MS Dhoni: ದ. ಆಫ್ರಿಕಾ ಟಿ-20 ಸರಣಿಯಿಂದ ಧೋನಿ ಔಟ್; ಯಾಕೆ ಗೊತ್ತಾ..?

ಮುಂದಿನ ಟಿ-20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಗಮನದಲ್ಲಿಟ್ಟುಕೊಂಡು ಯುವ ಪಡೆಯೊಂದನ್ನು ಭಾರತ ಸಜ್ಜುಗೊಳಿಸುತ್ತಿದೆ. ಆದರೆ, ಇತ್ತ ಎಂ ಎಸ್ ಧೋನಿಯನ್ನು ಕೈ ಬಿಡುವುದು ಅಭಿಮಾನಿಗಳಿಗೆ ಬೇಸರ ತಂದಿದೆ.

Vinay Bhat | news18-kannada
Updated:August 29, 2019, 9:21 AM IST
MS Dhoni: ದ. ಆಫ್ರಿಕಾ ಟಿ-20 ಸರಣಿಯಿಂದ ಧೋನಿ ಔಟ್; ಯಾಕೆ ಗೊತ್ತಾ..?
ಎಂ ಎಸ್ ಧೋನಿ
  • Share this:
ಬೆಂಗಳೂರು (ಆ. 29): ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ತಮ್ಮ ನಿವೃತ್ತಿಯನ್ನು ಸ್ವಲ್ಪ ಕಾಲ ಮುಂದೂಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಈ ಮೂಲಕ ಮತ್ತೆ ಮೈದಾನದಲ್ಲಿ ಧೋನಿ ಆಟ ನೋಡಬಹುದೆಂದು ಅಭಿಮಾನಿಗಳು ಸಂತಸದಲ್ಲಿದ್ದರು. ಆದರೆ, ಮುಂಬರುವ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಗಾಗಿ ಧೋನಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

2020 ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ಗಾಗಿ ಯುವ ಪಡೆಯ ಮೇಲೆ ಬಿಸಿಸಿಐ ಕಣ್ಣಿಟ್ಟಿದ್ದು ಇದಕ್ಕಾಗಿ ಹೊಸ ಮುಖಗಳನ್ನು ಆಯ್ಕೆ ಮಾಡಲಿದೆಯಂತೆ

ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಆಡಿದ ಆಟಗಾರರೇ ದ. ಆಫ್ರಿಕಾ ವಿರುದ್ಧವೂ ಕಣಕ್ಕಿಳಿಯಲಿದ್ದಾರೆ. ಎಲ್ಲಾದರು ಬದಲಾವಣೆ ಆದಲ್ಲಿ ಫಿಟ್​ನೆಸ್ ವಿಚಾರದಲ್ಲಿ ಮಾತ್ರ. ಸಂಭಾವ್ಯ ತಂಡದಲ್ಲಿ, ಮುಖ್ಯವಾಗಿ ಟಿ-20 ಯಲ್ಲಿ 3 ಮಂದಿ ಕೀಪರ್‌ಗಳನ್ನು ಆಯ್ಕೆ ಮಾಡುವತ್ತ ಬಿಸಿಸಿಐ ಚಿತ್ತ ನೆಟ್ಟಿದೆಯಂತೆ.

ಧೋನಿ ನಿವೃತ್ತಿ!: ಟೀಂ ಇಂಡಿಯಾ ಮಾಜಿ ನಾಯಕನಿಂದ ಮಹತ್ವದ ಹೇಳಿಕೆ

MS Dhoni Unlikely to be Selected for India’s T20I Home Series Against South Africa
ಇಶಾನ್ ಕಿಶನ್


ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ, ರಿಷಭ್‌ ಪಂತ್‌ ಜೊತೆಗೆ ಸಂಜು ಸ್ಯಾಮ್ಸನ್‌ ಮತ್ತು ಭಾರತ ಎ ತಂಡದ ಖಾಯಂ ಸದಸ್ಯ ಇಶಾನ್‌ ಕಿಶನ್‌ ಅವರನ್ನು 2ನೇ ಹಾಗೂ 3ನೇ ಕೀಪಿಂಗ್‌ ಸ್ಥಾನಕ್ಕೆ ಸಜ್ಜುಗೊಳಿಸುವ ಸಾಧ್ಯತೆ ಇದೆ ಎಂದಿದ್ದಾರೆ.

ಒಟ್ಟಾರೆ ಮುಂದಿನ ಟಿ-20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಗಮನದಲ್ಲಿಟ್ಟುಕೊಂಡು ಯುವ ಪಡೆಯೊಂದನ್ನು ಭಾರತ ಸಜ್ಜುಗೊಳಿಸುತ್ತಿದೆ. ಆದರೆ, ಇತ್ತ ಎಂ ಎಸ್ ಧೋನಿಯನ್ನು ಕೈ ಬಿಡುವುದು ಅಭಿಮಾನಿಗಳಿಗೆ ಬೇಸರ ತಂದಿದೆ.Ajantha Mendis: ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ಕೇರಂ ಬಾಲ್ ಸ್ಪೆಷಲಿಸ್ಟ್​​..!

ಟೀಂ ಇಂಡಿಯಾ ದ. ಆಫ್ರಿಕಾ ವಿರುದ್ಧ 3 ಟಿ-20 ಪಂದ್ಯಗಳನ್ನು ಆಡಲಿದೆ. ಸೆ. 15ರಂದು ಧರ್ಮ ಶಾಲಾದಲ್ಲಿ ಮೊದಲ ಮುಖಾಮುಖಿ ನಡೆದರೆ, ಉಳಿದೆರಡು ಪಂದ್ಯಗಳು ಮೊಹಾಲಿ (ಸೆ. 18) ಮತ್ತು ಬೆಂಗಳೂರಿನಲ್ಲಿ (ಸೆ. 22) ನಡೆಯಲಿವೆ. ಇನ್ನು ಆಫ್ರಿಕಾ ಸರಣಿಗೆ ಭಾರತ ತಂಡವನ್ನು ಸೆ. 4ರಂದು ಪ್ರಕಟಿಸಲಿದೆ ಎನ್ನಲಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಿ

First published: August 29, 2019, 9:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading