Mumbai Indians: ಮಾರ್ಕ್ ಬೌಚರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದ ಮುಂಬೈ ಇಂಡಿಯನ್ಸ್‌ ತಂಡ

ರಿಲಾಯನ್ಸ್‌ ಜಿಯೋ ಇನ್ಫೋಕಾಮ್‌ ಲಿಮಿಟೆಡ್‌ ಚೇರ್ಮನ್‌ ಆಕಾಶ್‌ ಎಂ ಅಂಬಾನಿ ಮಾತನಾಡಿ "ಮುಂಬೈ ಇಂಡಿಯನ್ಸ್‌ಗೆ ಮಾರ್ಕ್ ಅವರನ್ನು ಸ್ವಾಗತಿಸುವುದು ಹೆಮ್ಮೆಯ ಸಂಗತಿಯಾಗಿದೆ.

ಮಾರ್ಕ್ ಬೌಚರ್

ಮಾರ್ಕ್ ಬೌಚರ್

 • Share this:
  ಮುಂಬೈ, 16 ಸೆಪ್ಟೆಂಬರ್ 2022: ದಕ್ಷಿಣ ಆಫ್ರಿಕಾದ ದಂತಕಥೆ, ಅಮೋಘ ದಾಖಲೆಯನ್ನು ಹೊಂದಿರುವ ಮಾರ್ಕ್ ಬೌಚರ್ ಅವರನ್ನು 2023 ಐಪಿಎಲ್‌ಗೆ ಮುಖ್ಯ ಕೋಚ್ ಆಗಿ ಮುಂಬೈ ಇಂಡಿಯನ್ಸ್‌ ನೇಮಕ ಮಾಡಿರುವುದಾಗಿ ಘೋಷಿಸಿದೆ. ಮಾರ್ಕ್ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ ಆಗಿ ಯಶಸ್ವಿ ವೃತ್ತಿ ಜೀವನವನ್ನು ನಡೆಸಿದ್ದಾರೆ. ವಿಕೆಟ್ ಕೀಪರ್ (Wicket Keeper) ಆಗಿ ಅವರು ದಾಖಲೆಯನ್ನೂ ಹೊಂದಿದ್ದಾರೆ. ನಿವೃತ್ತಿಯ ನಂತರ ದಕ್ಷಿಣ ಆಫ್ರಿಕಾದಲ್ಲಿ (South Africa) ಉನ್ನತ ದರ್ಜೆಯ ಕ್ರಿಕೆಟ್ (Cricket) ಫ್ರಾಂಚೈಸಿ ಟೈಟನ್ಸ್‌ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಮಾರ್ಕ್ (Mark) ಐದು ದೇಶೀಯ ಪಂದ್ಯಗಳಲ್ಲೂ ಯಶಸ್ವಿಯಾಗಿ ಆಡಿಸಿದ್ದಾರೆ. 2019 ರಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿತ್ತು. ಅವರು 11 ಟೆಸ್ಟ್‌ ಗೆಲುವುಗಳು, 12 ಏಕದಿನ ಪಂದ್ಯಗಳ ಗೆಲುವು ಮತ್ತು 23 ಟಿ20 ಗೆಲುವುಗಳನ್ನು ತಂಡಕ್ಕೆ ಒದಗಿಸಿದ್ದಾರೆ.

  ರಿಲಾಯನ್ಸ್‌ ಜಿಯೋ ಇನ್ಫೋಕಾಮ್‌ ಲಿಮಿಟೆಡ್‌ ಚೇರ್ಮನ್‌ ಆಕಾಶ್‌ ಎಂ ಅಂಬಾನಿ ಮಾತನಾಡಿ "ಮುಂಬೈ ಇಂಡಿಯನ್ಸ್‌ಗೆ ಮಾರ್ಕ್ ಅವರನ್ನು ಸ್ವಾಗತಿಸುವುದು ಹೆಮ್ಮೆಯ ಸಂಗತಿಯಾಗಿದೆ. ಅವರ ಅಪಾರ ಅನುಭವ ಮತ್ತು ಪರಿಣಿತಿಯಿಂದ ಹಲವು ತಂಡಗಳನ್ನು ಯಶಸ್ಸಿನ ಕಡೆಗೆ ಸಾಗಿಸಿದ್ದಾರೆ. ಎಂಐಗೆ ಅವರು ಅಪಾರ ಮೌಲ್ಯವನ್ನು ಒದಗಿಸುತ್ತಾರೆ ಮತ್ತು ಮುಂಬೈ ಇಂಡಿಯನ್ಸ್‌ನ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ" ಎಂದಿದ್ದಾರೆ.

  ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಆಗಿ ನೇಮಕವಾದ ಮಾರ್ಕ್ ಬೌಚರ್ ಮಾತನಾಡಿ "ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಆಗಿ ನೇಮಕವಾಗಿರುವುದು ಖುಷಿಯ ಸಂಗತಿ. ಈ ಫ್ರಾಂಚೈಸಿಯ ಇತಿಹಾಸ ಮತ್ತು ಸಾಧನೆಗಳನ್ನು ಗಮನಿಸಿದರೆ ವಿಶ್ವ ಕ್ರೀಡಾ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿ ಕ್ರೀಡಾ ತಂಡ ಇದಾಗಿದೆ. ಈ ಫಲಿತಾಂಶಗಳನ್ನು ಕಾಯ್ದುಕೊಳ್ಳುವ ಸವಾಲು ನನ್ನ ಮೇಲಿದೆ. ಉತ್ತಮ ನಾಯಕತ್ವ ಮತ್ತು ಆಟಗಾರರನ್ನು ಹೊಂದಿರುವ ಬಲಿಷ್ಠ ತಂಡ ಇದು. ಈ ತಂಡಕ್ಕೆ ಇನ್ನಷ್ಟು ಮೌಲ್ಯ ಒದಗಿಸುವ ಪ್ರಯತ್ನವನ್ನು ನಾನು ಮಾಡುತ್ತೇನೆ" ಎಂದಿದ್ದಾರೆ.  ಇದನ್ನೂ ಓದಿ: Yuzvendra Chahal: ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ! ಅವಳೇ ನನ್ನ ಶಕ್ತಿ ಎಂದ ಫೇಮಸ್​ ಆಟಗಾರ

  ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಸೈಮನ್ ಕ್ಯಾಟಿಚ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದು, ದಕ್ಷಿಣ ಆಫ್ರಿಕಾದ ದಂತಕಥೆ ಹಾಶೀಮ್ ಆಮ್ಲಾ ಬ್ಯಾಟಿಂಗ್ ಕೋಚ್ ಆಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸೈಮನ್‌ಗೆ ಕ್ರಿಕೆಟ್‌ನಲ್ಲಿ ಅಪಾರ ಅನುಭವವಿದೆ. ಅವರು ಸುಸ್ಥಿರ ಆಟಗಾರ ಎಂದು ಕರೆಯಲ್ಪಡುತ್ತಾರೆ. ಹಾಶಿಮ್ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಅದ್ಭುತ ಪ್ರದರ್ಶನಗಳಿಗೆ ಹೆಸರುವಾಸಿಯಾಗಿದ್ದಾರೆ. ಅತಿವೇಗದ 2000, 3000, 4000, 5000 ಮತ್ತು 6000 ಏಕ ದಿನ ಪಂದ್ಯ ರನ್‌ಗಳ ದಾಖಲೆಯನ್ನು ಅವರು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

  ನ್ಯೂಜಿಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜೇಮ್ಸ್ ಪಮೆಂಟ್ ಫೀಲ್ಡಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮತ್ತು ಹೋಮ್ ಕೋಚ್ ರಾಬಿನ್ ಪೀಟರ್ಸನ್ ತಂಡದ ಜನರಲ್ ಮ್ಯಾನೇಜರ್ ಆಗಿರುತ್ತಾರೆ. ಅವರಿಬ್ಬರೂ ಎಂಐ ಜೊತೆ ಬಹಳ ಹಿಂದಿನಿಂದಲೂ ಸಂಬಂಧ ಹೊಂದಿದ್ದಾರೆ. ಪ್ರಸ್ತುತ ಪಮೆಂಟ್ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದಾರೆ. ಪೀಟರ್ಸನ್ ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.

  ಇದನ್ನೂ ಓದಿ: IPL 2023: ಮುಂಬೈ-ಪಂಜಾಬ್​ ತಂಡಗಳಿಗೆ ಹೊಸ ಕೋಚ್​ ನೇಮಕ, ಭಾರತೀಯರನ್ನು ಬಿಟ್ಟು ವಿದೇಶಿಗರ ಮೊರೆ ಹೋಗಿದ್ಯಾಕೆ?

  ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಅಧ್ಯಕ್ಷರಾದ ಶ್ರೀ ಆಕಾಶ್ ಎಂ. ಅಂಬಾನಿ, "ಸೈಮನ್ ಮತ್ತು ಹಾಶಿಮ್ ಅವರನ್ನು ಎಂಐ ಕೇಪ್ ಟೌನ್ ಕೋಚಿಂಗ್ ತಂಡಕ್ಕೆ ಸ್ವಾಗತಿಸಲು ನನಗೆ ಸಂತೋಷವಾಗಿದೆ. ಜೇಮ್ಸ್ ಮತ್ತು ರಾಬಿನ್ ಅವರೊಂದಿಗೆ ನಾವು ದಕ್ಷಿಣ ಆಫ್ರಿಕಾದಲ್ಲಿ ಅತ್ಯುತ್ತಮ ತಂಡವನ್ನು ನಿರ್ಮಿಸುತ್ತೇವೆ. ಎಂಐ ಬ್ರ್ಯಾಂಡ್ ಕ್ರಿಕೆಟ್ ಅನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಕ್ರಿಕೆಟ್ ಪ್ರೀತಿಯ ದೇಶದಲ್ಲಿ ಎಂಐ ಮೌಲ್ಯಗಳನ್ನು ಮುಂದಕ್ಕೆ ಕೊಂಡೊಯ್ಯುತ್ತದೆ.
  Published by:Harshith AS
  First published: