯೋ ಪರೀಕ್ಷೆ ಪಾಸ್ ಮಾಡದಿದ್ದರೆ ವಿದಾಯದ ಪಂದ್ಯ ಕೂಡ ಆಡುವುದಿಲ್ಲ. ಪರೀಕ್ಷೆ ಪಾಸ್ ಮಾಡಲು ಅವಕಾಶ ನೀಡಿ ಎಂದು ಯುವರಾಜ್ ಕೇಳಿಕೊಂಡಿದ್ದರು.
Yuvraj Singh Retirement: ಕ್ರಿಕೆಟ್ ಲೋಕದಲ್ಲಿ 'ಯುವ ರಾಜ'ನಾಗಿ ಮೆರೆದ ಕಥೆ; 19 ವರ್ಷಗಳ ಕ್ರೀಡಾ ಪಯಣ ಅಂತ್ಯ!
ಅಂತೆಯೆ ಕೆಲ ದಿನಗಳ ಬಳಿಕ ನಾನು ಯೋ ಯೋ ಟೆಸ್ಟ್ ಪಾಸ್ ಮಾಡಿ ಫಿಟ್ ಆಗಿದ್ದೇನೆ ಎಂದು ತೋರಿಸಿದೆ. ಆದರೆ ತಂಡದಲ್ಲಿ ನನ್ನನ್ನು ಸೇರಿಸಿಕೊಂಡಿಲ್ಲ. ಅಲ್ಲದೆ ನಿವೃತ್ತಿಯ ಪಂದ್ಯವನ್ನೂ ಆಡಲು ಅವಕಾಶ ನೀಡಿಲಿಲ್ಲ ಎಂದು ಬೇಸರದ ಮಾತುಗಳನ್ನಾಡಿದ್ದಾರೆ.
ಇಷ್ಟೇ ಅಲ್ಲದೆ, ಭಾರತ ಈಗ ವಿಶ್ವಕಪ್ ಆಡುತ್ತಿದೆ. ಈ ಸಂದರ್ಭದಲ್ಲಿ ನಾನು ಯಾವುದೇ ವಿವಾದವನ್ನು ಸೃಷ್ಟಿಸಲು ಬಯಸುವುದಿಲ್ಲ. ನನಗೆ ಸಮಯ ಸಮಯ ಬರುತ್ತದೆ, ಆಗ ಎಲ್ಲವನ್ನು ಮಾತನಾಡುತ್ತೇನೆ, ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾರೆ.
ಜೂನ್ 30, 2017ರಂದು ವೆಸ್ಟ್ ಇಂಡೀಸ್ ವಿರುದ್ಧ 39 ರನ್ ಗಳಿಸಿದ್ದೆ
ಯುವರಾಜ್ ಸಿಂಗ್ರ ಕೊನೆಯ ಪಂದ್ಯ. ಅವರನ್ನು ಭಾರತೀಯ ಕ್ರೀಡಾಭಿಮಾನಿಗಳು ತುಂಬಾನೇ ಮಿಸ್ ಮಾಡಿಕೊಳ್ಳುವುದರಲ್ಲಿ ಅನುಮಾನವಿಲ್ಲ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ