(VIDEO): ಎಂಎಸ್​ಎಲ್​ನಲ್ಲಿ ಮಿ. 360 ಮ್ಯಾಜಿಕ್; ಎಬಿಡಿಯ ಆ ಒಂದು ಹೊಡೆತ ಹೇಗಿತ್ತು ಗೊತ್ತಾ?

ಸವಾಲಿನ ಗುರಿ ಬೆನ್ನಟ್ಟಿದ ನೆಲ್ಸನ್ ಮಂಡೇಲಾ ತಂಡ ಉತ್ತಮ ಆರಂಭ ಪಡೆದುಕೊಂಡಿಲ್ಲವಾದರು, ವಿಕೆಟ್ ಕೀಪರ್ ಬೆನ್ ಡಂಕ್ ಅವರ ಮನಮೋಹಕ ಆಟದ ನೆರವಿನಿಂದ ಗೆಲುವು ಸಾಧಿಸಿತು.

Vinay Bhat | news18-kannada
Updated:December 4, 2019, 9:24 AM IST
(VIDEO): ಎಂಎಸ್​ಎಲ್​ನಲ್ಲಿ ಮಿ. 360 ಮ್ಯಾಜಿಕ್; ಎಬಿಡಿಯ ಆ ಒಂದು ಹೊಡೆತ ಹೇಗಿತ್ತು ಗೊತ್ತಾ?
ಎಬಿ ಡಿವಿಲಿಯರ್ಸ್​
  • Share this:
ಬೆಂಗಳೂರು (ಡಿ. 04): ದಕ್ಷಿಣ ಆಫ್ರಿಕಾದಲ್ಲಿ ಸಾಗುತ್ತಿರುವ ಎಂಎಸ್​ಎಲ್​ನಲ್ಲಿ ಮಿ. 360 ಖ್ಯಾತಿಯ ಎಬಿ ಡಿವಿಲಿಯರ್ಸ್​ ಭಾರೀ ಸದ್ದು ಮಾಡುತ್ತಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನವೇ ಎಬಿಡಿ ಅಬ್ಬರಿಸುತ್ತಿದ್ದು, ಆರ್​ಸಿಬಿ ಅಭಿಮಾನಿಗಳಲ್ಲಿ ಖುಷಿ ನೀಡಿದೆ.

ನಿನ್ನೆ ನೆಲ್ಸನ್ ಮಂಡೇಲಾ ವಿರುದ್ಧ ನಡೆದ ಪಂದ್ಯದಲ್ಲಿ ಷ್ವಾನೆ ಸ್ಪಾರ್ಟನ್ಸ್​ ತಂಡ ಸೋಲುಂಡಿತಾದರು ಎಬಿಡಿ ಬ್ಯಾಟಿಂಗ್ ಎಲ್ಲರ ಹುಬ್ಬೇರುವಂತೆ ಮಾಡಿತು. ಸ್ಫೋಟಕ ಆಟವಾಡಿದ ಎಬಿಡಿ 360 ಡಿಗ್ರಿಯಲ್ಲಿ ಬ್ಯಾಟ್ ಬೀಸಿದರು. ಅದರಲ್ಲು ಚೆಂಡನ್ನು ಬ್ಯಾಟ್​ನಿಂದ ಹಿಂದಕ್ಕಟ್ಟುವ ಇವರ ಫೇಮಸ್ ರಿವರ್ಸ್​ ಸ್ವೀಪ್ ಶಾಟ್ ನೋಡಿ ಬೌಲರ್ ಒಮ್ಮೆ ದಂಗಾದರು.



ಆರ್​ಸಿಬಿಯಲ್ಲಿ ಕಳಪೆ ಪ್ರದರ್ಶನ; ಆದ್ರೆ, ಬೇರೆ ತಂಡಕ್ಕೋಗಿ ಕಪ್ ಎತ್ತಿಹಿಡಿದರು ಈ ಆಟಗಾರರು!

38 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ಎಬಿಡಿ 63 ರನ್ ಚಚ್ಚಿದರೆ, ವ್ಯಾನ್ ಮಲ್ಡರ್ 41 ಎಸೆತಗಳಲ್ಲಿ 52 ರನ್ ಬಾರಿಸಿದರು. ಪರಿಣಾಮ ಷ್ವಾನೆ ಸ್ಪಾರ್ಟನ್ಸ್​ ತಂಡ ನಿಗದಿತ 20 ಓವರ್​ನಲ್ಲಿ 5 ವಿಕೆಟ್ ಕಳೆದುಕೊಂಡು 188 ರನ್ ಬಾರಿಸಿತು.

ಈ ಸವಾಲಿನ ಗುರಿ ಬೆನ್ನಟ್ಟಿದ ನೆಲ್ಸನ್ ಮಂಡೇಲಾ ತಂಡ ಉತ್ತಮ ಆರಂಭ ಪಡೆದುಕೊಂಡಿಲ್ಲವಾದರು, ವಿಕೆಟ್ ಕೀಪರ್ ಬೆನ್ ಡಂಕ್ ಅವರ ಮನಮೋಹಕ ಆಟದ ನೆರವಿನಿಂದ ಗೆಲುವು ಸಾಧಿಸಿತು. ಡಂಕ್ 54 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ಅಜೇಯ 99 ರನ್ ಗಳಿಸಿದರು. ಮಾರ್ಕೊ ಮರೈಸ್ ಅಜೇಯ 38 ರನ್ ಕಲೆಹಾಕಿದರು.

 


IPL 2020: ಸ್ಟಾರ್​ ಆಟಗಾರರ ಮೂಲ ಬೆಲೆ ಪ್ರಕಟ: ಪಟ್ಟಿಯಲ್ಲಿರುವುದು ಏಕೈಕ ಭಾರತೀಯ ಕ್ರಿಕೆಟಿಗ

ಈ ಮೂಲಕ ನೆಲ್ಸನ್ ಮಂಡೇಲಾ ತಂಡ 19.4 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 192 ರನ್ ಬಾರಿಸುವ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಅಜೇಯ 99 ರನ್ ಸಿಡಿಸಿದ ಬೆನ್ ಡಂಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

 

First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ