ಧೋನಿ ಬೆಳೆಸಿದ ಕಡಕ್​ನಾಥ್ ಕೋಳಿ ಆಯ್ತು, ಈಗ ಅವರ ತರಕಾರಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್

ರಾಂಚಿಯಲ್ಲಿ 43 ಎಕರೆ ಪ್ರದೇಶದ ಜಮೀನಿನಲ್ಲಿ ಎಂಎಸ್ ಧೋನಿ ಕೃಷಿಗಾರಿಕೆ ಮಾಡುತ್ತಾ ಬರುತ್ತಿದ್ದಾರೆ. ಅಲ್ಲಿಯೇ ಪೌಲ್ಟ್ರಿ ಫಾರಂಗಳನ್ನ ಸ್ಥಾಪಿಸಿರುವ ಧೋನಿ 10 ಎಕರೆ ಪ್ರದೇಶದಲ್ಲಿ ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ. ಇವರ ತರಕಾರಿ ಈಗ ದುಬೈಗೆ ರಫ್ತಾಗುತ್ತಿದೆ.

ತಮ್ಮ ಕೃಷಿ ಜಮೀನಿನಲ್ಲಿ ಎಂಎಸ್ ಧೋನಿ

ತಮ್ಮ ಕೃಷಿ ಜಮೀನಿನಲ್ಲಿ ಎಂಎಸ್ ಧೋನಿ

 • Share this:
  ರಾಂಚಿ: ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳಿದ ಬಳಿಕ ವಿಭಿನ್ನ ಹಾದಿ ತುಳಿದಿದ್ದಾರೆ. ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕ್ರಿಕೆಟ್ ಹೊರತುಪಡಿಸಿ ಬೇರೆ ಕ್ರೀಡೆಗಳನ್ನೂ ಅವರು ಬೆಳೆಸುತ್ತಿರುವುದುಂಟು, ತೊಡಗಿಸಿಕೊಂಡಿರುವುದುಂಟು. ಕಳೆದ ವರ್ಷ ಅವರು ತಮ್ಮ ಆರ್ಗ್ಯಾನಿಕ್ ಪೌಲ್ಟ್ರಿ ಫಾರ್ಮ್​ನಲ್ಲಿ ಕಡಕ್​ನಾಥ್ ಜಾತಿಯ ಕೋಳಿಗಳನ್ನ ಸಾಕಲು ಆರಂಭವಿಸಿದ್ದಾರೆ. ಇದೀಗ 10 ಎಕರೆ ಪ್ರದೇಶದಲ್ಲಿ ಅವರು ವಿವಿಧ ತರಕಾರಿಗಳನ್ನ ಬೆಳೆಯುತ್ತಿದ್ದು, ಅವುಗಳಿಗೆ ದೂರದ ದುಬೈ ನಾಡಿನಲ್ಲಿ ಮಾರುಕಟ್ಟೆ ವ್ಯವಸ್ಥೆಯಾಗಿದೆ. ತರಕಾರಿ ರಫ್ತು ಮಾಡಲು ಅವರು ಅಣಿಯಾಗಿದ್ದಾರೆ.

  ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯ ಸೆಂಬೋ ಗ್ರಾಮದ ಬಳಿ ಇರುವ ಅವರ 43 ಎಕರೆ ಫಾರ್ಮ್​ಹೌಸ್​ನಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಸ್ಟ್ರಾಬೆರಿ, ಕೋಸು, ಟೊಮೆಟಾ, ಬಟಾಣಿ ಮತ್ತು ಪಪಾಯವನ್ನು ಬೆಳೆದಿದ್ದಾರೆ. ಇವರ ಫಾರ್ಮ್​ಹೌಸ್​ನಲ್ಲಿ ಬೆಳೆದ ಟೊಮೆಟೋ, ಬಟಾಣಿ, ಕೋಸಿಗೆ ರಾಂಚಿಯ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಈಗ ಆಲ್ ಸೀಸನ್ ಫಾರ್ಮ್ ಫ್ರೆಶ್ ಎಂಬ ಏಜೆನ್ಸಿಯೊಂದು ಧೋನಿ ಅವರ ತರಕಾರಿಗಳನ್ನ ದುಬೈನಲ್ಲಿ ಮಾರಾಟ ಮಾಡಲು ಮುಂದಾಗಿದೆ. ಜಾರ್ಖಂಡ್​ನ ಕೃಷಿ ಇಲಾಖೆ ಕೂಡ ಈ ಕಾರ್ಯದಲ್ಲಿ ನೆರವು ನೀಡುತ್ತಿದೆ.

  ಇದನ್ನೂ ಓದಿ: Suresh Raina: ಧೋನಿ ಬೆನ್ನಲ್ಲೆ ತಾನೂ ನಿವೃತ್ತಿ ಘೋಷಿಸಿದ್ದು ಯಾಕೆಂದು ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ

  ಇನ್ನು, ಧೋನಿ ಅವರ ಪೌಲ್ಟ್ರಿ ಫಾರ್ಮ್​ನಲ್ಲಿ ಬೆಳೆಯುತ್ತಿರುವ ಕಡಕನಾಥ್ ತಳಿಯ ಕೋಳಿ ಬಗ್ಗೆ ಸಾರ್ವಜನಿಕರಿಗೆ ಬಹಳ ಆಸಕ್ತಿ ಇದೆಯಾದರೂ ಅಷ್ಟೇನೂ ಬೇಡಿಕೆ ಇಲ್ಲ. ಆದರೆ, ಈ ಜಾತಿಯ ಕೋಳಿ ಬಹಳ ವಿಶೇಷವಾದುದು. ನಾಟಿ ಕೋಳಿಯಾದ ಇದು ಬ್ರಾಯ್ಲರ್, ಫಾರಂನಂಥ ಬೇರೆ ತಳಿಯ ಕೋಳಿಗಳಿಗೆ ಹೋಲಿಸಿದರೆ ಹೆಚ್ಚು ಪ್ರೋಟೀನ್ ಅಂಶ ಹೊಂದಿದೆ. ತಮಿಳುನಾಡಿನ ಜೋಳಾರಪೇಟ್ಟೈನಲ್ಲಿರುವ ರುದ್ರಾ ಬ್ರೀಡರ್ಸ್ ಕಂಪನಿ ಅಭಿವೃದ್ಧಿಪಡಿಸಿದ ಕಡಕನಾಥ್ ತಳಿಯ ಕೋಳಿಗಳಲ್ಲಿ ಔಷಧೀಯ ಗುಣಗಳೂ ಇವೆ. ರುಚಿ ಕೂಡ ಸ್ವಾದಿಷ್ಟಕರವಾಗಿದೆ. ಆದರೆ, ಹೋಟೆಲ್​ಗಳಲ್ಲಿ ಈ ಕೋಳಿಯ ಟ್ರೆಂಡ್ ಇನ್ನೂ ಸೃಷ್ಟಿಯಾಗಿಲ್ಲ. ಈಗ ಧೋನಿ ಅವರ ಕೋಳಿ ಫಾರಂನಲ್ಲಿ ಕಡಕನಾಥ್ ಕೋಳಿಗಳನ್ನ ಸಾಕುತ್ತಿರುವುದರಿಂದ ಈ ತಳಿಯ ಕೋಳಿಗೆ ಒಳ್ಳೆಯ ಪ್ರಚಾರ ಸಿಕ್ಕು ಬೇಡಿಕೆ ಹೆಚ್ಚಬಹುದು ಎಂಬ ನಿರೀಕ್ಷೆಯಲ್ಲಿ ರುದ್ರ ಬ್ರೀಡರ್ಸ್ ಕಂಪನಿ ಇದೆ.
  Published by:Vijayasarthy SN
  First published: