• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • (VIDEO): ಕಾಶ್ಮೀರದಲ್ಲಿ ಧೋನಿಗೆ ಅವಮಾನ; MSD ಎದುರೇ ಪಾಕ್ ಕ್ರಿಕೆಟಿಗನ ಹೆಸರು ಕೂಗಿದ ಕಿಡಿಗೇಡಿಗಳು

(VIDEO): ಕಾಶ್ಮೀರದಲ್ಲಿ ಧೋನಿಗೆ ಅವಮಾನ; MSD ಎದುರೇ ಪಾಕ್ ಕ್ರಿಕೆಟಿಗನ ಹೆಸರು ಕೂಗಿದ ಕಿಡಿಗೇಡಿಗಳು

ಎಂ ಎಸ್ ಧೋನಿ

ಎಂ ಎಸ್ ಧೋನಿ

ಕಾಶ್ಮೀರದಲ್ಲಿ ಧೋನಿಯನ್ನ ಕಂಡಾಗ ಅಲ್ಲಿನ ಕಿಡಿಗೇಡಿಗಳ ಗುಂಪೊಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಹೆಸರು ‘ಬೂಮ್ ಬೂಮ್ ಅಫ್ರಿದಿ’ ಎಂದು ಕೂಗುವ ಮುಖೇನ ಅವಮಾನ ಮಾಡಿದ್ದಾರೆ.

 • News18
 • 3-MIN READ
 • Last Updated :
 • Share this:
  top videos

   ಬೆಂಗಳೂರು (. 08): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ನಿಂದ ಬಿಡುವು ತೆಗೆದುಕೊಂಡು ಕಾಶ್ಮೀರದಲ್ಲಿ ಸೈನಿಕರೊಂದಿಗೆ ಸೇನಾ ಕಾರ್ಯಾಚರಣೆಯಲ್ಲಿ ಬ್ಯುಸಿಯಾಗಿದ್ದಾರೆ.

   ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯವರೆಗೂ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಧೋನಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಸೈನಿಕರೊಂದಿಗೆ ಅಮೂಲ್ಯವಾದ ಮಾತುಗಳನ್ನು ಆಡಿ, ಹಾಡು ಹಾಡಿ ಯೋಧರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ.

   ಸದ್ಯ 370 ಆರ್ಟಿಕಲ್ ಅನ್ನು ರದ್ದುಗೊಳಿಸಿದ ಕಾರಣ ಕಾಶ್ಮೀರದಲ್ಲಿ ಹೈ ಅಲರ್ಟ್ ಆಗಿರುವ ಸೇನೆಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತಿದೆ.

   ಈ ಮಧ್ಯೆ ಕಾಶ್ಮೀರದಲ್ಲಿ ಧೋನಿಯನ್ನ ಅವಮಾನ ಮಾಡಿದ್ದ ಹಳೇ ವಿಡಿಯೋ ಒಂದು ಇಂಟರ್​ನೆಟ್​ನಲ್ಲಿ ಭಾರೀ ವೈರಲ್ ಆಗುತ್ತಿದೆ. ಒಂದು ವರ್ಷಕ್ಕೂ ಹಳೆಯದಾದ ವಿಡಿಯೋ ಇದಾಗಿದ್ದು, ಸೇನಾ ತರಬೇತಿಯಲ್ಲಿ ಭಾಗಿಯಾಗಿದ್ದ ಧೋನಿ ಎದುರೇ ಸ್ಥಳೀಯ ಕಿಡಿಗೇಡಿಗಳ ಗುಂಪೊಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೆಸರು ಕೂಗುವ ಮುಖೇನ ಅವಮಾನ ಮಾಡಿದ್ದರು. ಬೂಮ್ ಬೂಮ್ ಅಫ್ರಿದಿ ಎಂದು ಘೋಷಣೆ ಕೂಗಿರುವ ಹಳೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣ ವೈರಲ್ ಆಗುತ್ತಿದೆ.

   GT20 Canada 2019: ಮೋಸ ಹೋದ್ರಾ ಯುವರಾಜ್ ಸಿಂಗ್?; ಸಂಭಾವನೆ ಸಿಗಲಿಲ್ಲವೆಂದು ಪ್ರತಿಭಟನೆ

   ಕೆಲ ಕಾಶ್ಮೀರಿಗರು ಅಫ್ರಿದಿಯನ್ನು ಬೆಂಬಲಿಸಲು ಬಲವಾದ ಕಾರಣವೂ ಇದೆ. ಈ ಹಿಂದೆ ಅಫ್ರಿದಿ ಕಾಶ್ಮೀರದ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಭಾರತಕ್ಕಾಗಲೀ, ಪಾಕಿಸ್ತಾನಕ್ಕಾಗಲಿ ಯಾವುದೇ ಹಕ್ಕಿಲ್ಲ ಎಂದು ಅಲ್ಲಿನ ಜನರ ಪರವಾಗಿ ಟ್ವೀಟ್ ಮಾಡಿದ್ದರು. ಈ ವೇಳೆ ಕಾಶ್ಮೀರಿಗಳ ಒಂದು ಗುಂಪು ಅಫ್ರೀದಿಯನ್ನು ಸಾಮಜಿಕ ತಾಣಗಳಲ್ಲಿ ಹೊಗಳಿ ಅಟ್ಟಿಕ್ಕೇರಿಸಿತ್ತು.

       ಸದ್ಯ ಧೋನಿ ಒಂದು ವರ್ಷದ ಹಿಂದೆ ಕಾಶ್ಮೀರದ ಸ್ಥಳವೊಂದಕ್ಕೆ ಭೇಟಿ ನೀಡಿದಾಗ ಅಲ್ಲಿನ ಕಿಡಿಗೇಡಿಗಳು ಬೂಮ್ ಬೂಮ್ ಅಫ್ರಿದಿ ಎಂದು ಕೂಗುತ್ತಿರುವ ವಿಡಿಯೋ ಈಗ ಸಾಮಾಜಿಕ  ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

   First published: