ವೆಬ್​ ಸರಣಿ ನಿರ್ಮಾಣದತ್ತ ಹೊರಟ ಮಹೇಂದ್ರ ಸಿಂಗ್​ ಧೋನಿ!; ಕಥೆ ಮಾತ್ರ….

MS Dhoni: ಮಹೇಂದ್ರ ಸಿಂಗ್​ ಧೋನಿ ಮೈಥಲಾಜಿಕಲ್​​ ಸೈ-ಫೈ ವೆಬ್​​​ ಸಿರೀಸ್​​ ನಿರ್ಮಿಸಲು ಮುಂದಾಗಿದ್ದಾರೆ.

ಧೋನಿ

ಧೋನಿ

 • Share this:
  ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಮಹೇಂದ್ರ ಸಿಂಗ್​ ಧೋನಿ ಮುಂದೇನು ಮಾಡುತ್ತಾರೆ? ಎಂಬ ಸಾಕಷ್ಟು ಕುತೂಹಲಕರವಾದ ಪ್ರಶ್ನೆಗಳು ಕ್ರಿಕೆಟ್​  ಪ್ರಿಯರನ್ನು ಕಾಡಿತ್ತು. ಅನೇಕರು ಮುಂಬರುವ ಐಪಿಎಲ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಅರಬ್​ ನೆಲದಲ್ಲಿ ನಡೆಯುವ 13ನೇ ಆವೃತ್ತಿಯ ಐಪಿಎಲ್​ನಲ್ಲಿ ಮಾಹಿ ಅಬ್ಬರಿಸಲಿದ್ದಾರೆ ಎಂದು ಹೇಳಿದರು. ಆದರೆ ಈವರೆಗೆ ನಡೆದ ಪಂದ್ಯದಲ್ಲಿ ಧೋನಿ ಅಷ್ಟೇನು ಪ್ರದರ್ಶನ ತೋರಿಸಿಲ್ಲ ಎಂಬುದು ಅಭಿಮಾನಿಗಳ ಮತ್ತೊಂದು ಮಾತು. ಇನ್ನು ಕ್ರಿಕೆಟ್​ ಹೊರತಾಗಿಯೂ ಧೋನಿ ಏನು ಮಾಡುತ್ತಾರೆ? ಎಂಬ ಪ್ರಶ್ನೆಗಳು ಅನೇಕರನ್ನು ಕಾಡಿತ್ತು. ಅದಕ್ಕೆ ಉತ್ತರವೆಂಬಂತೆ ಮಾಹಿ ವೆಬ್​ ಸಿರೀಸ್​ ನಿರ್ಮಾಣದತ್ತ ತಮ್ಮ ಚಿತ್ತ ಹರಿಸಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.

  ಹೌದು. ಮಹೇಂದ್ರ ಸಿಂಗ್​ ಧೋನಿ ಮೈಥಲಾಜಿಕಲ್​​ ಸೈ-ಫೈ ವೆಬ್​​​ ಸಿರೀಸ್​​ ನಿರ್ಮಿಸಲು ಮುಂದಾಗಿದ್ದಾರೆ. ಕಳೆದ ವರ್ಷ ಧೋನಿ ಎಂಟರ್​​ಟೇನ್​ಮೆಂಟ್ ಸಂಸ್ಥೆ​ ಆರಂಭಿಸಿದ್ದರು. ಅದರ ಮೂಲಕ ‘ರೋರ್​​ ದಿ ಲಯನ್’​​ ಎಂಬ ಸಾಕ್ಷ್ಯ ಚಿತ್ರ ನಿರ್ಮಿಸಿದ್ದರು. ಕಬೀರ್​ ಖಾನ್​ ನಿರ್ದೇಶನದಲ್ಲಿ ಈ ಸಾಕ್ಷ್ಯ ಚಿತ್ರ ಮೂಡಿಬಂದಿತ್ತು.

  ಇದೀಗ ವೆಬ್​ ಸಿರೀಸ್​ ನಿರ್ಮಾಣದತ್ತ ಹೊರಟಿದ್ದಾರೆ ಮಾಹಿ. ಅಘೋರಿಯೊಬ್ಬರ ನಿಗೂಢ ಜೀವನ ಪಯಣದ ಕುರಿತು ಈ ಸಿರೀಸ್​ ಮೂಡಿ ಬರಲಿದೆ. ಲೇಖಕರು ಬರೆದಿರುವ ಕೃತಿಯನ್ನು ಆಧರಿಸಿ ವೆಬ್​ ಸಿರೀಸ್​ ನಿರ್ಮಿಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ನಾನವನ್ನು ಬಳಸಿಕೊಂಡು ಚಿತ್ರೀಕರಣ ಮಾಡಲಾಗುತ್ತಿದೆ.  ಈ ಬಗ್ಗೆ ಧೋನಿ ಪತ್ನಿ ಸಾಕ್ಷಿ ಸಿಂಗ್​ ಮಾತನಾಡಿ, ‘ಅಘೋರಿಗಳು ಕೆಲವು ರಹಸ್ಯಗಳನ್ನು ಬಹಿರಂಗಗೊಳಿಸುವ ವಿಚಾರ ಇದರಲ್ಲಿದೆ. ಸಂಪ್ರದಾಯವನ್ನು ಅನೇಕರು ಮೂಢ ನಂಬಿಕೆ ಎಂದು ಪ್ರತಿಪಾದಿಸುತ್ತಾರೆ. ಅಗೋಚರ ಸತ್ಯವನ್ನು ಜನರ ಮುಂದಿಡುವ ಉದ್ದೇಶ ನಮ್ಮ ವೆಬ್​ ಸರಣಿಯದ್ದಾಗಿದೆ’ ಎಂದು ಹೇಳಿದರು.
  Published by:Harshith AS
  First published: