ವಿಶ್ವಕಪ್​ ಬಳಿಕ ಕ್ರಿಕೆಟ್​ಗೆ ಧೋನಿ ಗುಡ್​ಬೈ? ನಿವೃತ್ತಿ ಬಳಿಕ ಮಾಡ್ತಾರಂತೆ ಈ ಕೆಲಸ..!

ಅಲ್ಲದೆ ತಾವು ಬಿಡಿಸಿದ ಚಿತ್ರಗಳನ್ನು ಧೋನಿ ವಿಡಿಯೋದಲ್ಲಿ ಪ್ರದರ್ಶಿಸಿದ್ದು, ಮೊದಲ ಬಾರಿ ಬಿಡಿಸಿರುವುದು ನಿಸರ್ಗದ ಚಿತ್ರ, ಎರಡನೇ ಬಾರಿ ಭವಿಷ್ಯದ ವಿಮಾನ ಹೀಗಿರಲಿದೆ ಎಂಬುದರ ಚಿತ್ರ.

zahir | news18
Updated:May 23, 2019, 11:28 AM IST
ವಿಶ್ವಕಪ್​ ಬಳಿಕ ಕ್ರಿಕೆಟ್​ಗೆ ಧೋನಿ ಗುಡ್​ಬೈ? ನಿವೃತ್ತಿ ಬಳಿಕ ಮಾಡ್ತಾರಂತೆ ಈ ಕೆಲಸ..!
(AP Photo/Aijaz Rahi)
  • News18
  • Last Updated: May 23, 2019, 11:28 AM IST
  • Share this:
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಬಳಿಕ ನಿವೃತ್ತಿ ಹೊಂದುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಮೇಲೆ ತಾನೇನು ಮಾಡಲಿದ್ದೇನೆ ಎಂಬುದರ ಸುಳಿವೊಂದನ್ನು ಎಂಎಸ್​ಡಿ ನೀಡಿದ್ದಾರೆ.

ಬಾಲ್ಯದಿಂದಲೂ ಪೇಂಟರ್​ ಆಗಬೇಕೆಂದು ಕನಸು ಕಂಡಿರುವುದಾಗಿ ಎಂದು ತಿಳಿಸಿರುವ ಧೋನಿ, ಕ್ರಿಕೆಟ್​ನಿಂದ ನಿವೃತ್ತಿ ಬಳಿಕ ಚಿತ್ರಕಾರನಾಗಬೇಕೆಂದು ಬಯಸಿರುವುದಾಗಿ ಮನಬಿಚ್ಚಿ ಮಾತನಾಡಿದ್ದಾರೆ. ಧೋನಿ ಮಾತನಾಡಿರುವ ವಿಡಿಯೋವೊಂದು ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ತಮ್ಮ ಪೇಂಟಿಂಗ್ ಹೇಳಿಕೆ ಮೂಲಕ ಮತ್ತೊಮ್ಮೆ ನಿವೃತ್ತಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ನಾನು ನಿಮ್ಮೊಂದಿಗೆ ಒಂದು ರಹಸ್ಯವನ್ನು ಹಂಚಿಕೊಳ್ಳುವೆ. ಬಾಲ್ಯದಿಂದಲೂ ನನಗೆ ಉತ್ತಮ ಚಿತ್ರಕಾರನಾಗಬೇಕೆಂಬ ಆಸೆಯಿತ್ತು. ಇದೀಗ ಸಾಕಷ್ಟು ಕ್ರಿಕೆಟ್ ಆಡಿರುವೆ. ಹೀಗಾಗಿ ಮುಂದೆ ತನ್ನ ಬಾಲ್ಯದ ಕನಸನ್ನು ಈಡೇರಿಸಲು ನಿರ್ಧರಿಸಿದ್ದೇನೆ. ಅದಕ್ಕಾಗಿ ಕೆಲ ಚಿತ್ರಗಳನ್ನು ಬಿಡಿಸಿದ್ದೇನೆ ಎಂದು ಹೇಳಿದ್ದಾರೆ.

ಅಲ್ಲದೆ ತಾವು ಬಿಡಿಸಿದ ಚಿತ್ರಗಳನ್ನು ಧೋನಿ ವಿಡಿಯೋದಲ್ಲಿ ಪ್ರದರ್ಶಿಸಿದ್ದು, ಮೊದಲ ಬಾರಿ ಬಿಡಿಸಿರುವುದು ನಿಸರ್ಗದ ಚಿತ್ರ, ಎರಡನೇ ಬಾರಿ ಭವಿಷ್ಯದ ವಿಮಾನ ಹೀಗಿರಲಿದೆ ಎಂಬುದರ ಚಿತ್ರ, ಮೂರನೇಯದು ನನ್ನದೇ ಚಿತ್ರ. ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಜೆರ್ಸಿ ತೊಟ್ಟಿರುವ ಈ ಚಿತ್ರ ನನ್ನ ನೆಚ್ಚಿನ ಚಿತ್ರ ಎಂದು ಧೋನಿ ಹೇಳಿದ್ದಾರೆ.

ಹಾಗೆಯೇ ತಮ್ಮ ಪೇಂಟಿಂಗ್​ಗಳ ಪ್ರದರ್ಶನವನ್ನು ಏರ್ಪಡಿಸಲಾಗುವುದಲ್ಲದೆ, ಇದಕ್ಕಾಗಿ ಅಭಿಮಾನಿಗಳಿಂದ ಸಲಹೆ ಸೂಚನೆಗಳನ್ನು ಪಡೆಯುವುದಾಗಿ ಹೆಲಿಕಾಪ್ಟರ್ ಶಾಟ್ ಮಾಂತ್ರಿಕ ಧೋನಿ ತಿಳಿಸಿದ್ದಾರೆ.ಇದು ಮಹೇಂದ್ರ ಸಿಂಗ್ ಧೋನಿ, ತಮಾಷೆಗಾಗಿ ಮಾಡಿರುವ ವಿಡಿಯೋನಾ ಅಥವಾ ಯಾವುದಾದರೂ ಜಾಹೀರಾತಿಗಾಗಿ ಚಿತ್ರೀಕರಿಸಿರುವುದಾ ಎಂಬ ಅನುಮಾನಗಳು ಈಗ ಅಭಿಮಾನಿಗಳಲ್ಲಿದೆ. ಏಕೆಂದರೆ ಇತ್ತೀಚೆಗಷ್ಟೇ ರಿಷಭ್ ಪಂತ್, ವಿರಾಟ್ ಕೊಹ್ಲಿಯ ರಹಸ್ಯ ಡ್ಯಾನ್ಸಿಂಗ್ ವಿಡಿಯೋವನ್ನು ಶೇರ್ ಮಾಡಿ ವೈರಲ್ ಮಾಡಿದ್ದರು. ಆ ಬಳಿಕ ಅದೊಂದು ಜಾಹೀರಾತಿಗಾಗಿ ಚಿತ್ರಿಸಿದ ವಿಡಿಯೋ ಎಂಬುದು ತಿಳಿದು ಬಂದಿತ್ತು. ಇದೀಗ ಧೋನಿಯ ಚಿತ್ರಕಲೆಯ ವಿಡಿಯೋ ಯಾವುದಾದರೂ ಪೇಂಟಿಂಗ್ ವಸ್ತುಗಳ ಪ್ರಚಾರಕ್ಕಾಗಿ ಮಾಡಿರುವ ವಿಡಿಯೋನಾ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿಯ 'ರಹಸ್ಯ' ವಿಡಿಯೋ ವೈರಲ್; ರಿಷಬ್​ ಪಂತ್ ಹೀಗಾ ಮಾಡೋದು?
First published:May 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ