ಸೇನೆ ಸೇರಲು ಆ ರಹಸ್ಯ ಮುಚ್ಚಿಟ್ಟಿದ್ದ ಮಹೇಂದ್ರ ಸಿಂಗ್ ಧೋನಿ..!
MS Dhoni : ಜುಲೈ 31 ರಿಂದ ಆಗಸ್ಟ್ 15ರವರೆಗೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಸೇನೆಯ 106 ಟೆರಿಟೋರಿಯಲ್ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸಲು ಅವಕಾಶ ಪಡೆದಿದ್ದರು.

Dhoni
- News18 Kannada
- Last Updated: August 14, 2019, 4:57 PM IST
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತೀಯ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವುದು ಗೊತ್ತಿರುವ ವಿಷಯ. ವಿಶ್ವಕಪ್ ಟೂರ್ನಿ ಬಳಿಕ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹೊರಟರೆ ಮಹೀ ಮಾತ್ರ ಕಾಶ್ಮೀರದ ಕಣಿವೆಯತ್ತ ಮುಖ ಮಾಡಿದ್ದರು.
ಇದಕ್ಕಾಗಿ ಮೊದಲೇ ರೂಪಿಸಿದ್ದ ಯೋಜನೆಯಂತೆ ಎಂಎಸ್ಡಿ ಆರ್ಮಿ ಬೆಟಾಲಿಯನ್ನಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ಸೇನಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಜುಲೈ 31 ರಿಂದ ಆಗಸ್ಟ್ 15ರವರೆಗೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಸೇನೆಯ 106 ಟೆರಿಟೋರಿಯಲ್ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸಲು ಅವಕಾಶ ಪಡೆದಿದ್ದರು.
ಆದರೆ ಇದಕ್ಕೂ ಮುನ್ನ ಧೋನಿ ತಮ್ಮ ಗಾಯದ ಸಮಸ್ಯೆಯನ್ನು ಸೈನ್ಯಾಧಿಕಾರಿಯಿಂದ ಮರೆ ಮಾಚಿದ್ದರು ಎಂಬ ವಿಷಯ ಇದೀಗ ಬಹಿರಂಗವಾಗಿದೆ. ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಮಹೀ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಟೀಂ ಇಂಡಿಯಾ ವರ್ಲ್ಡ್ಕಪ್ನಿಂದ ಹೊರ ಬಿದ್ದ ಬಳಿಕವು ಆ ಗಾಯವು ವಾಸಿಯಾಗಿರಲಿಲ್ಲ.
ಆದರೆ ದೇಶ ಸೇವೆಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಳ್ಳಲು ಟೀಂ ಇಂಡಿಯಾ ಮಾಜಿ ನಾಯಕ ನಿರ್ಧರಿಸಿದ್ದರು. ಹೀಗಾಗಿ ಗಾಯದ ವಿಚಾರವನ್ನು ಮುಚ್ಚಿಟ್ಟಿದ್ದ ಮಹೇಂದ್ರ ಸಿಂಗ್ ಧೋನಿ ದೇಶ ಸೇವೆಗೆ ಮುಂದಾಗಿದ್ದರು. ನಿಯಮ ಪ್ರಕಾರ ಗಾಯಗೊಂಡಿರುವವರನ್ನು ಸೇನೆಯ ತರಬೇತಿಗೆ ಪರಿಗಣಿಸಲಾಗುವುದಿಲ್ಲ. ಇದರಿಂದಾಗಿ ಮಹೀ ತಮ್ಮ ಹೆಬ್ಬೆರಳಿನ ಗಾಯದ ವಿಚಾರವನ್ನು ಮರೆಮಾಚಿದ್ದರು. ಅಲ್ಲದೆ ಅದೇ ನೋವನ್ನು ಸಹಿಸಿ ದೇಶದ ಗಡಿ ಕಾಯುವ ಅವಕಾಶವನ್ನು ಬಳಸಿಕೊಂಡರು. ಇನ್ನು ಧೋನಿಯ ಸೇನಾ ಸೇವೆಯು ನಾಳೆ ಕೊನೆಗೊಳ್ಳಲಿದ್ದು, ಆ ಬಳಿಕ ಮರಳಿ ಟೀಂ ಇಂಡಿಯಾಗೆ ಮರಳುವ ವಿಶ್ವಾಸದಲ್ಲಿದ್ದಾರೆ 38ರ ಹರೆಯದ ವಿಕೆಟ್ ಕೀಪರ್.

ಧೋನಿ ಗಾಯದ ಫೋಟೋ

Loading...