ಐಪಿಎಲ್ ಆರಂಭಕ್ಕೂ ಮುನ್ನವೇ ಮುಂಬೈ-ಸನ್ ರೈಸರ್ಸ್ ನಡುವೆ ನಡೆಯಲಿದೆ ಹೈವೋಲ್ಟೇಜ್ ಪಂದ್ಯ!

ಐಪಿಎಲ್​ ಆರಂಭಕ್ಕೂ ಮೊದಲೇ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಹಾಗೂ ಸನ್​ ರೈಸರ್ಸ್​ ನಡುವೆ ಹೈವೋಲ್ಟೇಜ್​ ಪಂದ್ಯ ನಡೆಯಲಿದೆಯಂತೆ. ಐಪಿಎಲ್​ ಆರಂಭಕ್ಕೂ ಮೊದಲೇ ಇಬ್ಬರ ನಡುವೆ ಫೈಟ್​ ನಡೆಯೋದು ಹೇಗೆ ಅನ್ನೋ ಕುತೂಹಲವೇ? ಅದಕ್ಕೆ ಇಲ್ಲಿದೆ ಉತ್ತರ.

Rajesh Duggumane | news18-kannada
Updated:December 3, 2019, 11:22 AM IST
ಐಪಿಎಲ್ ಆರಂಭಕ್ಕೂ ಮುನ್ನವೇ ಮುಂಬೈ-ಸನ್ ರೈಸರ್ಸ್ ನಡುವೆ ನಡೆಯಲಿದೆ ಹೈವೋಲ್ಟೇಜ್ ಪಂದ್ಯ!
ರೋಹಿತ್​ ಶರ್ಮಾ-ಕೇನ್​ ವಿಲಿಯಮ್ಸ್​
  • Share this:
2020ರಲ್ಲಿ ನಡೆಯಲಿರುವ 13ಐಪಿಎಲ್​ ಸೀಸನ್​ಗೆ ಈಗಾಗಲೇ ಸಿದ್ಧತೆ ನಡೆದಿದೆ. ಯಾವ ತಂಡದಿಂದ ಯಾರು ಆಡಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ. ವಿಶೇಷ ಎಂದರೆ, ಐಪಿಎಲ್​ ಆರಂಭಕ್ಕೂ ಮೊದಲೇ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಹಾಗೂ ಸನ್​ ರೈಸರ್ಸ್​ ನಡುವೆ ಹೈವೋಲ್ಟೇಜ್​ ಪಂದ್ಯ ನಡೆಯಲಿದೆಯಂತೆ.

ಐಪಿಎಲ್​ ಆರಂಭಕ್ಕೂ ಮೊದಲೇ ಇಬ್ಬರ ನಡುವೆ ಫೈಟ್​ ನಡೆಯೋದು ಹೇಗೆ ಅನ್ನೋ ಕುತೂಹಲವೇ? ಅದಕ್ಕೆ ಇಲ್ಲಿದೆ ಉತ್ತರ. ಮುಂಬೈ ಇಂಡಿಯನ್ಸ್​, ಕೋಲ್ಕತ್ತಾ ನೈಟ್​ ರೈಡರ್ಸ್​​ ಹಾಗೂ ಸನ್​ ರೈರರ್ಸ್​ ಐಪಿಎಲ್​ಗೂ ಮೊದಲು ವಿದೇಶದಲ್ಲಿ ಕೆಲ ಸೌಹಾರ್ದ ಪಂದ್ಯ​ ಆಡಲಿವೆ.

ಇಂಡಿಯಾ ಬಿಟ್ಟು ಹೊರ ದೇಶದಲ್ಲಿ ಫ್ರೆಂಡ್ಲಿ ಮ್ಯಾಚ್​ ಆಡುವುದರ ಹಿಂದೆಯೂ ಒಂದು ಉದ್ದೇಶವಿದೆ. ಐಪಿಎಲ್ ಈಗಾಗಲೇ 12 ಸೀಸನ್​ ಪೂರ್ಣಗೊಳಿಸಿದೆ. ಭಾರತ ಅಲ್ಲದೆ, ವಿದೇಶದಲ್ಲೂ ಐಪಿಎಲ್​ಗೆ ಒಳ್ಳೆಯ ಟಿಆರ್​ಪಿ ಇದೆ. ಇದಕ್ಕೆ ಈಗ ಮತ್ತಷ್ಟು ಫೇಮ್​ ನೀಡುವ ಉದ್ದೇಶದಿಂದ ವಿದೇಶಿ ನೆಲದಲ್ಲಿ ಈ ಸೌಹಾರ್ದ ಮ್ಯಾಚ್​ ಆಡಲು ನಿರ್ಧರಿಸಲಾಗಿದೆ. ಈ ಮೂಲಕ ಮತ್ತಷ್ಟು ಪ್ರೇಕ್ಷಕರನ್ನು ಸೆಳೆಯುವ ಉದ್ದೇಶ ಇಟ್ಟುಕೊಳ್ಳಲಾಗಿದೆ.

ಇದನ್ನೂ ಓದಿ: 700 ಕೋಟಿ ವೆಚ್ಚ, 1.10 ಲಕ್ಷ ಪ್ರೇಕ್ಷಕರು: ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ತಂಡಗಳ ನಡುವೆ ಮೊದಲ ಮುಖಾಮುಖಿ

ಇನ್ನು, ಕೆಲವರಿಗೆ ಭಾರತಕ್ಕೆ ಆಗಮಿಸಿ ಐಪಿಎಲ್​ ನೋಡಲು ಸಾಧ್ಯವಾಗುವುದಿಲ್ಲ. ಅಂಥವರಿಗೂ ಈ ಪಂದ್ಯ ಸಹಕಾರಿಯಾಗಲಿದೆ. ಅವರದೇ ನೆಲದಲ್ಲಿ ಐಪಿಎಲ್​ ನೋಡಿದ ಖುಷಿ ಸಿಗಲಿದೆ.

ಅಂದಹಾಗೆ, ಈ ಮ್ಯಾಚ್​ ಎಲ್ಲಿ ನಡೆಯಲಿದೆ, ಯಾವಾಗ ನಡೆಯಲಿದೆ ಎನ್ನುವ ವಿಚಾರದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಶೀಘ್ರದಲ್ಲೇ ಈ ಬಗ್ಗೆ  ಮಾಹಿತಿ ಹೊರ ಬೀಳಲಿದೆ. ಐಪಿಎಲ್​ ಆರಂಭಕ್ಕೂ ಮೊದಲೇ ಹೈವೋಲ್ಟೇಜ್​ ಪಂದ್ಯ ನೋಡಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ.
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading