HOME » NEWS » Sports » CRICKET MUMBAI INDIANS BEAT CHENNAI SUPER KINGS BY 37 RUNS

IPL 2019, MI vs CSK: ಹಾರ್ದಿಕ್ ಪಾಂಡ್ಯ ಮಿಂಚಿನ ಆಟ: ಮುಂಬೈ ಮುಂದೆ ಮಂಕಾದ ಚೆನ್ನೈ

ಒಂದೆಡೆ ಕೇದರ್ ಜಾಧವ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ ಉಳಿದ ಬ್ಯಾಟ್ಸ್​ಮನ್​ಗಳಿಂದ ಯಾವುದೇ ರೀತಿಯ ಬೆಂಬಲ ಸಿಗಲಿಲ್ಲ.

zahir | news18
Updated:April 4, 2019, 12:37 AM IST
IPL 2019, MI vs CSK: ಹಾರ್ದಿಕ್ ಪಾಂಡ್ಯ ಮಿಂಚಿನ ಆಟ: ಮುಂಬೈ ಮುಂದೆ ಮಂಕಾದ ಚೆನ್ನೈ
.
  • News18
  • Last Updated: April 4, 2019, 12:37 AM IST
  • Share this:
ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 15ನೇ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್  37 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಮುಂಬೈ ನೀಡಿದ 171 ರನ್​ಗಳ ಗುರಿಯನ್ನು ಬೆನ್ನತ್ತಿದ್ದ ಚೆನ್ನೈ ತಂಡ 20 ಓವರ್​ನಲ್ಲಿ 133 ರನ್​ಗಳಿಸುವ ಮೂಲಕ ರೋಹಿತ್ ಪಡೆಗೆ ಶರಣಾಯಿತು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್‌ ಆಯ್ಕೆ ಪಡೆದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ (4) ಬೇಗನೇ ಪೆವಿಲಿಯನ್ ಸೇರಿದರು. ನಾಯಕ ರೋಹಿತ್ ಶರ್ಮಾ (13) ಒಂದಷ್ಟು ಪ್ರತಿರೋಧ ತೋರಿದಾದರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರ ಬೆನ್ನಲ್ಲೇ ಸ್ಪೋಟಕ ಆಟಕ್ಕೆ ಮುಂದಾದ ಯುವರಾಜ್ ಸಿಂಗ್ (4) ಸಹ ನಿರ್ಗಮಿಸಿದರು.

ಈ ವೇಳೆ ನಿಧಾನ ಆಟಕ್ಕೆ ಹೊತ್ತು ನೀಡಿದ ಸೂರ್ಯಕುಮಾರ್ ಯಾದವ್ ಹಾಗೂ ಕೃನಾಲ್ ಪಾಂಡ್ಯ ಮುಂಬೈ ಇನಿಂಗ್ಸ್​ ಕಟ್ಟುವ ಪ್ರಯತ್ನಕ್ಕೆ ಕೈ ಹಾಕಿದರು. ಉತ್ತಮ ಆಟದೊಂದಿ 62 ರನ್​ ಜೊತೆಯಾಟ ಆಡಿದ ಈ ಜೋಡಿ ಮತ್ತೆ ಮುಂಬೈ ಚೇತರಿಸಿಕೊಳ್ಳುವಂತೆ ಮಾಡಿದರು.

ಈ ವೇಳೆ ಕೃನಾಲ್ ಪಾಂಡ್ಯ (42) ಮೋಹಿತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಇನ್ನು ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ 38 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. 8 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದಾಗ ಬ್ರಾವೋ ಮ್ಯಾಜಿಕ್ ಬಾಲನ್ನು ಸರಿಯಾಗಿ ಗುರುತಿಸಲು ಎಡವಿದ ಸೂರ್ಯಕುಮಾರ್ ಕ್ಯಾಚಿತ್ತು ಹೊರ ನಡೆದರು.

ಆರನೇ ವಿಕೆಟ್​ಗೆ ಜತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ಕೀರನ್ ಪೊಲಾರ್ಡ್ ಕೊನೆಯ ಓವರ್​ಗಳಲ್ಲಿ ತಂಡದ ಮೊತ್ತವನ್ನು ಹೆಚ್ಚಿಸಲು ಸ್ಪೋಟಕ ಆಟಕ್ಕೆ ಮುಂದಾದರು. ಅದರಂತೆ ಹೊಡಿ ಬಡಿ ಆಟವಾಡಿದ ಹಾರ್ದಿಕ್ ಹಾಗೂ ಪೊಲಾರ್ಡ್ ಕೊನೆಯ ಓವರ್​ನಲ್ಲಿ ಸಿಕ್ಸರ್​, ಬೌಂಡರಿಗಳ ಸುರಿಮಳೆಗೈದರು. ಅಂತೆಯೇ ಬ್ರಾವೊ ಎಸೆದ ಈ ಓವರ್​ನಲ್ಲಿ 29 ರನ್​ಗಳನ್ನು ಕಲೆ ಹಾಕುವ ಮೂಲಕ 5 ವಿಕೆಟ್​ ನಷ್ಟಕ್ಕೆ 170 ರನ್​ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.

171 ರನ್​ಗಳ ಕಠಿಣ ಸವಾಲನ್ನು ಪಡೆದ ಚೆನ್ನೈ ಸೂಪರ್ ಕಿಂಗ್ಸ್​ ಆರಂಭದಲ್ಲೇ ಆಘಾತ ಎದುರಾಗಿತ್ತು. ಮೊದಲ ಓವರ್​ನಲ್ಲೇ ಅಂಬಟಿ ರಾಯುಡು ಸೊನ್ನೆ ಸುತ್ತುವ ಮೂಲಕ ಪೆವಿಲಿಯನ್​ನತ್ತ ಮುಖ ಮಾಡಿದರು. 2ನೇ ಓವರ್​ನಲ್ಲಿ ಮಾಲಿಂಗ ಶೇನ್​ ವಾಟ್ಸನ್​ ಸಹ ವಿಕೆಟ್​ ಪಡೆಯುವ ಮುಖಾಂತರ ಮುಂಬೈಗೆ ಎರಡನೇ ಯಶಸ್ಸನ್ನು ತಂದುಕೊಟ್ಟರು. ಈ ವೇಳೆ ರೈನಾ-ಜಾಧವ್ ಉತ್ತಮ ಜತೆಯಾಟ ಆಡಿದರೂ, ಜಾಸನ್​ ಎಸೆತದಲ್ಲಿ ರೈನಾ ಬಾರಿಸಿದ ಚೆಂಡನ್ನು ಅದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ಪೊಲಾರ್ಡ್ ಮುಂಬೈ ಪಾಲಿಗೆ ಮತ್ತೊಂದು ಯಶಸ್ಸಿಗೆ ಕಾರಣರಾದರು.

ಒಂದೆಡೆ ಕೇದರ್ ಜಾಧವ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ ಉಳಿದ ಬ್ಯಾಟ್ಸ್​ಮನ್​ಗಳಿಂದ ಯಾವುದೇ ರೀತಿಯ ಬೆಂಬಲ ಸಿಗಲಿಲ್ಲ. 58 ರನ್​ಗಳಿಸಿದ ಜಾಧವ್ ಮಾಲಿಂಗಗೆ ವಿಕೆಟ್ ಒಪ್ಪಿಸಿದರೆ, ಧೋನಿ( 12), ಜಡೇಜಾ(1) ವಿಕೆಟ್​ಗಳನ್ನು ಒಂದೇ ಓವರ್​ನಲ್ಲಿ ಉರುಳಿಸುವ ಮೂಲಕ ಬೌಲಿಂಗ್​ನಲ್ಲೂ ಹಾರ್ದಿಕ್ ಮಿಂಚಿದರು. ಬ್ಯಾಟಿಂಗ್​ನಲ್ಲಿ ಕೇವಲ 8 ಎಸೆತಗಳಲ್ಲಿ 25 ರನ್​ ಚಚ್ಚುವ ಮೂಲಕ ಮುಂಬೈ ಪಾಲಿಗೆ ನೆರವಾಗಿದ್ದ ಹಾರ್ದಿಕ್ ಪಾಂಡ್ಯ, 4 ಓವರ್​ನಲ್ಲಿ ಕೇವಲ 20 ರನ್​ಗಳನ್ನು ಅಮೂಲ್ಯ 3 ವಿಕೆಟ್​ಗಳನ್ನು ಉರುಳಿಸಿದರು. ಇನ್ನು ಜಾಸನ್​ 2 ವಿಕೆಟ್ ಪಡೆದರೆ, ಮಾಲಿಂಗ 3 ವಿಕೆಟ್​ ಕಬಳಿಸುವ ಮೂಲಕ ಚೆನ್ನೈಯನ್ನು 133 ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.


ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಜಯದ ನಾಗಲೋಟವನ್ನು ಮುಂದುವರೆಸಿದ್ದ ಚೆನ್ನೈ ಸೂಪರ್​ ಕಿಂಗ್ಸ್​ ಅನ್ನು ಮುಂಬೈ ಪರಾಜಯಗೊಳಿಸಿತು. ಈ  ಮೂಲಕ ಮುಂಬೈ ಇಂಡಿಯನ್ಸ್​ ಐಪಿಎಲ್​2019ನ ಎರಡನೇ ಜಯವನ್ನು ತನ್ನದಾಗಿಸಿಕೊಂಡಿತು. ಈ ಪಂದ್ಯದಲ್ಲಿ ಅದ್ಭುತ ಆಲ್​ರೌಂಡರ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

First published: April 4, 2019, 12:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories