ಟೀಂ ಇಂಡಿಯಾ ಮಾಜಿ ವೇಗಿ ಮುನಾಫ್ ಪಟೇಲ್ ವಿರುದ್ಧ ಗಂಭೀರ ಆರೋಪ..!

'ಈ ಬಗ್ಗೆ ದೇವೇಂದ್ರ ಸುರ್ತಿ ಪೊಲೀಸ್ ಠಾಣೆಗೆ ಯಾವುದೇ ದೂರು ನೀಡಿಲ್ಲ. ಇಂತಹದೊಂದು ಬೆದರಿಕೆ ಇದೆ ಎಂದು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಇನ್ನೂ ಕೂಡ ಪ್ರಕರಣದ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿಲ್ಲ' ಎಂದು ನವಪುರ ಪೊಲೀಸ್ ಇನ್ಸ್​ಪೆಕ್ಟರ್ ಆರ್​ಎಂ ಚೌಹಾನ್ ಹೇಳಿದ್ದಾರೆ.

ಮುನಾಫ್ ಪಟೇಲ್

ಮುನಾಫ್ ಪಟೇಲ್

  • Share this:
ಟೀಂ ಇಂಡಿಯಾ ಮಾಜಿ ವೇಗಿ ಮುನಾಫ್ ಪಟೇಲ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ವಡೋದರಾ ಮೂಲದ ಕ್ರಿಕೆಟ್ ಹಿತರಕ್ಷಕ್ ಸಮಿತಿ (ಸಿಎಚ್ಎಸ್) ಮುಖ್ಯಸ್ಥ ದೇವೇಂದ್ರ ಸುರ್ತಿ ಅವರಿಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

'ಗುರುವಾರ ಕರೆ ಮಾಡಿದ್ದ ಮುನಾಫ್ ಪಟೇಲ್, ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಬರೋಡಾ ಕ್ರಿಕೆಟ್ ಅಸೋಸಿಯೇಷನ್​ನ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಿರುವುದೇ ಕೊಲೆ ಬೆದರಿಕೆಗೆ ಮುಖ್ಯ ಕಾರಣ' ಎಂದು ಸುರ್ತಿ ಆರೋಪಿಸಿದ್ದಾರೆ. ಆದರೆ ಪ್ರಸ್ತುತ ಬಿಸಿಎ ಅಡಿಯಲ್ಲಿ ಹಿರಿಯ ತಂಡಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಸುತ್ತಿರುವ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

'ಈ ಬಗ್ಗೆ ದೇವೇಂದ್ರ ಸುರ್ತಿ ಪೊಲೀಸ್ ಠಾಣೆಗೆ ಯಾವುದೇ ದೂರು ನೀಡಿಲ್ಲ. ಇಂತಹದೊಂದು ಬೆದರಿಕೆ ಇದೆ ಎಂದು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಇನ್ನೂ ಕೂಡ ಪ್ರಕರಣದ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿಲ್ಲ' ಎಂದು ನವಪುರ ಪೊಲೀಸ್ ಇನ್ಸ್​ಪೆಕ್ಟರ್ ಆರ್​ಎಂ ಚೌಹಾನ್ ಹೇಳಿದ್ದಾರೆ.

'ನಾನು ಕ್ರಿಕೆಟ್ ಮಾತ್ರ ಆಡಿದ್ದೇನೆ ಮತ್ತು ನನ್ನ ಜೀವನದುದ್ದಕ್ಕೂ ಅದನ್ನು ಮುಂದುವರಿಸುತ್ತೇನೆ. ಪ್ರಸ್ತುತ ತಂಡದ ಮಾರ್ಗದರ್ಶಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಆದರೆ ತಂಡದ ಆಯ್ಕೆಗಳಲ್ಲಿ ನನಗೆ ಯಾವುದೇ ಪಾತ್ರವಿಲ್ಲ. ನನ್ನ ಹೆಸರನ್ನು ಅನಗತ್ಯವಾಗಿ ಗುರಿಯಾಗಿಸಲಾಗಿದೆ. ಈ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ' ಎಂದು ಮುನಾಫ್ ತಿಳಿಸಿದ್ದಾರೆ.

ಮಾರ್ಚ್ 9, 2006 ರಂದು ಮೊಹಾಲಿಯಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಮುನಾಫ್ ಪಟೇಲ್ 13 ಟೆಸ್ಟ್, 70 ಏಕದಿನ ಮತ್ತು 3 ಟಿ 20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲದೆ 2011ರ ವಿಶ್ವಕಪ್ ಗೆದ್ದ ಭಾರತ ತಂಡ ಭಾಗವಾಗಿದ್ದಲ್ಲದೇ, ಆ ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದರು.ಇದನ್ನೂ ಕ್ಲಿಕ್ ಮಾಡಿ: ಬಾಲ್ಯದಲ್ಲಿ ನಾಚಿ ನೀರಾಗುತ್ತಿದ್ದ ಹುಡುಗಿ ಪೋರ್ನ್​ ಸ್ಟಾರ್ ಆಗಿದ್ದೇಗೆ?: ಸನ್ನಿ ಲಿಯೋನ್ ಬಿಚ್ಚಿಟ್ಟ ನಗ್ನಸತ್ಯ

First published: