Rohit Sharma: ಆರ್​ಸಿಬಿ ಟೀಂ ಬಗ್ಗೆ ನನಗೆ ಭಯ ಶುರುವಾಗಿದೆ ಎಂದ ರೋಹಿತ್; ಯಾಕೆ ಗೊತ್ತಾ?

Virat Kohli: ಆರ್​ಸಿಬಿ ವಿರುದ್ಧ ನಮ್ಮ ಪಂದ್ಯವಿದ್ದಾಗ ತಂಡದ ಮೀಟಿಂಗ್ ಗಂಟೆಗಳಿಗೂ ಅಧಿಕವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರು ತಂಡದ ಘಟಾನುಘಟಿ ಆಟಗಾರರು. ಆರ್​ಸಿಬಿ ಬಲಿಷ್ಠ ಎದುರಾಳಿ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ರೋಹಿತ್ ಹೇಳಿದ್ದಾರೆ.

news18-kannada
Updated:May 11, 2020, 9:59 AM IST
Rohit Sharma: ಆರ್​ಸಿಬಿ ಟೀಂ ಬಗ್ಗೆ ನನಗೆ ಭಯ ಶುರುವಾಗಿದೆ ಎಂದ ರೋಹಿತ್; ಯಾಕೆ ಗೊತ್ತಾ?
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ.
  • Share this:
 ಲಾಕ್​​ಡೌನ್ ವೇಳೆಯಲ್ಲಿ ಹೆಚ್ಚಾಗಿ ಇನ್​ಸ್ಟಾಗ್ರಾಮ್ ಲೈವ್ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಶುಕ್ರವಾರ ಆಸೀಸ್ ಕ್ರಿಕೆಟರ್ ಡೇವಿಡ್ ವಾರ್ನರ್ ಜೊತೆ ಲೈವ್ ಬಂದಿದ್ದರು. ಈ ವೇಳೆ ಸಹಜವಾಗಿಯೇ ಐಪಿಎಲ್ ಬಗ್ಗೆ ಒಂದಷ್ಟು ವಿಚಾರಗಳು ಪ್ರಸ್ತಾಪವಾಗಿದೆ.ಲೈವ್ ವೇಳೆ ಅಭಿಮಾನಿಯೊಬ್ಬರು ಆರ್​ಸಿಬಿ ಬಗ್ಗೆ ಈ ಇಬ್ಬರೂ ಖ್ಯಾತ ಆಟಗಾರರ ಅಭಿಪ್ರಾಯ ಕೇಳಿದ್ದಾರೆ.

Mumbai Indians sit and plan Hours for RCB more than any team in IPL: Rohit Sharma
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ.


Virat Kohli: ಒಂದು ವರ್ಷಕ್ಕೆ ಕೊಹ್ಲಿ-ಅನುಷ್ಕಾ ಜೋಡಿ ಗಳಿಸುವ ಆದಾಯ ಎಷ್ಟು ಗೊತ್ತೇ?

'ವಿರಾಟ್ ಕೊಹ್ಲಿ ನಾಯಕತ್ವದ ಬೆಂಗಳೂರು ತಂಡ ಅದ್ಭುತವಾಗಿದೆ. ಬಲಿಷ್ಠ ಬ್ಯಾಟಿಂಗ್ ಲೈನ್​ಅಪ್ ಹೊಂದಿದೆ' ಎಂದು ವಾರ್ನರ್ ಹೇಳಿದ್ದಾರೆ. ಇದಕ್ಕೆ ದನಿಗೂಡಿಸಿದ ರೋಹಿತ್ ಶರ್ಮಾ, 'ಆರ್​ಸಿಬಿ ವಿರುದ್ಧದ ಪಂದ್ಯ ಇದ್ದಾಗ ನಾವು ಉಳಿದೆಲ್ಲಾ ಪಂದ್ಯಕ್ಕಿಂತ ಕೊಂಚ ಹೆಚ್ಚೇ ತಯಾರಿ ಮಾಡಿಕೊಳ್ಳುತ್ತೇವೆ' ಎಂದಿದ್ದಾರೆ.

'ಆರ್​ಸಿಬಿ ವಿರುದ್ಧ ನಮ್ಮ ಪಂದ್ಯವಿದ್ದಾಗ ತಂಡದ ಮೀಟಿಂಗ್ ಗಂಟೆಗಳಿಗೂ ಅಧಿಕವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರು ತಂಡದ ಘಟಾನುಘಟಿ ಆಟಗಾರರು. ಆರ್​ಸಿಬಿ ಬಲಿಷ್ಠ ಎದುರಾಳಿ ಎನ್ನುವುದರಲ್ಲಿ ಎರಡು ಮಾತಿಲ್ಲ' ಎಂದು ರೋಹಿತ್ ಹೇಳಿದ್ದಾರೆ.

'ಇನ್ನು ಈ ಬಾರಿ ಐಪಿಎಲ್ ನಡೆದರೆ ಆರ್​ಸಿಬಿ ಕಪ್ ಗೆಲ್ಲಬಹುದೇ ಎನ್ನುವುದನ್ನು ಹೇಳೋದು ಕಷ್ಟ. ಸದ್ಯ ಟೂರ್ನಿ ಮುಂದೂಡಿಕೆಯಾಗಿರುವುದು ದುರದೃಷ್ಟಕರ. ಆರ್​ಸಿಬಿ ಈ ಬಾರಿ ಅತ್ಯಂತ ಬಲಿಷ್ಠ ತಂಡವಾಗಿ ಗೋಚರಿಸುತ್ತಿದೆ. ಈ ಕಾರಣಕ್ಕೆ ಟೂರ್ನಿ ಬಗ್ಗೆ ನನಗೆ ವೈಯಕ್ತಿಕವಾಗಿ ಹೆಚ್ಚಿನ ಕುತೂಹಲವಿದೆ' ಎನ್ನುವುದು ರೋಹಿತ್ ಮಾತು.

India vs Australia: ಟೀಂ ಇಂಡಿಯಾ ಆಟಗಾರರಿಗೆ ಕ್ವಾರಂಟೈನ್ ಮಾಡಿದ್ರೆ ಭಾರತ-ಆಸೀಸ್ ಸರಣಿ; ಬಿಸಿಸಿಐಕೊರೋನಾ ವೈರಸ್ ಕಾರಣಕ್ಕೆ ಈ ಬಾರಿಯ ಐಪಿಎಲ್ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದ್ದು, ಯಾವಾಗ ನಡೆಯಲಿದೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಸದ್ಯಕ್ಕೆ ಎಲ್ಲರೂ ಮನೆಯಲ್ಲಿದ್ದು ವೈರಸ್ ವಿರುದ್ಧ ಹೋರಾಡೋಣ ಎಂದು ಇಬ್ಬರೂ ಆಟಗಾರರು ಲೈವ್​ನಲ್ಲಿ‌ ಮನವಿ ಮಾಡಿದ್ದಾರೆ.

First published: May 9, 2020, 12:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading