HOME » NEWS » Sports » CRICKET MURALITHARAN PICKS BETWEEN ASHWIN AND LYON TO EQUAL HIS FEAT OF 800 TEST WICKETS ZP

800 ವಿಕೆಟ್ ವಿಶ್ವ ದಾಖಲೆಯನ್ನು ಮುರಿಯಲಿರುವ ಬೌಲರ್​ನ್ನು ಹೆಸರಿಸಿದ ಮುತ್ತಯ್ಯ ಮುರಳೀಧರನ್

muttiah muralitharan: 32ರ ಹರೆಯದ ರವಿಚಂದ್ರನ್ ಅಶ್ವಿನ್ 74 ಟೆಸ್ಟ್ ಪಂದ್ಯಗಳಿಂದ 377 ವಿಕೆಟ್ ಪಡೆದರೆ, ನಾಥನ್ ಲಿಯಾನ್ 99 ಟೆಸ್ಟ್ ಪಂದ್ಯಗಳನ್ನಾಡಿ 396 ವಿಕೆಟ್ ಉರುಳಿಸಿದ್ದಾರೆ.

news18-kannada
Updated:January 14, 2021, 6:20 PM IST
800 ವಿಕೆಟ್ ವಿಶ್ವ ದಾಖಲೆಯನ್ನು ಮುರಿಯಲಿರುವ ಬೌಲರ್​ನ್ನು ಹೆಸರಿಸಿದ ಮುತ್ತಯ್ಯ ಮುರಳೀಧರನ್
muttiah muralitharan
  • Share this:
2010ರಲ್ಲಿ ಗಾಲೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ ಮುಖಾಮುಖಿಯಾಗಿತ್ತು. ಈ ಟೆಸ್ಟ್ ಪಂದ್ಯವು ಮುತ್ತಯ್ಯ ಮುರಳೀಧರನ್ (muttiah muralitharan) ಅವರ ಅಂತಿಮ ಮ್ಯಾಚ್ ಎಂಬ ವಿಶೇಷತೆ ಪಡೆದುಕೊಂಡಿತ್ತು. ಈ ಪಂದ್ಯದಲ್ಲಿ ಪ್ರಗ್ಯಾನ್ ಓಜಾ ಅವರ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಇತಿಹಾಸದಲ್ಲೇ ಯಾರು ಮಾಡದ ಸಾಧನೆಯೊಂದಿಗೆ ಮುರಳೀಧರನ್ ನಿವೃತ್ತಿ ಘೋಷಿಸಿದರು. ಹೌದು ಓಜಾ ವಿಕೆಟ್ ಮುತ್ತಯ್ಯ ಮುರಳೀಧರನ್ ಅವರ 800ನೇ ವಿಕೆಟ್ ಆಗಿತ್ತು.

ಈ ಐತಿಹಾಸಿಕ ದಾಖಲೆ ಯಾರು ಮುರಿಯಲಿದ್ದಾರೆ ಎಂಬ ಪ್ರಶ್ನೆಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿಯಲ್ಲಿ ಇಬ್ಬರು ಸ್ಪಿನ್ನರ್​ಗಳು 400 ವಿಕೆಟ್​ ಗಡಿಯಲ್ಲಿದ್ದಾರೆ. ಟೀಮ್ ಇಂಡಿಯಾ ಪರ ಆರ್​.ಅಶ್ವಿನ್ 377 ವಿಕೆಟ್​ಗಳನ್ನು ಪಡೆದಿದ್ದರೆ, ಅತ್ತ ಆಸ್ಟ್ರೇಲಿಯಾದ ನಾಥನ್ ಲಿಯಾನ್ 396 ವಿಕೆಟ್ ಕಬಳಿಸಿ ವಿಕೆಟ್ ಬೇಟೆ ಮುಂದುವರೆಸಿದ್ದಾರೆ.

ಹೀಗಾಗಿಯೇ ಮುತ್ತಯ್ಯ ಮುರಳೀಧರನ್ ಮುಂದೆ ಸಹಜ ಪ್ರಶ್ನೆಯೊಂದು ಎದುರಾಗಿದೆ. ಈ ಇಬ್ಬರು ಬೌಲರುಗಳಲ್ಲಿ ನಿಮ್ಮ 800 ವಿಕೆಟ್ ದಾಖಲೆ ಮುರಿಯಬಲ್ಲ ಬೌಲರ್ ಯಾರು ಎಂದು ಕೇಳಲಾಗಿತ್ತು. ಇದಕ್ಕೆ ಮುರಳೀಧರನ್ ನೀಡಿದ ಉತ್ತರ ಆರ್​. ಅಶ್ವಿನ್. ನನ್ನ ಪ್ರಕಾರ 800 ವಿಕೆಟ್ ಕಬಳಿಸುವ ಅವಕಾಶ ಅಶ್ವಿನ್ ಮುಂದಿದೆ. ಆತ ನನ್ನ ದಾಖಲೆ ಮುರಿಯಬಲ್ಲ ಸಾಮರ್ಥ್ಯವನ್ನು ಸಹ ಹೊಂದಿದ್ದಾರೆ. ಏಕೆಂದರೆ ಆತ ಶ್ರೇಷ್ಠ ಬೌಲರುಗಳಲ್ಲಿ ಗುರುತಿಸಿಕೊಂಡಿರುವ ಸ್ಪಿನ್ನರ್. ಹೀಗಾಗಿ ಅಶ್ವಿನ್ ದಾಖಲೆ ಮುರಿಯಲಿದ್ದಾರೆ ಎಂದೆನಿಸುತ್ತದೆ ಎಂದು ಮುರಳೀಧರನ್ ತಿಳಿಸಿದ್ದಾರೆ.

ಇದೇ ವೇಳೆ, ನಾಥನ್ ಲಿಯಾನ್ ಉತ್ತಮ ಬೌಲರ್ ಹೌದು, ಆದರೆ 800 ವಿಕೆಟ್ ಗುರಿ ತಲುಪುವಷ್ಟು ಉತ್ತಮ ಸ್ಪಿನ್ನರ್ ಅಲ್ಲ. ಸದ್ಯ 400 ವಿಕೆಟ್ ಸಮೀಪದಲ್ಲಿದ್ದಾರೆ. 800 ವಿಕೆಟ್ ಗುರಿಯನ್ನು ತಲುಪಲು ಬಹಳ ಪಂದ್ಯಗಳನ್ನು ಆಡಬೇಕಾಗುತ್ತದೆ ಎಂದು ಮುರಳೀಧರನ್ ತಿಳಿಸಿದ್ದಾರೆ. ಇನ್ನು 32ರ ಹರೆಯದ ರವಿಚಂದ್ರನ್ ಅಶ್ವಿನ್ 74 ಟೆಸ್ಟ್ ಪಂದ್ಯಗಳಿಂದ 377 ವಿಕೆಟ್ ಪಡೆದರೆ, ನಾಥನ್ ಲಿಯಾನ್ 99 ಟೆಸ್ಟ್ ಪಂದ್ಯಗಳನ್ನಾಡಿ 396 ವಿಕೆಟ್ ಉರುಳಿಸಿದ್ದಾರೆ.
Published by: zahir
First published: January 14, 2021, 6:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories