• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • MS Dhoni: ಭಾರತದಲ್ಲಿ ಸ್ಪಿನ್​ ಸ್ನೇಹಿ ಪಿಚ್​ ಮಾಡಲು ಸಲಹೆ ಕೊಟ್ಟಿದ್ದು ಧೋನಿಯಂತೆ! ಕಾರಣ ಬಿಚ್ಚಿಟ್ಟ ಮಾಜಿ ಪಿಚ್ ಕ್ಯೂರೇಟರ್

MS Dhoni: ಭಾರತದಲ್ಲಿ ಸ್ಪಿನ್​ ಸ್ನೇಹಿ ಪಿಚ್​ ಮಾಡಲು ಸಲಹೆ ಕೊಟ್ಟಿದ್ದು ಧೋನಿಯಂತೆ! ಕಾರಣ ಬಿಚ್ಚಿಟ್ಟ ಮಾಜಿ ಪಿಚ್ ಕ್ಯೂರೇಟರ್

ಎಂಎಸ್ ಧೋನಿ

ಎಂಎಸ್ ಧೋನಿ

ಮಾಜಿ ಪಿಚ್ ಕ್ಯೂರೇಟರ್ ದಲ್ಜಿತ್ ಸಿಂಗ್ ಭಾರತದಲ್ಲಿ ಸ್ಪಿನ್​ ಸ್ನೇಹಿ ಪಿಚ್​ಗಳನ್ನು ಸಿದ್ಧಪಡಿಸಲು ಸಲಹೆ ನೀಡಿದ್ದ ಮಾಜಿ ನಾಯಕ ಎಂ ಎಸ್ ಧೋನಿ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಏಕೆಂದರೆ ಈ ಪಿಚ್ ಗಳು ಭಾರತ ತಂಡಕ್ಕೆ ಇಷ್ಟವಾಗುತ್ತವೆ ಎಂದು ಧೋನಿ ತಿಳಿಸಿದ್ದರೆಂದು ಸಿಂಗ್ ಬಹಿರಂಗಪಡಿಸಿದ್ದಾರೆ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ಆಸ್ಟ್ರೇಲಿಯಾ (Australia), ಇಂಗ್ಲೆಂಡ್ (England)​ ಮತ್ತು ನ್ಯೂಜಿಲ್ಯಾಡ್​ಗೆ (New Zealand) ಹೋದರೆ ಅಲ್ಲಿನ ಕ್ರಿಕೆಟ್ ಮೈದಾನದಲ್ಲಿರುವ ಪಿಚ್​ಗಳು ವೇಗದ ಬೌಲರ್​ಗಳಿಗೆ (Fast Bowler) ತುಂಬಾ ನೆರವಾಗುವುದನ್ನು ನಾವೆಲ್ಲಾ ನೋಡಿದ್ದೇವೆ. ಅದಕ್ಕೆ ನೋಡಿ ಆ ದೇಶಗಳಲ್ಲಿ ಪಿಚ್​ಗಳಲ್ಲಿ ನಮ್ಮ ಭಾರತೀಯ ಬ್ಯಾಟರ್​ಗಳು ( (Indian Batters)  ರನ್​ಗಳಿಸಲು ಪರದಾಡುತ್ತಾರೆ. ವೇಗ, ಸ್ವಿಂಗ್ ಮತ್ತು ಬೌನ್ಸರ್ ಗಳಿಗೆ ಬೇಗನೆ ವಿಕೆಟ್ ಒಪ್ಪಿಸಿ ಬಿಡುತ್ತಾರೆ. ಆದರೆ ಅದೇ ಭಾರತದ ಕ್ರಿಕೆಟ್ ಅಟದ ಮೈದಾನದಲ್ಲಿರುವ ಬಹುತೇಕ ಪಿಚ್​ಗಳು ಸ್ಪಿನ್ ಬೌಲಿಂಗ್​ಗೆ ಸಹಾಯವಾಗುವ ರೀತಿಯಲ್ಲಿ ತಯಾರು ಮಾಡಿರುತ್ತಾರೆ. ಅದಕ್ಕೆ ನೋಡಿ ಈ ಪಿಚ್ ಗಳಲ್ಲಿ ವಿದೇಶಿ ಆಟಗಾರರು ರನ್ ಗಳಿಸಲು ಪರದಾಡುತ್ತಾರೆ.


ಈಗೇಕೆ ಈ ಸ್ಪಿನ್ ಸ್ನೇಹಿ ಪಿಚ್​ಗಳ ಬಗ್ಗೆ ಮಾತು ಅಂತೀರಾ? ಭಾರತವು ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ತವರು ನೆಲದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಆಡುತ್ತಿದೆ. ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತೀಯ ಪಿಚ್​ಗಳು ಎರಡೂ ತಂಡಗಳ ಸ್ಪಿನ್ನರ್ ಗಳಿಗೆ ತುಂಬಾ ನೆರವಾಗುತ್ತಿದ್ದು, ಕಳೆದ ಮೂರು ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.


ಸ್ಪಿನ್ ಸ್ನೇಹಿ ಪಿಚ್​ಗಳ ಟ್ರೆಂಡ್ ಶುರುವಾಗಿದ್ದು ಧೋನಿಯಿಂದ


ಮಾಜಿ ಪಿಚ್ ಕ್ಯೂರೇಟರ್ ದಲ್ಜಿತ್ ಸಿಂಗ್ ಭಾರತದಲ್ಲಿ ಸ್ಪಿನ್​ ಸ್ನೇಹಿ ಪಿಚ್​ಗಳನ್ನು ಸಿದ್ಧಪಡಿಸಲು ಸಲಹೆ ನೀಡಿದ್ದ ಮಾಜಿ ನಾಯಕ ಎಂ ಎಸ್ ಧೋನಿ ಎಂಬುದನ್ನು ಬಹಿರಂಗಪಡಿಸಿದ್ದಾರೆ.  ಏಕೆಂದರೆ ಈ ಪಿಚ್ ಗಳು ಭಾರತ ತಂಡಕ್ಕೆ ಇಷ್ಟವಾಗುತ್ತವೆ ಎಂದು ಧೋನಿ ತಿಳಿಸಿದ್ದರೆಂದು ಸಿಂಗ್ ಬಹಿರಂಗಪಡಿಸಿದ್ದಾರೆ.


ಈ ಪ್ರಸ್ತುತ ಸರಣಿಯಲ್ಲಿ ಇದುವರೆಗೆ ಮುಗಿದ ಎಲ್ಲಾ ಮೂರು ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟರ್​ಗಳು ರನ್ ಗಳಿಸಲು ಹೆಣಗಾಡುತ್ತಿದ್ದಾರೆ. ಸರಣಿಯಲ್ಲಿ ಭಾರತ  ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದರೆ, ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ 2023 ರ ಫೈನಲ್​ ಪ್ರವೇಶಿಸಿದೆ.


ಇದನ್ನೂ ಓದಿ:India vs Australia 4th Test: 'ಮಾಡು ಇಲ್ಲವೇ ಮಡಿ' ಪಂದ್ಯಕ್ಕೆ ಸ್ಟಾರ್​​ ಆಟಗಾರನಿಗೆ ರೋಹಿತ್-ದ್ರಾವಿಡ್ ಬುಲಾವ್​​​; ಟೀಂ ಇಂಡಿಯಾ ಪ್ಲೇಯಿಂಗ್​ XI​ನಲ್ಲಿ ಚೇಂಜ್?


ದೇಶಾದ್ಯಂತ ವೇಗದ, ಬೌನ್ಸಿ ಮತ್ತು ಸ್ಪಿನ್ ಪಿಚ್ ಗಳನ್ನು ಮಾಡಿದ್ದಾರಂತೆ ಸಿಂಗ್


ಭಾರತೀಯ ಕ್ರಿಕೆಟ್​ನಲ್ಲಿ ಪಿಚ್​ಗಳಲ್ಲಿ ಹೊಸ ಕ್ರಾಂತಿಯನ್ನು ತಂದ ಕೀರ್ತಿ ಬಿಸಿಸಿಐನಲ್ಲಿ ದೀರ್ಘಕಾಲ ಮೈದಾನ ಮತ್ತು ಪಿಚ್ ಸಮಿತಿಯ ಅಧ್ಯಕ್ಷರಾಗಿದ್ದ ದಲ್ಜಿತ್ ಸಿಂಗ್ ಅವರಿಗೆ ಸಲ್ಲುತ್ತದೆ. ಅವರು ದೇಶಾದ್ಯಂತ ವೇಗದ ಮತ್ತು ಬೌನ್ಸಿ ಪಿಚ್ ಗಳು ಮತ್ತು ಸ್ಪಿನ್ ಟ್ರ್ಯಾಕ್ ಗಳನ್ನು ಸಹ ಮಾಡಿದ್ದಾರೆ.


ಅಖಿಲ ಭಾರತ ಮೈದಾನ ಮತ್ತು ಪಿಚ್ ಸಮಿತಿಯ ಮಾಜಿ ಅಧ್ಯಕ್ಷ ದಲ್ಜಿತ್ ಸಿಂಗ್ ಮಾಧ್ಯಮದೊಂದಿಗೆ ಮಾತನಾಡುತ್ತಾ " ಎಂಎಸ್ ಧೋನಿ ನಾಯಕತ್ವಕ್ಕೆ ಮುಂಚಿತವಾಗಿ ನೀವು ಭಾರತದಲ್ಲಿ ಟೆಸ್ಟ್ ಪಂದ್ಯಗಳನ್ನು ವೀಕ್ಷಿಸಿದರೆ, ಅವು 4 ದಿನಗಳ ಕೊನೆಯ ಸೆಷನ್  ಅಥವಾ 5ನೇ ದಿನದವರೆಗೆ ಆರಾಮವಾಗಿ ಕೊನೆಗೊಳ್ಳುತ್ತಿದ್ದವು.




ನಂತರ ಹುಲ್ಲು ಮತ್ತು ತೇವಾಂಶವನ್ನು ಉಳಿಸಿಕೊಳ್ಳುವ ಪಿಚ್​ಗಳು ಇದ್ದವು, ಇದು ಮೊದಲ ಎರಡು ದಿನಗಳಲ್ಲಿ ವೇಗದ ಬೌಲರ್​ಗಳಿಗೆ ಸಹಾಯ ಮಾಡಿದರೆ ನಂತರ ಮೂರನೇ ದಿನ ಬ್ಯಾಟಿಂಗ್​ಗೆ ಹೆಚ್ಚು ಅನುಕೂಲಕರವಾಗಿ ಪರಿಗಣಿಸಲ್ಪಡುತ್ತಿದ್ದವು. ನಂತರ ಸ್ಪಿನ್ನರ್​ಗಳು ಕೊನೆಯ ಎರಡು ದಿನಗಳಲ್ಲಿ ಪ್ರಾಬಲ್ಯ ಸಾಧಿಸಿದ್ದನ್ನು ನಾವು ಅನೇಕ ಪಂದ್ಯಗಳಲ್ಲಿ ನೋಡಿದ್ದೇವೆ” ಎಂದು ದಲ್ಜಿತ್ ಸಿಂಗ್ ನೆನಪಿಸಿಕೊಂಡರು.


ಸ್ಪಿನ್ ಸ್ನೇಹಿ ಪಿಚ್ ಗಳು ಭಾರತ ತಂಡಕ್ಕೆ ತುಂಬಾನೇ ಇಷ್ಟವಾಗುತ್ತವೆಯಂತೆ..


"ಎಂಎಸ್ ಧೋನಿ ಭಾರತ ತಂಡದ ನಾಯಕರಾಗಿದ್ದಾಗ,   ಸ್ಪಿನ್​ಗೆ ನೆರವಾಗುವಂತಹ  ಪಿಚ್​ಗಳನ್ನು ಮಾಡಬೇಕೆಂದು  ನನಗೆ ಹೇಳಿದರು, ಏಕೆಂದರೆ ಈ ಪಿಚ್​ಗಳು ಭಾರತೀಯ ತಂಡಕ್ಕೆ ತುಂಬಾ ಇಷ್ಟವಾಗುತ್ತವೆ. ಆ ನಂತರವೇ ನಾವು ಅಂತಹ ಪಿಚ್​ಗಳನ್ನು ಮಾಡಲು ಪ್ರಾರಂಭಿಸಿದೆವು. ಈಗ ದೇಶಾದ್ಯಂತ ಅನೇಕ ಮೈದಾನಗಳು ವಿಭಿನ್ನ ಜೇಡಿಮಣ್ಣಿನ ಪಿಚ್ ಗಳನ್ನು ಹೊಂದಿರುವುದನ್ನು ನೀವು ನೋಡಬಹುದು.


ಇಲ್ಲಿ ಕೆಂಪು ಮತ್ತು ಕಪ್ಪು ಮಣ್ಣಿನ ಪಿಚ್​ಗಳಿವೆ. ಕೆಂಪು ಮಣ್ಣನ್ನು ಮಹಾರಾಷ್ಟ್ರದಿಂದ ತರಲಾಗುತ್ತದೆ ಮತ್ತು ಕಪ್ಪು ಮಣ್ಣನ್ನು ಒಡಿಶಾದಿಂದ ತರಲಾಗುತ್ತದೆ ಎಂದು ದಲ್ಜಿತ್ ಹೇಳಿದರು.

Published by:Rajesha M B
First published: