ಬಿಜೆಪಿ ಪಕ್ಷದಿಂದ ಆಫರ್: ನಿವೃತ್ತಿ ಬಳಿಕ ರಾಜಕೀಯಕ್ಕೆ ಮಹೇಂದ್ರ ಸಿಂಗ್ ಧೋನಿ..?

mahendra singh dhoni: ಈ ಸುದ್ದಿಗೆ ಪುಷ್ಠಿ ನೀಡುವಂತೆ ಬಿಸಿಸಿಐ ಅಧಿಕಾರಿಯೊಬ್ಬರು ವರ್ಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾ ಆಡುವ ಪಂದ್ಯವೇ ಧೋನಿಯ ಕೊನೆಯ ಏಕದಿನವಾಗಿರಲಿದೆ ಎಂದಿದ್ದರು. ಹೀಗಾಗಿ ಧೋನಿಯ ನಿವೃತ್ತಿ ನಿರ್ಧಾರ ಮಹತ್ವ ಪಡೆದಿತ್ತು.

zahir | news18
Updated:July 13, 2019, 2:56 PM IST
ಬಿಜೆಪಿ ಪಕ್ಷದಿಂದ ಆಫರ್: ನಿವೃತ್ತಿ ಬಳಿಕ ರಾಜಕೀಯಕ್ಕೆ ಮಹೇಂದ್ರ ಸಿಂಗ್ ಧೋನಿ..?
mahendra singh dhoni
  • News18
  • Last Updated: July 13, 2019, 2:56 PM IST
  • Share this:
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶೀಘ್ರದಲ್ಲೇ ತಮ್ಮ ನಿವೃತ್ತಿ ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ ಕ್ರಿಕೆಟ್​ಗೆ ಗುಡ್​ ಬೈ ಹೇಳಿ ರಾಜಕೀಯ ಪಕ್ಷವನ್ನು ಸೇರಲಿದ್ದಾರೆ ಎನ್ನಲಾಗಿದೆ. ವಿಶ್ವಕಪ್​ ಬಳಿಕ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಲಿರುವ ಸುದ್ದಿಯೊಂದು ಈ ಹಿಂದೆ ಹರಿದಾಡಿತ್ತು. ಈ ಸುದ್ದಿಗೆ ಪುಷ್ಠಿ ನೀಡುವಂತೆ ಬಿಸಿಸಿಐ ಅಧಿಕಾರಿಯೊಬ್ಬರು ವರ್ಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾ ಆಡುವ ಪಂದ್ಯವೇ ಧೋನಿಯ ಕೊನೆಯ ಏಕದಿನವಾಗಿರಲಿದೆ ಎಂದಿದ್ದರು. ಹೀಗಾಗಿ ಧೋನಿಯ ನಿವೃತ್ತಿ ನಿರ್ಧಾರ ಮಹತ್ವ ಪಡೆದಿತ್ತು.ಇದೀಗ ಬಿಜೆಪಿ ಪಕ್ಷದ ಹಿರಿಯ ಮುಖಂಡ ಸಂಜಯ್ ಪಾಸ್ವಾನ್ ಧೋನಿ ನಿವೃತ್ತಿ ನೀಡಿದ ನಂತರ ರಾಜಕೀಯ ಪ್ರವೇಶಿಸಲಿದ್ದಾರೆಂಬ ಸಣ್ಣ ಸುಳಿವು ನೀಡಿದ್ದಾರೆ. ಈ ಕುರಿತು ಮಾತನಾಡಿದ ಪಾಸ್ವಾನ್, ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಧೋನಿ ಬಿಜೆಪಿ ಜೊತೆ ಹೊಸ ಇನಿಂಗ್ಸ್​ ಆರಂಭಿಸಲಿದ್ದಾರೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಅವರ ನಿವೃತ್ತಿಯ ಬಳಿಕವಷ್ಟೇ ಧೋನಿ ನಿರ್ಧಾರ ಪ್ರಕಟವಾಗಲಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.ಈ ಹಿಂದೆ ಕೂಡ ಮಹೇಂದ್ರ ಸಿಂಗ್ ಧೋನಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಮುಖ್ಯ ಕಾರಣ ಧೋನಿ ಹಾಗೂ ಅಮಿತ್​ ಶಾ ಅವರ ವಿಶೇಷ ಭೇಟಿಯಾಗಿತ್ತು. ಬಿಜೆಪಿ ಆಯೋಜಿಸಿದ್ದ ಸಂಪರ್ಕ್​ ಫರ್ ಸಮರ್ಥನ್ ಎಂಬ ಅಭಿಯಾನಕ್ಕೆ ಬೆಂಬಲ ನೀಡುವಂತೆ ಅಮಿತ್ ಶಾ ಧೋನಿ ಅವರನನ್ನು ಕೋರಿದ್ದರು. ಇದೇ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷರು ಟೀಂ ಇಂಡಿಯಾ ಮಾಜಿ ನಾಯಕನಿಗೆ ಪಕ್ಷ ಸೇರುವಂತೆ ಆಫರ್ ನೀಡಿದ್ದರು ಎಂದು ಹೇಳಲಾಗಿತ್ತು. ಇದೀಗ ಮತ್ತೊಮ್ಮೆ ಧೋನಿಯ ಹೆಸರು ಬಿಜೆಪಿಯೊಂದಿಗೆ ಥಳುಕು ಹಾಕಿಕೊಂಡಿದ್ದು, ನಿವೃತ್ತಿ ಬಳಿಕ ಮತ್ತೊಮ್ಮೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ 'ನಾಯಕ'ರಾಗುತ್ತಾರಾ ಕಾದು ನೋಡಬೇಕಿದೆ.

ಇದನ್ನೂ ಕ್ಲಿಕ್ ಮಾಡಿ: ಕೊಹ್ಲಿ ಕ್ಯಾಪ್ಟನ್​​ ಸ್ಥಾನಕ್ಕೆ ಕುತ್ತು: ಟೀಂ ಇಂಡಿಯಾದ ಹೊಸ ನಾಯಕ ರೋಹಿತ್ ಶರ್ಮಾ
First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ