ಗೋಲ್ಡನ್ ಮತ್ತು ನೇರಳೆ ಬಣ್ಣದ ಬಟ್ಟೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2021 ಪ್ರೋಮೋದಲ್ಲಿ ಮಿಂಚಿದ್ದಾರೆ. ತಲೈವಾ ಧೋನಿಯ ಈ ಹೊಸ ಅವತಾರಕ್ಕೆ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 14 ನೇ ಆವೃತ್ತಿಯ ದ್ವಿತೀಯಾರ್ಧದ ಹೊಸ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಕೊರೊನಾ ಕಾರಣದಿಂದ ಐಪಿಎಲ್ 14ನೇ ಆವೃತ್ತಿಯನ್ನು ಮೇ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಐಪಿಎಲ್ ಸೆ.19ರಿಂದ ಶುರುವಾಗುತ್ತಿದ್ದು, ಧೋನಿ ಭರ್ಜರಿಯಾಗಿ ಪ್ರೇಕ್ಷಕರನ್ನು ಆಹ್ವಾನಿಸಿದ್ದಾರೆ.
ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿರುವ ಧೋನಿ ಐಪಿಎಲ್ ಅನ್ನು ಸಿನಿಮಾಗೆ ಹೋಲಿಸಿದ್ದಾರೆ. ಇಂಟರ್ವಲ್ ನಂತರ ದ್ವಿತೀಯಾರ್ಧದಲ್ಲಿ ಬಿರುಗಾಳಿ ಬರಲಿದೆ. ಇದರಲ್ಲಿ ಡ್ರಾಮಾ, ಸಸ್ಪೆನ್ಸ್, ಕ್ಲೈಮ್ಯಾಕ್ಸ್, ಗಬ್ಬರ್ (ಶಿಖರ್ ಧವನ್), ಹಿಟ್ಮ್ಯಾನ್ (ರೋಹಿತ್ ಶರ್ಮಾ) ಎಲ್ಲರೂ ಇದ್ದಾರೆ. ಅಸಲಿ ಪಿಕ್ಷರ್ ಇನ್ನು ಬಾಕಿ ಇದೆ ಎನ್ನುವ ಮೂಲಕ ನೋಡುಗರಲ್ಲಿ ಕುತೂಹಲ ಮೂಡಿಸಿದ್ದಾರೆ.
🎺🎺🎺 - #VIVOIPL 2021 is BACK and ready to hit your screens once again!
Time to find out how this blockbuster season concludes, 'coz #AsliPictureAbhiBaakiHai!
Starts Sep 19 | @StarSportsIndia & @DisneyPlusHS pic.twitter.com/4D8p7nxlJL
— IndianPremierLeague (@IPL) August 20, 2021
ಧೋನಿ ನೇತೃತ್ವದ ಸಿಎಸ್‌ಕೆ ತಂಡ ಆಡಿದ 7 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಅಗ್ರ ತಂಡಗಳಲ್ಲಿ ಒಂದಾಗಿದೆ. ಸೀಸನ್ ಮುಂದೂಡುವ ಮುನ್ನ ಸಿಎಸ್‌ಕೆ ಎರಡನೇ ಸ್ಥಾನದಲ್ಲಿತ್ತು. ಐಪಿಎಲ್ ಟೂರ್ನಿಯ ಸೆಕೆಂಡ್ ಹಾಫ್ ಸೆಪ್ಟೆಂಬರ್ 19 ರಂದು ದುಬೈನಲ್ಲಿ ಆರಂಭವಾಗಲಿದ್ದು. ಸಿಎಸ್‌ಕೆ ತಮ್ಮ ಸಾಂಪ್ರದಾಯಿಕ ಎದುರಾಳಿಯಾದ ಮುಂಬೈ ಇಂಡಿಯನ್ಸ್‌ನೊಂದಿಗೆ ಸೆಣಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ