MS Dhoni: ಧೋನಿ ದಶಕದ ಕ್ರೀಡಾ ಸ್ಪೂರ್ತಿ ಪ್ರಶಸ್ತಿಗೆ ಆಯ್ಕೆಯಾಗಲು ಇದುವೇ ಮುಖ್ಯ ಕಾರಣ..!

2011ರಲ್ಲಿ ನಾಟಿಂಗ್ ಹ್ಯಾಮ್​ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಿತ್ತು. ಪಂದ್ಯದ ಮೂರನೇ ದಿನ ಟೀ ಬ್ರೇಕ್​ಗೆ ಇನ್ನೇನು ಬಾಲ್​ಗಳು ಮಾತ್ರ ಉಳಿದಿತ್ತು. ಈ ವೇಳೆ ಇಯಾನ್ ಮೋರ್ಗನ್ ಬಾರಿಸಿದ ಚೆಂಡು ಬೌಂಡಿಯತ್ತ ಸಾಗಿತ್ತು.

Dhoni

Dhoni

 • Share this:
  ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ದಶಕದ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಆಯ್ಕೆ ಮಾಡಿದೆ. ಕಳೆದ 10 ವರ್ಷಗಳಲ್ಲಿ ಕ್ರಿಕೆಟ್ ಮೈದಾನದಲ್ಲಿ ಮೆರೆದ ಕ್ರೀಡಾ ಸ್ಪೂರ್ತಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, 2011ರಲ್ಲಿ ಧೋನಿಯ ಕಾರ್ಯಕ್ಕೆ ಈ ಗೌರವ ಸಂದಿದೆ.

  2011ರಲ್ಲಿ ನಾಟಿಂಗ್ ಹ್ಯಾಮ್​ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಿತ್ತು. ಪಂದ್ಯದ ಮೂರನೇ ದಿನ ಟೀ ಬ್ರೇಕ್​ಗೆ ಇನ್ನೇನು ಬಾಲ್​ಗಳು ಮಾತ್ರ ಉಳಿದಿತ್ತು. ಈ ವೇಳೆ ಇಯಾನ್ ಮೋರ್ಗನ್ ಬಾರಿಸಿದ ಚೆಂಡು ಬೌಂಡಿಯತ್ತ ಸಾಗಿತ್ತು. ಅತ್ತ ಬಾಲ್ ಬೌಂಡರಿಗೆ ಲೈನ್​ಗೆ ತಾಗಿದೆ ಎಂದು ಭಾವಿಸಿದ ಇಯಾನ್ ಬೆಲ್ ಓಟವನ್ನು ನಿಲ್ಲಿಸಿದರು. ಅಲ್ಲದೆ ಅದೇ ಟೀ ಬ್ರೇಕ್ ಹಿನ್ನೆಲೆಯಲ್ಲಿ ಪೆವಿಲಿಯನ್ ಕಡೆ ಹೊರಟರು. ಆದರೆ ಬೌಂಡರಿ ಲೈನ್​ ಬಳಿಯಿಂದ ಚೆಂಡು ಕೀಪರ್ ಕೈ ಸೇರುತ್ತಿದ್ದಂತೆ ರನೌಟ್​ಗೆ ಮನವಿ ಮಾಡಲಾಯಿತು.

  ಇತ್ತ ಅಂಪೈರ್ ಮೂರನೇ ಅಂಪೈರ್​ಗೆ ಮನವಿ ಸಲ್ಲಿಸಿದರು. ವಿಡಿಯೋ ಪರಿಶೀಲಿಸಿದ ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಇದರಿಂದ ಅಸಮಾಧಾನದಿಂದಲೇ ಇಯಾನ್ ಬೆಲ್ ಮೈದಾನ ತೊರೆದರು. ಆದರೆ ಟೀ ಬ್ರೇಕ್​ ವೇಳೆ ಇಂಗ್ಲೆಂಡ್ ನಾಯಕ ಆಂಡ್ರೂ ಸ್ಟ್ರಾಸ್ ಹಾಗೂ ಕೋಚ್ ಧೋನಿ ಜೊತೆ ನಡೆಸಿದರು.  ಪರಿಣಾಮ ಧೋನಿ ಔಟ್ ನಿರ್ಧಾರವನ್ನು ಹಿಂಪಡೆಯಲು ಮನವಿ ಮಾಡಿ, ಇಯಾನ್ ಬೆಲ್​ಗೆ ಮತ್ತೆ ಬ್ಯಾಟ್ ಮಾಡಲು ಅವಕಾಶ ನೀಡಿದರು. ಟೀಮ್ ಇಂಡಿಯಾ ನಾಯಕನ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಅಂದು ಮಹೇಂದ್ರ ಸಿಂಗ್ ಧೋನಿ ತೋರಿಸಿದ ಕ್ರೀಡಾ ಸ್ಪೂರ್ತಿಗೆ ಇದೀಗ ಐಸಿಸಿ ದಶಕದ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ ಒಲಿದು ಬಂದಿದೆ.
  Published by:zahir
  First published: