MS Dhoni: ತಂಡದವರೊಂದಿಗೆ ಧೋನಿ ನಡೆಸುತ್ತಿದ್ದ ಮೀಟಿಂಗ್ ಕೇವಲ 2 ನಿಮಿಷ ಮಾತ್ರ ಎಂದ ಪಾರ್ಥಿವ್

ತಾನು ಚೆನ್ನೈ ಸೂಪರ್ ಕಿಂಗ್ಸ್‌ ಬಿಟ್ಟು ಬೇರೆ ಬೇರೆ ತಂಡಗಳ ಪರ ಆಡಿದ್ದರೂ ಧೋನಿಯ ನಾಯಕತ್ವದಲ್ಲಿ ಇಲ್ಲೀವರೆಗೂ ಕೆಲವೊಂದು ವಿಚಾರಗಳು ಬದಲಾಗದಿರುವುದನ್ನು ಗಮನಿಸಿರುವುದಾಗಿ ಪಾರ್ಥಿವ್ ಹೇಳಿಕೊಂಡಿದ್ದಾರೆ.

news18-kannada
Updated:May 29, 2020, 11:25 AM IST
MS Dhoni: ತಂಡದವರೊಂದಿಗೆ ಧೋನಿ ನಡೆಸುತ್ತಿದ್ದ ಮೀಟಿಂಗ್ ಕೇವಲ 2 ನಿಮಿಷ ಮಾತ್ರ ಎಂದ ಪಾರ್ಥಿವ್
ಎಂ ಎಸ್ ಧೋನಿ ಹಾಗೂ ಪಾರ್ಥಿವ್ ಪಟೇಲ್.
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಪರ ಕಣಕ್ಕಿಳಿದ ಪಾರ್ಥಿವ್ ಪಟೇಲ್, ನಾಯಕ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಯಾವರೀತಿ ಮುನ್ನಡೆಸುತ್ತಿದ್ದರು ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ತಂಡದ ಆಟಗಾರರೊಂದಿಗೆ ಧೋನಿ ನಡೆಸುತ್ತಿದ್ದ ಮೀಟಿಂಗ್ ಕೇವಲ ಎರಡು ನಿಮಿಷ ಮಾತ್ರ ಎಂದು ಗುಜರಾತ್ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಹೇಳಿದ್ದಾರೆ.

2008ರ ಮೊದಲ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ ತಂಡದಲ್ಲಿದ್ದ ಪಟೇಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆ ಆವೃತ್ತಿಯಲ್ಲಿ ಚೆನ್ನೈ ತಂಡ ಫೈನಲ್‌ಗೆ ಬರಲು ಪ್ರಮುಖ ಪಾತ್ರವಹಿಸಿದ್ದರು. 13 ಪಂದ್ಯಗಳಲ್ಲಿ 302 ರನ್‌ಗಳ ಕೊಡುಗೆ ನೀಡಿದ್ದರು. ಫೈನಲ್‌ ಪಂದ್ಯ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದಿತ್ತು. ಆರಂಭಿಕ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್‌ ಆಗಿ ಮಿನುಗಿತ್ತು.

ಶಾಲಾ ಶಿಕ್ಷಕನ ಮಗನ ಜೀವನ ಬದಲಿಸಿದ ಇರ್ಫಾನ್ ಪಠಾಣ್: ಐಪಿಎಲ್ ಮೂಲಕ ಎಂಟ್ರಿ ಕೊಡಲಿದ್ದಾರೆ ಯುವ ಬ್ಯಾಟ್ಸ್​​ಮನ್

'ಧೋನಿ ನಡೆಸುತ್ತಿದ್ದ ಟೀಂ ಮೀಡಿಂಗ್‌ 2 ನಿಮಿಷಗಳಿಂದ ಅಧಿಕ ಮೀರುತ್ತಿರಲಿಲ್ಲ. 2008ರ ಐಪಿಎಲ್‌ ಫೈನಲ್‌ ಪಂದ್ಯಕ್ಕೂ ಮುನ್ನ ಧೋನಿ ನಡೆಸಿದ ಮೀಟಿಂಗ್‌ ಕೇವಲ 2 ನಿಮಿಷದ್ದು ಅಷ್ಟೆ. 2019ರಲ್ಲೂ ಮೀಟಿಂಗ್ 2 ನಿಮಿಷದಲ್ಲಿ ಮಿಗಿದಿತ್ತು ಅಂತ ನಾನು ನಿಖರವಾಗಿ ಹೇಳಬಲ್ಲೆ. ತಂಡದ ಆಟಗಾರರು ಏನನ್ನು ಬಯಸುತ್ತಾರೆ ಅಂತ ಧೋನಿ ಸ್ಪಷ್ಟವಾಗಿ ಅರಿತಿದ್ದರು,' ಎಂದು ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತನಾಡುತ್ತ ಪಾರ್ಥಿವ್ ವಿವರಿಸಿದ್ದಾರೆ.

'ಆಟಗಾರರ ಸಂಯೋಜನೆ ಮತ್ತು ಪ್ರತಿಯೊಬ್ಬ ಆಟಗಾರರ ಜವಾಬ್ದಾರಿಗಳ ಕುರಿತಾಗಿ ಧೋನಿ ಸ್ಪಷ್ಟತೆ ಹೊಂದಿದ್ದರು. ರಾಜಸ್ಥಾನ ತಂಡ 2008ರಲ್ಲಿ ಒಂದು ತಂಡವಾಗಿ ಆಡಿತ್ತು. ಹೀಗಾಗಿ ಯಾವುದೇ ಕಾರಣಕ್ಕೂ ರಾಯಲ್ಸ್‌ ಪಡೆಯನ್ನು ಲಘುವಾಗಿ ಪರಿಗಣಿಸಿರಲಿಲ್ಲ,' ಎಂದು ಪಾರ್ಥಿವ್‌ ಸ್ಮರಿಸಿದ್ದಾರೆ.

ತಾನು ಚೆನ್ನೈ ಸೂಪರ್ ಕಿಂಗ್ಸ್‌ ಬಿಟ್ಟು ಬೇರೆ ಬೇರೆ ತಂಡಗಳ ಪರ ಆಡಿದ್ದರೂ ಧೋನಿಯ ನಾಯಕತ್ವದಲ್ಲಿ ಇಲ್ಲೀವರೆಗೂ ಕೆಲವೊಂದು ವಿಚಾರಗಳು ಬದಲಾಗದಿರುವುದನ್ನು ಗಮನಿಸಿರುವುದಾಗಿ ಪಾರ್ಥಿವ್ ಹೇಳಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಯಶಸ್ವಿ ತಂಡವಾಗಿ ಗುರುತಿಸಿಕೊಳ್ಳಲು ಇಂಥ ಅಂಶಗಳು ಕಾರಣ ಎಂದು ಪಟೇಲ್ ಹೇಳಿದ್ದಾರೆ.

ನಾವು ಹಿಂದೆ ಸರಿಯಲು ರೆಡಿಯಿಲ್ಲ: IPL ಬಗ್ಗೆ ಪಾಕ್ ಕ್ಯಾತೆ..!2010 ರವರೆಗೆ ಸಿಎಸ್‌ಕೆ ತಂಡದ ಪರವಾಗಿ ಆಡಿದ ಪಾರ್ಥಿವ್, ಬಳಿಕ ಕೊಚ್ಚಿ ಟಸ್ಕರ್ಸ್‌ ಕೇರಳ, ಡೆಕನ್‌ ಚಾರ್ಜರ್ಸ್‌ (ಈಗಿನ ಸನ್‌ರೈಸರ್ಸ್‌ ಹೈದರಾಬಾದ್), ಮುಂಬೈ ಇಂಡಿಯನ್ಸ್‌ ಮತ್ತು ಆರ್‌ಸಿಬಿ ಪರ 2014ರಲ್ಲಿ ಮೊದಲ ಬಾರಿ ಆಡಿದ್ದರು. ಬಳಿಕ 2018ರಲ್ಲಿ ಮತ್ತೆ ಕೊಹ್ಲಿ ತಂಡಕ್ಕೆ ಕಾಲಿಟ್ಟ ಪಟೇಲ್ ಕಳೆದ ಎರಡು ವರ್ಷಗಳಿಂದ ಪ್ರಮುಖ ಓಪನರ್ ಆಗಿದ್ದಾರೆ.

First published: May 29, 2020, 9:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading