news18-kannada Updated:January 20, 2021, 7:12 PM IST
ಮುಂಬೈ ಇಂಡಿಯನ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ನ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಿರೀಕ್ಷೆಯಂತೆ, ಐಪಿಎಲ್ 2021 ಗಾಗಿ ಬಹುತೇಕ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಕಳೆದ ವರ್ಷ ಆಡುವ ಬಳಗದಲ್ಲಿ ಸ್ಥಾನ ಪಡೆಯದ ಕೆಲ ಆಟಗಾರರನ್ನು ಮಾತ್ರ ಕೈಬಿಟ್ಟಿದ್ದಾರೆ. ಹಾಗೆಯೇ 2020 ಐಪಿಎಲ್ನಿಂದ ಹೊರಗುಳಿದಿದ್ದ ಮುಂಬೈ ವೇಗಿ ಲಸಿತ್ ಮಾಲಿಂಗ ಅವರನ್ನು ಬಿಡುಗಡೆ ಮಾಡಲಾಗಿದೆ.
ಇನ್ನು ಶೆರ್ಫೇನ್ ರುದರ್ಫೋರ್ಡ್, ಧವಲ್ ಕುಲಕರ್ಣಿ, ಮಿಚೆಲ್ ಮೆಕ್ಲೆನಾಘನ್, ಜೇಮ್ಸ್ ಪ್ಯಾಟಿನ್ಸನ್, ಪ್ರಿನ್ಸ್ ಬಲ್ವಂತ್ ರೈ, ದಿಗ್ವಿಜಯ್ ದೇಶ್ಮುಖ್ ಮತ್ತು ನಾಥನ್ ಕೌಲ್ಟರ್-ನೈಲ್ ಮುಂಬೈ ತಂಡದಿಂದ ಹೊರಬಿದ್ದಿದ್ದಾರೆ. ಆದರೆ ಕಳೆದ ಸೀಸನ್ನಲ್ಲಿ ಯಾವುದೇ ಮ್ಯಾಚ್ ಆಡದ ಮುಂಬೈ ಆರಂಭಿಕ ಆಟಗಾರ ಕ್ರಿಸ್ ಲಿನ್ ಅವರನ್ನು ಈ ಬಾರಿ ಕೂಡ ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಕಳೆದ ಸೀಸನ್ ಬಹುತೇಕ ಆಟಗಾರರನ್ನು ಹೊಂದಿರುವುದರಿಂದ ಮುಂಬೈ ಇಂಡಿಯನ್ಸ್ ಮುಂದಿನ ಸೀಸನ್ಗೂ ಮುನ್ನವೇ ಬಲಿಷ್ಠವಾಗಿ ಗುರುತಿಸಿಕೊಂಡಿದೆ.
ಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಆಟಗಾರರ ಪಟ್ಟಿ:
ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಅನ್ಮೋಲ್ ಪ್ರೀತ್ ಸಿಂಗ್, ಕ್ರಿಸ್ ಲಿನ್, ಸೌರಭ್ ತಿವಾರಿ, ಜಸ್ಪ್ರೀತ್ ಬುಮ್ರಾ, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಮೊಹ್ಸಿನ್ ಖಾನ್, ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕೃಣಾಲ್ ಪಾಂಡ್ಯ, ಅನುಕುಲ್ ರಾಯ್, ಆದಿತ್ಯ ತಾರೆ
Published by:
zahir
First published:
January 20, 2021, 7:12 PM IST