Virat Kohli: ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ; ಮಾಜಿ ಆಟಗಾರರ ರಿಯಾಕ್ಷನ್ಸ್ ಇವು

Former players’ opinion on Virat Kohli captaincy saga: ವಿರಾಟ್ ಕೊಹ್ಲಿ ಟಿ20 ಮತ್ತು ಓಡಿಐ ತಂಡಗಳ ನಾಯಕತ್ವ ಬಿಟ್ಟುಕೊಟ್ಟ ಬಳಿಕ ಇದೀಗ ಟೆಸ್ಟ್ ತಂಡದ ಕ್ಯಾಪ್ಟನ್ಸಿಯನ್ನೂ ತ್ಯಜಿಸಿದ್ಧಾರೆ. ಈ ಬಗ್ಗೆ ಕೆಲ ಮಾಜಿ ಆಟಗಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ನವದೆಹಲಿ: ವಿರಾಟ್ ಕೊಹ್ಲಿ (Virat Kohli) ಕೆಲ ತಿಂಗಳ ಹಿಂದೆ ಟಿ20 ವಿಶ್ವಕಪ್​ಗೆ ಮುನ್ನ ಟಿ20 ಕ್ಯಾಪ್ಟನ್ಸಿಗೆ ವಿದಾಯ ಹೇಳಿ ಅಚ್ಚರಿ ವ್ಯಕ್ತಪಡಿಸಿದ್ದರು. ಈಗ ಸೌತ್ ಆಫ್ರಿಕಾ ಟೆಸ್ಟ್ ಸರಣಿ ಬಳಿಕ ಅಷ್ಟೇ ಶಾಕ್ ಕೊಟ್ಟಿದ್ಧಾರೆ. ಟೆಸ್ಟ್ ತಂಡದ ನಾಯಕತ್ವಕ್ಕೂ ಅವರು ರಾಜೀನಾಮೆ ಕೊಡುವ ನಿರ್ಧಾರವನ್ನು ನಿನ್ನೆ ಮಕರ ಸಂಕ್ರಾಂತಿ ದಿನ ಪ್ರಕಟಿಸಿದ್ದರು. ಈ ಮೂಲಕ ಮೂರು ಮಾದರಿ ಕ್ರಿಕೆಟ್ ತಂಡಗಳ ಕ್ಯಾಪ್ಟನ್ಸಿಯಿಂದ ವಿರಾಟ್ ಕೊಹ್ಲಿ ಹಿಂದೆಸರಿದಂತಾಗಿದೆ.

  ಕೊಹ್ಲಿ ಅವರ ಟೆಸ್ಟ್ ಕ್ಯಾಪ್ಟನ್ಸಿ ತ್ಯಜಿಸುವ ನಿರ್ಧಾರ ಇಷ್ಟು ಬೇಗ ಬರುತ್ತದೆ ಎಂಬುದು ಬಹುತೇಕ ಎಲ್ಲರಿಗೂ ಅನಿರೀಕ್ಷಿತ ಎನಿಸಿದೆ. ಬಹಳ ಕ್ಷಿಪ್ರವಾಗಿ ಈ ಬೆಳವಣಿಗೆಗಳು ಆಗಿವೆ. ಟಿ20 ವಿಶ್ವಕಪ್ ಮತ್ತು ಐಪಿಎಲ್​ಗೆ ಮುನ್ನ ಅವರು ದಿಢೀರ್ ಎಂಬಂತೆ ಟಿ20 ತಂಡದ ಕ್ಯಾಪ್ಟನ್ಸಿ ತ್ಯಜಿಸುವ ನಿರ್ಧಾರ ಪ್ರಕಟಿಸಿದರು. ಸೌತ್ ಆಫ್ರಿಕಾ ಕ್ರಿಕೆಟ್ ಸರಣಿಗೆ ಮುನ್ನ ವಿರಾಟ್ ಕೊಹ್ಲಿ ಅವರಿಂದ ಓಡಿಐ ಕ್ಯಾಪ್ಟನ್ಸಿಯನ್ನ ಹಿಂಪಡೆಯಲಾಯಿತು. ಇದು ಬಹಳಷ್ಟು ವಿವಾದಕ್ಕೂ ಎಡೆ ಆಯಿತು. ಈಗ ಸೌತ್ ಆಫ್ರಿಕಾ ಟೆಸ್ಟ್ ಸರಣಿ ಬಳಿಕ ಟೆಸ್ಟ್ ತಂಡದ ನಾಯಕತ್ವಕ್ಕೂ ಕೊಹ್ಲಿ ವಿದಾಯ ಹೇಳಿ ನಿರ್ಧಾರ ಪ್ರಕಟಿಸಿದ್ದಾರೆ. ಇದೆಲ್ಲ ಕೆಲವೇ ತಿಂಗಳ ಅಂತರದಲ್ಲಿ ಘಟಿಸಿವೆ.

  2014ರಲ್ಲಿ ಎಂಎಸ್ ಧೋನಿಯಿಂದ ಟೆಸ್ಟ್ ನಾಯಕತ್ವ ಪಡೆದ ವಿರಾಟ್ ಕೊಹ್ಲಿ ಅವರ ಕ್ಯಾಪ್ಟನ್ಸಿ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ. ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ 40 ಗೆಲುವುಗಳನ್ನ ಪಡೆದಿದೆ. ನಾಯಕತ್ವದ ಶೈಲಿ ಹಾಗೂ ಅಂಕಿಅಂಶಗಳಲ್ಲಿ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ಕ್ಯಾಪ್ಟನ್ ಎಂದು ಪರಿಗಣಿತವಾಗಿದ್ದಾರೆ.

  ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ವಿದಾಯಕ್ಕೆ ಕಾರಣ ಏನು?

  ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಲು ಕಾರಣ ಏನೆಂದು ಎಲ್ಲಿಯೂ ಸ್ಪಷ್ಟವಾಗಿ ಗೊತ್ತಿಲ್ಲ. ಕಳೆದ ಒಂದು ಅಥವಾ ಎರಡು ವರ್ಷಗಳಿಂದ ಕೊಹ್ಲಿ ಅವರ ಫಾರ್ಮ್ ಕುಂದಿದೆ. ಅವರ ಬ್ಯಾಟಿಂದ ಬಿಗ್ ಸ್ಕೋರ್ಸ್ ಬರುತ್ತಿಲ್ಲ. ಒಬ್ಬ ಬ್ಯಾಟರ್ ಅಗಿ ವಿರಾಟ್ ಕೊಹ್ಲಿ ಮೊದಲಿನಂತಿಲ್ಲ ಎಂಬ ಟೀಕೆಗಳು ಬಹಳಷ್ಟು ಕೇಳಿಬರುತ್ತಿವೆ. ನಾಯಕತ್ವದ ಭಾರ ಇದಕ್ಕೆ ಕಾರಣ ಇರಬಹುದು ಎಂಬ ಅನಿಸಿಕೆಗಳ ಮಧ್ಯೆ ಕೊಹ್ಲಿ ಕ್ಯಾಪ್ಟನ್ಸಿಯಿಂದ ಹಿಂದಕ್ಕೆ ಸರಿದಿರಬಹುದು ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: ದೇಶಿ Cricketನಲ್ಲಿ ತಲೆ ಎತ್ತಿದ Fixing ಭೂತ: ಇಷ್ಟು ಮೊತ್ತಕ್ಕೆ ಆಟಗಾರನಿಗೆ ಆಫರ್!

  ಅದೇನೇ ಇರಲಿ, ಅವರ ದಿಢೀರ್ ನಿರ್ಧಾರಗಳು ಹಲವರಿಗೆ ಅನಿರೀಕ್ಷಿತ ಎನಿಸಿರುವುಂತೂ ಹೌದು. ಟೀಮ್ ಇಂಡಿಯಾದ ಕೆಲ ಮಾಜಿ ಮುಖ್ಯ ಆಯ್ಕೆಗಾರರು ಕೊಹ್ಲಿ ಕ್ಯಾಪ್ಟನ್ಸಿ ವಿದಾಯಕ್ಕೆ ತೀವ್ರ ಅಚ್ಚರಿ ವ್ಯಕ್ತಪಡಿಸಿದ್ಧಾರೆ.

  ಮಾಜಿ ಚೀಫ್ ಸೆಲೆಕ್ಟರ್ ಎಂಎಸ್​ಕೆ ಪ್ರಸಾದ್ ಅವರು ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ಧಾರೆ. “ವಿರಾಟ್ ಕೊಹ್ಲಿ ಟೆಸ್ಟ್ ಕ್ಯಾಪ್ಟನ್ಸಿ ಯಾಕೆ ತ್ಯಜಿಸಿದರೋ ಈಗಲೂ ಕಾರಣ ತಿಳಿದುಬರುತ್ತಿಲ್ಲ. ಅವರು ಕ್ಯಾಪ್ಟನ್ ಮತ್ತು ಪ್ಲೇಯರ್ ಆಗಿ ಟೆಸ್ಟ್ ಕ್ರಿಕೆಟ್​ಗೆ ಇನ್ನೂ ಬಹಳಷ್ಟು ಕೊಡುವುದು ಇದೆ” ಎಂದು ಮಾಜಿ ವಿಕೆಟ್ ಕೀಪರ್ ಕೂಡ ಆದ ಎಂಎಸ್​ಕೆ ಪ್ರಸಾದ್ ಹೇಳಿದ್ಧಾರೆ.

  ಕಿರಣ್ ಮೋರೆ ಆಘಾತ:

  ಮತ್ತೊಬ್ಬ ಮಾಜಿ ಮುಖ್ಯ ಆಯ್ಕೆಗಾರ ಮತ್ತು ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಮಾತನಾಡಿ, “ವಿರಾಟ್ ಕೊಹ್ಲಿ ಈ ರೀತಿ ವಿದಾಯ ಹೇಳುವಂತಾಗಿದ್ದು ಬಹಳ ಬೇಸರ ತರಿಸಿತು. ನಾನು ಬಿಸಿಸಿಐ ಬಗ್ಗೆ ಮಾತನಾಡುತ್ತಿಲ್ಲ, ಆದರೆ, ವಿರಾಟ್ ಕೊಹ್ಲಿ ಅವರನ್ನ ಜನರು ನಡೆಸಿಕೊಂಡ ರೀತಿ, ಅವರನ್ನ ಟೀಕಿಸಿದ ರೀತಿ ಸರಿಯಾಗಿರಲಿಲ್ಲ. ಕೊಹ್ಲಿ ಸಾಕಷ್ಟು ಕ್ರಿಕೆಟ್ ಆಡಿದವರು. ಭಾರತದ ಅನೇಕ ಗೆಲುವಿಗೆ ಕಾರಣರಾದವರು. ಯಾವುದೇ ಮಾದರಿ ಕ್ರಿಕೆಟ್ ಆಡಲಿ ಅವರ ಆಟದ ಗುಣಮಟ್ಟವೇ ಉಚ್ಚತಮವಾಗಿರುತ್ತಿತ್ತು. ಗೆಲುವು ಸಾಧಿಸಬೇಕೆಂಬ ಹಪಾಹಪಿಯ ವ್ಯಕ್ತಿತ್ವವನ್ನು ಅವರು ತೋರ್ಪಡಿಸುತ್ತಿದ್ದರು. ಜನರು ಇಂಥ ಆಟಗಾರನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದನ್ನು ಕಂಡು ಬಹಳ ನಿರಾಸೆ ಆಗುತ್ತದೆ. ನನಗೆ ಅವರು ಟಿ20 ಅಥವಾ ಓಡಿಐ ಕ್ಯಾಪ್ಟನ್ಸಿಯಿಂದ ಕೆಳಗಿಳಿದದ್ದು ಬೇಸರ ಮೂಡಿಸಲಿಲ್ಲ. ಅದು ಜೀವನದ ಒಂದು ಭಾಗ. ಆದರೆ, ಅವರನ್ನ ಜನರು ಟೀಕಿಸುತ್ತಿರುವುದು ಸರಿಯಲ್ಲ ಎನಿಸುತ್ತದೆ” ಎಂದು ಹೇಳಿದ್ಧಾರೆ.

  ಇದನ್ನೂ ಓದಿ: Paige Spiranac: ವಿಶ್ವದ ಹಾಟೆಸ್ಟ್ ಗಾಲ್ಫ್ ಆಟಗಾರ್ತಿಯ ನಗ್ನ ಚಿತ್ರ ವೈರಲ್ ಮಾಡಿದ್ದ ಪ್ರಿಯಕರ! ಇದೆಂಥಾ ಸೇಡು..

  ಮತ್ತೊಬ್ಬ ಮಾಜಿ ವಿಕೆಟ್ ಕೀಪರ್ ಚಂದ್ರಕಾಂತ್ ಪಂಡಿತ್, ಮಾಜಿ ವೇಗದ ಬೌಲರ್ ಮದನ್ ಲಾಲ್ ಮೊದಲಾದವರೂ ಕೂಡ ವಿರಾಟ್ ಕೊಹ್ಲಿ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದು, ಅವರ ಕ್ಯಾಪ್ಟನ್ಸಿ ವೈಖರಿಯನ್ನ ಹೊಗಳಿದ್ದಾರೆ.
  Published by:Vijayasarthy SN
  First published: