news18 Updated:July 13, 2020, 8:36 AM IST
ಜಸ್ಪ್ರಿತ್ ಬೂಮ್ರಾ
- News18
- Last Updated:
July 13, 2020, 8:36 AM IST
ಜಸ್ಪ್ರಿತ್ ಬೂಮ್ರಾ ಟೀಂ ಇಂಡಿಯಾದ ಡೆತ್ ಓವರ್ ಸ್ಪೆಷಲಿಸ್ಟ್. ವಿಶ್ವದ ಪ್ರಮುಖ ಬೌಲರ್ ಆಗಿರುವ ಬೂಮ್ರಾಗೆ ಕೊನೆಯ ಓವರ್ ಹಾಕಲು ಮಹತ್ವದ ಬೇಡಿಕೆ ಇದೆ. ಕೆಲವೊಮ್ಮೆ ನೋ ಬಾಲ್ ಎಸೆದು ಅಭಿಮಾನಿಗಳಿಂದ ಅವಮಾನಕ್ಕಿಡಾಗಿದ್ದಾರೆ. ಹಾಗಾಗಿ ವಿಶ್ವಕಪ್ನಲ್ಲೂ ಬೂಮ್ರಾ ಇಂತಹದೇ ತಪ್ಪು ಮಾಡದಂತೆ ಅಭಿಮಾನಿಗಳು ಟ್ವಿಟ್ಟರ್ನಲ್ಲಿ ಸಲಹೆವೊಂದನ್ನು ನೀಡಿದ್ದಾರೆ.
ಇತ್ತೀಚೆಗೆ ಚೆನ್ನೈ ವಿರುದ್ಧ ನಡೆದ ಮುಂಬೈ ಕ್ವಾಲಿಫೈಯರ್ ಪಂದ್ಯದ ಕೊನೆಯ ಓವರ್ನಲ್ಲೂ ಬೂಮ್ರಾ ನೋ ಬಾಲ್ ಎಸೆದಿದ್ದರು. ಬೂಮ್ರಾ ಎಸೆತದ ವೇಗಕ್ಕೆ ಧೋನಿ ಕೈಯಿಂದ ಬ್ಯಾಟ್ ಜಾರಿ ಹೋಗಿತ್ತು. ಅದೇ ವೇಳೆಗೆ ಫೀಲ್ಡರ್ ಕ್ಯಾಚ್ ಹಿಡಿಯುವ ಮೂಲಕ ಧೋನಿ ಔಟ್ ಆಗಿದ್ದರು ಆದರೆ ಬೂಮ್ರಾ ನೋ ಬಾಲ್ ಎಸೆತದಿಂದ ಧೋನಿಗೆ ಮತ್ತೊಂದು ಅವಕಾಶಕ್ಕೆ ಎಡೆಮಾಡಿಕೊಟ್ಟಿತ್ತು.
ಟೀಂ ಇಂಡಿಯಾದ ಮಾರಕ ವೇಗಿ ಬೂಮ್ರಾ ನೋ ಬಾಲ್ ಎಸೆತ ಇದೇ ಮೊದಲೇನಲ್ಲ. 2017ರ ಚಾಂಪಿಯನ್ಸ್ ಟೋಫ್ರಿಯ ಫೈನಲ್ ವೇಳೆಯೂ ನೋ ಬಾಲ್ ಹಾಕಿ ಟೀಂ ಇಂಡಿಯಾ ಸೋಲಿಗೆ ಪರೋಕ್ಷವಾಗಿ ಕಾರಣರಾಗಿದ್ದರು. 2017ರ ಭಾರತ-ಪಾಕಿಸ್ತಾನ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಬೂಮ್ರಾ ನೋ ಬಾಲ್ ಎಸೆದಿದ್ದರು. ಬೂಮ್ರಾರ ನೋ ಬಾಲ್ನಿಂದ ಪಾಕಿಸ್ತಾನ ಆಟಗಾರ ಫಖರ್ ಜರ್ಮಾನ್ ಜೀವದಾನ ಪಡೆದುಕೊಂಡು ಭರ್ಜರಿ ಶತಕ ಬಾರಿಸಿದ್ದರು. ಆ ನೋ ಬಾಲ್ಗೆ ಬೆಲೆತೆತ್ತ ಟೀಂ ಇಂಡಿಯಾ ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿ ಪಡೆಬೇಕಾದ ಸನ್ನಿವೇಷ ಎದುರಾಗಿತ್ತು.
ಹೀಗೆ ಪದೇ ಪದೇ ನೋ ಬಾಲ್ ಎಸೆಯುತ್ತಿರುವ ಬೂಮ್ರಾರ ಎಡವಟ್ಟಿಗೆ ಅಭಿಮಾನಿಗಳು ಸಲಹೆ ನೀಡಿದ್ದಾರೆ. ವಿಶ್ವಕಪ್ನಲ್ಲೂ ನೋ ಬಾಲ್ ಹಾಕದಂತೆ ಉದ್ದನೆಯ ಶೂವೊಂದನ್ನು ಧರಿಸುವಂತೆ ಟ್ವಿಟ್ ಮಾಡಿದ್ದಾರೆ.
Published by:
Harshith AS
First published:
May 10, 2019, 6:54 PM IST