(VIDEO): ವಿಕೆಟ್ ಪಡೆದಾಗ ಈ ಬೌಲರ್ ಮೈದಾನದಲ್ಲೇ ಮಾಡ್ತಾನೆ ಮ್ಯಾಜಿಕ್; ಹೇಗೆ ಗೊತ್ತಾ?

ಶಂಸಿ ಐಪಿಎಲ್​ನಲ್ಲೂ ಪಾಲ್ಗೊಂಡಿದ್ದು, ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪರ 2016ರಲ್ಲಿ ಕಣಕ್ಕಿಳಿದಿದ್ದರು. ಆಡಿದ 4 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದರು.

ತಬ್ರೈಜ್ ಶಂಸಿ, ಸೌತ್ ಆಫ್ರಿಕಾ ಬೌಲರ್ 

ತಬ್ರೈಜ್ ಶಂಸಿ, ಸೌತ್ ಆಫ್ರಿಕಾ ಬೌಲರ್ 

 • Share this:
  ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ಬ್ಯಾಟ್ಸ್​ಮನ್​ ಶತಕ ಸಿಡಿಸಿದ ವೇಳೆ ಅಥವಾ ಬೌಲರ್ ವಿಕೆಟ್ ಪಡೆದುಕೊಂಡ ವೇಳೆ ಮೈದಾನದಲ್ಲಿ ವಿಶೇಷವಾಗಿ ಸಂಭ್ರಮಿಸುವ ಕೆಲವು ಆಟಗಾರರನ್ನು ನೀವು ನೋಡಿರುತ್ತೀರಿ.

  ವೆಸ್ಟ್​ ಇಂಡೀಸ್​ ತಂಡದ ಬೌಲರ್ ಶೆಲ್ಡನ್ ಕಾಟ್ರೆಲ್ ವಿಕೆಟ್ ಪಡೆದಾಗ ಸೆಲ್ಯೂಟ್ ಹೊಡೆದು ಸಂಭ್ರಮಿಸಿದರೆ, ಬ್ರಾವೋ ಡ್ಯಾನ್ಸ್ ಮೂಲಕ ರಂಚಿಸುತ್ತಾರೆ. ಇನ್ನು ದ. ಆಫ್ರಿಕಾದ ಇಮ್ರಾನ್ ತಾಹಿರ್ ಮೈದಾನದಲ್ಲೇ ಓಡಿ ಖುಷಿ ಹಂಚಿಕೊಳ್ಳುತ್ತಾರೆ.

  MSL 2019: South African Bowler Tabraiz Shamsi Performs Magic After Taking the wickets
  ತಬ್ರೈಜ್ ಶಂಸಿ, ಸೌತ್ ಆಫ್ರಿಕಾ ಬೌಲರ್


  ಐಪಿಎಲ್​ನಲ್ಲಿ ಭಾರತದ ಕೋಚ್​ಗಳಿಗೆ ಅವಕಾಶವಿಲ್ಲ; ಬೇಸರ ಹೊರಹಾಕಿದ ದ್ರಾವಿಡ್

  ಆದರೆ ಸೌತ್ ಆಫ್ರಿಕಾ ಬೌಲರ್ ತಬ್ರೈಜ್ ಶಂಸಿ ವಿಕೆಟ್ ಪಡೆದಾಗ ಮ್ಯಾಜಿಕ್ ಮಾಡಿ ಹೊಸ ರೀತಿಯಲ್ಲಿ ಸಂಭ್ರಮಾಚರಣೆ ಮಾಡುತ್ತಾರೆ. ಹೌದು, ತಾನು ವಿಕೆಟ್ ಪಡೆದಾಗ ಪ್ರೇಕ್ಷಕರತ್ತ ಮುಖಮಾಡಿ ಮ್ಯಾಜಿಕ್ ಮಾಡುವ ಮೂಲಕ ಸಂತಸ ಹಂಚಿಕೊಳ್ಳುತ್ತಾರೆ.

     ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಸಾಗುತ್ತಿರುವ ಎಂಎಸ್​ಎಲ್​​ ಟೂರ್ನಿಯಲ್ಲಿ ವಿಕೆಟ್ ಪಡೆದಾಗ ಶಂಸಿ ಮಾಡಿರುವ ಮ್ಯಾಜಿಕ್ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ ಶಂಸಿ ಮ್ಯಾಜಿಕ್ ಝಲಕ್ ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಟೂರ್ನಿಯಲ್ಲಿ ಇವರು ವಿಕೆಟ್ ಪಡೆದಾಗ ಮ್ಯಾಜಿಕ್ ಮಾಡಿ ಸಂಭ್ರಮಿಸಿದ್ದರು.

  ಗೇಲ್- ರಸೆಲ್ ಇಲ್ಲದ ವೆಸ್ಟ್​ ಇಂಡೀಸ್; ಭಾರತ ವಿರುದ್ಧದ ಸರಣಿಗೆ ಕೆರಿಬಿಯನ್ ತಂಡ ಪ್ರಕಟ!

     ಅಲ್ಲದೆ ಇತ್ತೀಚೆಗಷ್ಟೆ ಎಂಎಸ್​ಎಲ್​ನಲ್ಲಿ ವಿಕೆಟ್ ಪಡೆದಾಗ ತನ್ನ ಹೆಂಡತಿಗೆ ಮೈದಾನದಲ್ಲೆ ಫ್ಲೈಯಿಂಗ್ ಕಿಸ್ ನೀಡಿ ಭಾರೀ ಸುದ್ದಿಯಾಗಿದ್ದರು. ಶಂಸಿ ಐಪಿಎಲ್​ನಲ್ಲೂ ಪಾಲ್ಗೊಂಡಿದ್ದು, ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪರ 2016ರಲ್ಲಿ ಕಣಕ್ಕಿಳಿದಿದ್ದರು. ಆಡಿದ 4 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದರು.

  First published: