ಧೋನಿ ಅಥವಾ ಕೊಹ್ಲಿ?: ಮನಮುಟ್ಟುವಂತಿದೆ ಶಾಹಿದ್ ಕಪೂರ್ ಮೆಚ್ಚಿನ ಕ್ರಿಕೆಟಿಗನನ್ನು ಆರಿಸಿದ ರೀತಿ!

ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಕ್ರಿಕೆಟ್ ಜಗತ್ತಿನ ಮೇಲೂ ಕರಿನೆರಳು ಬೀರಿದ ಪರಿಣಾಮ ಟೀಂ ಇಂಡಿಯಾ ಆಟಗಾರರು ಮನೆಯಲ್ಲಿಯೇ ಕುಳಿತು ಸಮಯ ಕಳೆಯುತ್ತಿದ್ದಾರೆ.

news18-kannada
Updated:March 26, 2020, 12:12 PM IST
ಧೋನಿ ಅಥವಾ ಕೊಹ್ಲಿ?: ಮನಮುಟ್ಟುವಂತಿದೆ ಶಾಹಿದ್ ಕಪೂರ್ ಮೆಚ್ಚಿನ ಕ್ರಿಕೆಟಿಗನನ್ನು ಆರಿಸಿದ ರೀತಿ!
ಶಾಹಿದ್ ಕಪೂರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ.
  • Share this:
ಮಹೇಂದ್ರ ಸಿಂಗ್ ಧೋನಿ ಅಥವಾ ವಿರಾಟ್ ಕೊಹ್ಲಿ?. ಇವರಿಬ್ಬರಲ್ಲಿ ನಿಮ್ಮ ಮೆಚ್ಚಿನ ಕ್ರಿಕೆಟಿಗ ಯಾರು ಎಂಬ ಪ್ರಶ್ನೆಗೆ ಬಾಲಿವುಡ್ ನಟ ಶಾಹಿದ್ ಕಪೂರ್ ನೀಡಿದ ಉತ್ತರ ಈಗ ಬಾರೀ ವೈರಲ್ ಆಗುತ್ತಿದೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಲೈವ್ ಚಾಟ್ ಬಂದಿದ್ದ ಶಾಹಿದ್ ಕಪೂರ್​​ಗೆ ಅಭಿಮಾನಿಯೋರ್ವ ಎಂಎಸ್ ಧೋನಿ ಅಥವಾ ಕೊಹ್ಲಿ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಶಾಹಿದ್ ನೀಡಿದ ಉತ್ತರ ಎಲ್ಲರ ಹೃದಯ ಗೆದ್ದಿದೆ.

ಎಂಎಸ್ ಧೋನಿ ಒಬ್ಬ ನೈಜ್ಯ ನಾಯಕ; ಕೂಲ್ ಕ್ಯಾಪ್ಟನ್ ಅನ್ನು ಹಾಡಿ ಹೊಗಳಿದ ಅಯ್ಯರ್

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಈಗಿನ ನಾಯಕ ವಿರಾಟ್ ಕೊಹ್ಲಿ ಇಬ್ಬರ ಪೈಕಿ ಒಬ್ಬರನ್ನು ಆರಿಸಿ ಎಂದಾಗ ಶಾಹಿದ್ 'ಅಮ್ಮ ಅಥವಾ ಅಪ್ಪ?' ಎಂದು ಪ್ರತಿಕ್ರಿಯಿಸಿದ್ದಾರೆ.

 ಅಂದರೆ ಅಮ್ಮ ಮತ್ತು ಅಪ್ಪನಲ್ಲಿ ಈ ಇಬ್ಬರಲ್ಲಿ ನಿಮಗೆ ಯಾರು ಇಷ್ಟ ಎಂದು ಪ್ರಶ್ನಿಸಿದರೆ ನಮಗೆ ಉತ್ತರಿಸಲು ಆಗುವುದಿಲ್ಲ. ಹಾಗೇ ಈ ಪ್ರಶ್ನೆಗೂ ಉತ್ತರಿಸಲು ಕಷ್ಟವಾಗುತ್ತದೆ. ಕೊಹ್ಲಿ-ಧೋನಿ ಇಬ್ಬರೂ ಶ್ರೇಷ್ಠ ಆಟಗಾರರು ಎಂಬರ್ಥದಲ್ಲಿ ಕಪೂರ್ ಮನ ಮುಟ್ಟುವ ಹಾಗೆ ಉತ್ತರಿಸಿದ್ದಾರೆ.

ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಶ್ರೇಯಸ್ ಅಯ್ಯರ್ ಕೂಡ ಎಂಎಸ್ ಧೋನಿ ಬಗ್ಗೆ ಹಾಡಿಹೊಗಳಿದ್ದಾರೆ. ಧೋನಿ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಂಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಅಯ್ಯರ್, 'ಧೋನಿ ಕೂಲ್, ಶಾಂತ ಸ್ವಭಾವ, ಸ್ಥಿರ ಮತ್ತು ನಿಜವಾದ ನಾಯಕ. ಅವರ ಆಟ ನನಗೆ ನಿಜಕ್ಕೂ ಆನಂದ ನೀಡುತ್ತದೆ' ಎಂದು ಹೇಳಿದ್ದಾರೆ.

IPL 2020: ಐಪಿಎಲ್ ಹರಾಜಿನಲ್ಲಿ ನಡೆದಿತ್ತು ಊಹಿಸಲಾಗದ ಘಟನೆ; ಏನದು ಗೊತ್ತಾ..?

ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಕ್ರಿಕೆಟ್ ಜಗತ್ತಿನ ಮೇಲೂ ಕರಿನೆರಳು ಬೀರಿದ ಪರಿಣಾಮ ಟೀಂ ಇಂಡಿಯಾ ಆಟಗಾರರು ಮನೆಯಲ್ಲಿಯೇ ಕುಳಿತು ಸಮಯ ಕಳೆಯುತ್ತಿದ್ದಾರೆ.

ಅಲ್ಲದೆ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್​ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ 21 ದಿನಗಳ ಕಾಲ ಲಾಕ್​​ಡೌನ್​​ ಕರೆ ನೀಡಿದ್ದಾರೆ. ಇದರಿಂಧ ಕ್ರಿಕೆಟಿಗರು, ನಟ- ನಟಿಯರು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಹೆಚ್ಚಾಗಿ ಆಕ್ಟಿವ್ ಆಗಿದ್ದಾರೆ.

First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading