ಕಾಶ್ಮೀರದಲ್ಲಿ MSD; ಸೇನಾ ಸಮವಸ್ತ್ರದಲ್ಲಿ ವೈರಲ್ ಆಗುತ್ತಿದೆ ಧೋನಿಯ ಫೋಟೋ

15 ದಿನಗಳ ಕಾಲ ಧೋನಿ ತರಬೇತಿ ತಂಡದ ಜೊತೆಯೇ ಉಳಿದುಕೊಳ್ಳಲಿದ್ದಾರೆ. ತರಬೇತಿ ವೇಳೆ ಅವರು ಗಸ್ತು ತಿರುಗುವುದು, ರಕ್ಷಣೆ ಮೊದಾಲಾದ ಕಾರ್ಯದಲ್ಲಿ ತೊಡಗಲಿದ್ದಾರೆ.

ಎಂ ಎಸ್ ಧೋನಿ

ಎಂ ಎಸ್ ಧೋನಿ

 • Share this:
  ಬೆಂಗಳೂರು (ಆ. 01) :ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ನಿಂದ ಬಿಡುವು ತೆಗೆದುಕೊಂಡು ಸೇನಾ ತರಬೇತಿಗೆ ಮುಂದಾಗಿರುವ ವಿಚಾರ ಎಲ್ಲರಿಗು ತಿಳಿದಿದೆ. ಈಗಾಗಲೇ ಧೋನಿ ಕಾಶ್ಮೀರದಲ್ಲಿ ಸೈನಿಕರೊಂದಿಗೆ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ವರೆಗೂ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಧೋನಿ ಕರ್ತವ್ಯ ನಿರ್ವಹಿಸಲಿದ್ದಾರೆ.

  ಹೀಗಿರುವಾಗ ಧೋನಿ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಸೇನೆಯ ಸಮವಸ್ತ್ರ ಧರಿಸಿರುವ ಧೋನಿ ಕ್ರಿಕೆಟ್ ಬ್ಯಾಟ್​ಗೆ ಸಹಿ ಮಾಡುತ್ತಿದ್ದಾರೆ.

     ಏಕದಿನ ಸರಣಿ ಗೆದ್ದ ಸಂಭ್ರಮ; ಶ್ರೀಲಂಕಾ ಆಟಗಾರ ಮೈದಾನದಲ್ಲಿ ಬೈಕ್ ಓಡಿಸಿ ಆಗಿದ್ದೇನು ನೋಡಿ?

  ಭಾರತೀಯ ಅರೆಸೇನಾ ಪಡೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಗೌರವ ಹುದ್ದೆ ಹೊಂದಿರುವ ಧೋನಿ ಜಮ್ಮು-ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 15 ದಿನಗಳ ಕಾಲ ಧೋನಿ ತರಬೇತಿ ತಂಡದ ಜೊತೆಯೇ ಉಳಿದುಕೊಳ್ಳಲಿದ್ದಾರೆ. ತರಬೇತಿ ವೇಳೆ ಅವರು ಗಸ್ತು ತಿರುಗುವುದು, ರಕ್ಷಣೆ ಮೊದಾಲಾದ ಕಾರ್ಯದಲ್ಲಿ ತೊಡಗಲಿದ್ದಾರೆ.

     ಇನ್ನು  ಧೋನಿ ತಮ್ಮ ಕರ್ತವ್ಯದ ಸಂದರ್ಭದಲ್ಲಿ ಕಾಶ್ಮೀರದಲ್ಲಿರುವ ವಿವಿಧ ಸೇನಾ ಕ್ಯಾಂಪ್ ಗಳಿಗೆ ಭೇಟಿ ನೀಡಲಿದ್ದು, ಸೈನಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ ಅಲ್ಲಿ ಸೇನೆ ನಡೆಸುತ್ತಿರುವ ಶಾಲೆಗಳಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲಿರುವ ಧೋನಿ ಮಕ್ಕಳೊಂದಿಗೆ ಬೆರೆತು ವಿವಿಧ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಲ್ಲಿದ್ದಾರೆ.

     First published: