ದಕ್ಷಿಣ ಆಫ್ರಿಕಾದಲ್ಲಿ ಸಾಗುತ್ತಿರುವ ಮಾಂಝಿ ಸೂಪರ್ ಲೀಗ್ ಟೂರ್ನಿ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೆ ಆಫ್ರಿಕನ್ ಬೌಲರ್ ತಬ್ರೈಜ್ ಶಂಸಿ ವಿಕೆಟ್ ಪಡೆದಾಗ ಮೈದಾನದಲ್ಲೇ ಮ್ಯಾಜಿಕ್ ಮಾಡಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.
ಸದ್ಯ ಎಂಎಸ್ಎಲ್ನ ಪಾರ್ಲ್ ರಾಕ್ಸ್ ತಂಡದ ನಾಯಕ ಫಾಪ್ ಡುಪ್ಲೆಸಿಸ್ ಪಂದ್ಯ ಆರಂಭಕ್ಕೂ ಮುನ್ನ ಟಾಸ್ ಪ್ರಕ್ರಿಯೆ ನಡೆಯುತ್ತಿರುವಾಗ ಮಾತನಾಡಿದ ವಿಡಿಯೋ ಇಂಟರ್ನೆಟ್ನಲ್ಲಿ ಭಾರೀ ಹರಿದಾಡುತ್ತಿದೆ.
RCB: ಈವರೆಗೆ ಕ್ರಿಕೆಟ್ ಅನ್ನೇ ಆಡದ ಆಟಗಾರನನ್ನು ಖರೀದಿಸಲು ಮುಂದಾಗಿದೆ ಆರ್ಸಿಬಿ?
ಎಂಎಸ್ಎಲ್ನ 28ನೇ ಪಂದ್ಯದಲ್ಲಿ ಇಂದು ಪಾರ್ಲ್ ರಾಕ್ಸ್ ಹಾಗೂ ನೆಲ್ಸನ್ ಮಂಡೇಲ ತಂಡ ಮುಖಾಮುಖಿ ಆಗಿತ್ತು. ಇದರಲ್ಲಿ ಟಾಸ್ ಗೆದ್ದ ನೆಲ್ಸನ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಈ ಸಂದರ್ಭ ರಾಕ್ಸ್ ತಂಡದ ನಾಯಕನ ಬಳಿ ಸಂದರ್ಶಕ ತಂಡದಲ್ಲಿ ಏನಾದರು ಬದಲಾವಣೆ ಇದೆಯೇ? ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಡುಪ್ಲೆಸಿಸ್, "ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಹರ್ಡಸ್ ವಿಲ್ಜೋನ್ ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ. ಅವರು ನನ್ನ ತಂಗಿ ಜೊತೆ ಬೆಡ್ನಲ್ಲಿ ಮಲಗಿದ್ದಾರೆ" ಎಂದು ಹೇಳಿದ್ದಾರೆ.
ಈ ಮಾತನ್ನು ಕೇಳಿ ಸಂದರ್ಶಕ ಒಮ್ಮೆ ಶಾಕ್ ಆದರು. ಬಳಿಕ ತನ್ನ ಮಾತನ್ನು ಮುಂದುವರೆಸಿದ ಡುಪ್ಲೆಸಿಸ್, "ಹರ್ಡಸ್ ನನ್ನ ತಂಗಿಯನ್ನು ನಿನ್ನೆ ಮದುವೆಯಾಗಿದ್ದಾರೆ. ಹೀಗಾಗಿ ಅವರು ಪಂದ್ಯಕ್ಕೆ ಲಭ್ಯವಿಲ್ಲ. ವಿವಾಹದ ಘಳಿಗೆಯನ್ನು ಆನಂದಿಸುತ್ತಿದ್ದಾರೆ" ಎಂದು ಪ್ರತಿಕ್ರಿಯಿಸಿದರು.
(VIDEO): ತಿರುವನಂತಪುರಂ ಏರ್ಪೋರ್ಟ್ನಲ್ಲಿ ಸಂಜು ಸ್ಯಾಮ್ಸನ್ಗೆ ಸಿಕ್ಕ ಸ್ವಾಗತ ಹೇಗಿತ್ತು ಗೊತ್ತಾ?
One change - Viljoen is not playing today because he's lying in bed with my sister as they got married yesterday - Faf du Plessis
😂
#MSLT20 #NMBGvPR #PRvNMBG pic.twitter.com/IOlXZEn7nH
— FANTASY CRICKET TIPS 🏏 (@FantasyCricTeam) December 8, 2019
Rocks secure a home final.
What a match!
The Paarl Rocks win the match by 12 runs.
Fantastic effort by both teams but Rocks were a tad above the Giants.
Sum up that match using 1 emoji.#MSLT20 pic.twitter.com/TmAVS5fKAs
— Mzansi Super League 🔥 🇿🇦 🏏 (@MSL_T20) December 8, 2019
HOW ABOUT THAT?! A fighting 50 from @HeinoKuhn keeps @NMB_Giants in the contest! #mslt20 pic.twitter.com/OGgcGqcMcT
— Mzansi Super League 🔥 🇿🇦 🏏 (@MSL_T20) December 8, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ