MS Dhoni- ಟಿ20 ವಿಶ್ವಕಪ್ ತಂಡದ ಮೆಂಟರಿಂಗ್ ಆಗಿ ಧೋನಿ ಕೆಲಸವೇನು, ಸಂಭಾವನೆ ಎಷ್ಟು?

Role of MS Dhoni as Mentor- ಟೀಮ್ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಇರುವಾಗ ಎಂಎಸ್ ಧೋನಿ ಮೆಂಟಾರ್ ಆಗಿ ಮಾಡುವ ಕೆಲಸವೇನು? ಅವರು ಪಡೆಯುವ ಸಂಭಾವನೆ ಎಷ್ಟು? ಈ ಇತ್ಯಾದಿ ವಿವರ ಇಲ್ಲಿದೆ:

ಎಂ.ಎಸ್. ಧೋನಿ

ಎಂ.ಎಸ್. ಧೋನಿ

 • Share this:
  ನವದೆಹಲಿ, ಅ. 12: ಐಪಿಎಲ್ 2021 ಫೈನಲ್ ಪಂದ್ಯ ಮುಗಿದ ಬೆನ್ನಲ್ಲೇ ಭಾರತ ತಂಡ ಯುಎಇಯಲ್ಲೇ ನಡೆಯುವ ಟಿ20 ವಿಶ್ವಕಪ್​ಗೆ ಅಣಿಗೊಳ್ಳಲಿದೆ. ಅ. 15ರಂದು ಐಪಿಎಲ್ ಫೈನಲ್ ಇದ್ದರೆ ಅ. 18ರಂದು ಭಾರತ ಟಿ20 ತಂಡ ವಿಶ್ವಕಪ್​ಗೆ ಪೂರ್ವಬಾವಿಯಾಗಿ ಅಭ್ಯಾಸ ಪಂದ್ಯ ಆಡಲಿದೆ. ಇನ್ನು, ಟಿ20 ಟೀಮ್ ಇಂಡಿಯಾವನ್ನ ಹಲವು ದಿನಗಳ ಹಿಂದೆಯೇ ಘೋಷಿಸಲಾಗಿದೆ. ತಂಡದಲ್ಲಿ ಬದಲಾವಣೆ ಮಾಡಲು ಇನ್ನೂ ಎರಡು ದಿನ ಕಾಲಾವಕಾಶ ಇದೆ. ಹಾರ್ದಿಕ್ ಪಾಂಡ್ಯ ಅವರಂಥ ಕೆಲ ಆಟಗಾರರನ್ನ ಕೈಬಿಟ್ಟು ಇನ್-ಫಾರ್ಮ್ ಬ್ಯಾಟರ್​ಗಳನ್ನ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಇದೇ ವೇಳೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರು ಟೀಮ್ ಇಂಡಿಯಾದ ವಿಶ್ವಕಪ್ ತಂಡಕ್ಕೆ ಮೆಂಟಾರ್ (India T20 World Cup team Mentor) ಆಗಿ ಆಯ್ಕೆಯಾಗಿದ್ದಾರೆ. ಟೀಮ್ ಇಂಡಿಯಾವನ್ನು ಪ್ರಕಟಿಸಿದ ದಿನವೇ ಧೋನಿ ಮೆಂಟರ್ ಆಗಿರುವುದನ್ನು ಬಿಸಿಸಿಐ ಘೋಷಿಸಿತ್ತು.

  ಹಣ ಪಡೆಯದೇ ಕೆಲಸ ಮಾಡುವ ಧೋನಿ: ಜಾಹೀರಾತುಗಳಲ್ಲಿ ಬಹಳ ಬೇಡಿಕೆ ಹೊಂದಿರುವ ಎಂಎಸ್ ಧೋನಿ ಅವರು ಟೀಮ್ ಇಂಡಿಯಾದ ಮೆಂಟಾರ್ ಸ್ಥಾನ ನಿರ್ವಹಿಸಲು ಎಷ್ಟು ಸಂಭಾವನೆ (MS Dhoni remuneration details) ಪಡೆದಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಸಹಜ. ಈ ಬಗ್ಗೆ ಮಾಹಿತಿ ಬಿಚ್ಚಿಟ್ಟಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (BCCI secretary Jay Shah) ಅವರು ಅಚ್ಚರಿಯ ಸಂಗತಿ ಹೊರಗೆಡವಿದ್ದಾರೆ. ಎಂಎಸ್ ಧೋನಿ ಅವರು ಯಾವುದೇ ಹಣ ಪಡೆಯದೇ ಈ ಕರ್ತವ್ಯ ನಿಭಾಯಿಸುತ್ತಿದ್ಧಾರೆ ಎಂದು ಜಯ್ ಶಾ ಹೇಳಿದ್ದಾರೆ.

  ಮೆಂಟಾರ್ ಕೆಲಸ ಏನು? (What is the Role of Mentor?)

  ಭಾರತ ತಂಡದಲ್ಲಿ ರವಿಶಾಸ್ತ್ರಿ (Ravi Shastri) ಕೋಚ್ ಇದ್ಧಾರೆ. ಈಗ ಮೆಂಟಾರ್ ಆಗಿ ಧೋನಿ ಬಂದಿರುವುದು ಅವರಿಬ್ಬರ ಮಧ್ಯೆ ಕೆಲಸದ ವಿಚಾರದಲ್ಲಿ ಸಂಘರ್ಷ ಏರ್ಪಡುವುದಿಲ್ಲವೇ ಎಂಬ ಅನುಮಾನ ಬರಬಹುದು. ಆದರೆ, ಹಾಗೇನು ಆಗಲು ಸಾಧ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಮೆಂಟರ್ ಆಗಿ ಎಂಎಸ್ ಧೋನಿ ಅವರ ಜವಾಬ್ದಾರಿ ಮತ್ತು ಕೆಲಸಗಳು ವಿಭಿನ್ನವಾಗಿರುತ್ತವಂತೆ. ಪ್ರತೀ ಪಂದ್ಯಕ್ಕೂ ಸರಿಯಾದ ತಂಡವನ್ನು ಆಯ್ಕೆ ಮಾಡಲು ಸಹಕರಿಸುವುದು ಧೋನಿಯ ಜವಾಬ್ದಾರಿಗಳಲ್ಲಿ ಒಂದು. ಧೋನಿ ಪಿಚ್​ನ ಸ್ಥಿತಿ ಹೇಗಿದೆ ಎಂದು ಚೆನ್ನಾಗಿ ವಿಶ್ಲೇಷಿಸಬಲ್ಲುರು. ಹಾಗೆಯೇ, ಆಟಗಾರರ ಮನಸ್ಥಿತಿಯನ್ನ ಅರಿತುಕೊಳ್ಳಬಲ್ಲಂಥ ಸ್ವಭಾವ ಧೋನಿಗೆ ಇದೆ. ಒಬ್ಬ ಆಟಗಾರನಿಗೆ ಆತ್ಮವಿಶ್ವಾಸದ ಕೊರತೆ ಎದುರಾಗುತ್ತಿದೆ ಎಂದಾದಲ್ಲಿ ಅದನ್ನ ಗ್ರಹಿಸಿ ಆತನಿಗೆ ಉತ್ತೇಜನ ನೀಡಬಲ್ಲಂಥ ಕೆಲಸವನ್ನ ಧೋನಿ ನಿಭಾಯಿಸುತ್ತಾರೆ. ಹಾಗೆಯೇ, ಆಟಗಾರರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಬರದ ಹಾಗೆ ಪರಿಸ್ಥಿತಿ ನಿಭಾಯಿಸುವ ಕಲೆ ಧೋನಿಗೆ ಸಿದ್ಧಿಸಿದೆ. ಅದನ್ನ ಅವರು ಟಿ20 ವಿಶ್ವಕಪ್​ನಲ್ಲಿ ಮಾಡಲಿದ್ದಾರೆ.

  ಇದನ್ನೂ ಓದಿ: Rishabh Pant- ಎರಡು ಬಾರಿ ಧೋನಿ ಔಟ್ ಮಾಡಲು ರಿಷಭ್ ಪಂತ್ ಹೆಣೆದ ಬಲೆ ನಿಜಕ್ಕೂ ಸೋಜಿಗ

  ಈ ವಿಚಾರವನ್ನು ಟಿವಿ ಚರ್ಚೆ ವೇಳೆ ಎಳೆ ಎಳೆಯಾಗಿ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, “ರವಿಶಾಸ್ತ್ರಿ ಮತ್ತು ಎಂಎಸ್ ಧೋನಿ ಮಧ್ಯೆ ಯಾವುದೇ ಘರ್ಷಣೆ ಏರ್ಪಡುವುದಿಲ್ಲ. ಇಬ್ಬರ ಜವಾಬ್ದಾರಿ ಭಿನ್ನವಾಗಿದೆ. ಇಬ್ಬರೂ ಗಟ್ಟಿಯಾದ ವ್ಯಕ್ತಿತ್ವದವರಾಗಿದ್ದು ಅದ್ಭುತವಾಗಿ ಕೆಲಸಗಳನ್ನ ನಿಭಾಯಿಸಬಲ್ಲರು. ಆದರೆ, ಇಬ್ಬರ ಕೆಲಸ ಭಿನ್ನವಾದರೂ ಇಬ್ಬರ ಗುರಿ ಒಂದೇ” ಎಂದು ಹೇಳಿದ್ಧಾರೆ.

  ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಅನ್ನ ಗೆದ್ದುಕೊಂಡಿತ್ತು. ಆ ಬಳಿಕ ಭಾರತಕ್ಕೆ ಮತ್ತೊಂದು ಟಿ20 ವಿಶ್ವಕಪ್ ಬಂದಿಲ್ಲ. ಈಗ ಧೋನಿ ಮೆಂಟಾರ್ ಆಗಿ ಟಿ20 ವಿಶ್ವಕಪ್​ಗೆ ಅಡಿ ಇಟ್ಟಿದ್ದಾರೆ. ಈ ಬಾರಿ ಧೋನಿ ಮತ್ತು ಟೀಮ್ ಇಂಡಿಯಾ ಯಶಸ್ವಿಯಾಗುತ್ತಾ ಕಾದುನೋಡಬೇಕು. ಕಳೆದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಎಂಎಸ್ ಧೋನಿ ಈಗ ಮೆಂಟಾರ್ ಮೂಲಕ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದು, ಅವರ ಈ ಆಟ ಎಷ್ಟು ದಿನದವರೆಗೆ ಚಾಲನೆಯಲ್ಲಿರುತ್ತದೆ ನೋಡಬೇಕು.

  ಇದೇ 18 ಮತ್ತು 20 ರಂದು ಅಭ್ಯಾಸ ಪಂದ್ಯಗಳನ್ನ ಆಡಲಿರುವ ಭಾರತ ಅ. 24ರಂದು ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ವಿಶ್ವಕಪ್ ಅಭಿಯಾನ ಪ್ರಾರಂಭಿಸಲಿದೆ. ಟಿ20 ವಿಶ್ವಕಪ್​ನ ಎಲ್ಲಾ ಪಂದ್ಯಗಳು ದುಬೈ, ಅಬುಧಾಬಿ, ಶಾರ್ಜಾ ಮತ್ತು ಮಸ್ಕಟ್ ನಗರದ ಮೈದಾನಗಳಲ್ಲಿ ನಡೆಯುತ್ತವೆ.
  Published by:Vijayasarthy SN
  First published: