MS Dhoni: 2 ಸಾವಿರ ಕೋಳಿಮರಿಗಳಿಗೆ ಆರ್ಡರ್: 'ಕಡಕ್'​ ಕೋಳಿಯತ್ತ ಧೋನಿ ಚಿತ್ತ

ಕಪ್ಪು ಬಣ್ಣವನ್ನು ಹೊಂದಿರುವ ಕಡಕ್​ನಾಥ್ ಕೋಳಿ ತಳಿಯು ಅಪರೂಪದ ತಳಿಯಾಗಿದ್ದು, ಇದರ ರಕ್ತ ಹಾಗೂ ಮಾಂಸ ಬಣ್ಣಗಳೂ ಕೂಡ ಕಪ್ಪಾಗಿರುತ್ತದೆ.

MS Dhoni

MS Dhoni

  • Share this:
    ಅಂತರಾಷ್ಟ್ರೀಯ ಕ್ರಿಕೆಟ್​ಗೆ ಈಗಾಗಲೇ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ್ದಾರೆ. ಅತ್ತ ಇಂಡಿಯನ್ ಪ್ರೀಮಿಯರ್ ಲೀಗ್​ ಕೂಡ ಮುಕ್ತಾಯವಾಗಿದೆ. ಇದರ ನಡುವೆ ಸಿಎಸ್​ಕೆ ನಾಯಕನ ಮುಂದಿನ ನಡೆಯೇನು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಏಕೆಂದರೆ ಐಪಿಎಲ್​ನಲ್ಲಿ ಸತತ ವೈಫಲ್ಯ ಹೊಂದಿದ್ದ ಧೋನಿ ನಿವೃತ್ತಿ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಮುಂದಿನ ಸೀಸನ್​ನಲ್ಲೂ ಕಣಕ್ಕಿಳಿಯುವುದಾಗಿ ಮಾಹೀ ಘೋಷಿಸಿದ್ದಾರೆ. ಅದರ 2021ರ ಸೀಸನ್​ಗೂ ಮುನ್ನ ಮತ್ತೊಂದು ಉದ್ಯಮದತ್ತ ಧೋನಿ ಚಿತ್ತ ನೆಟ್ಟಿದ್ದಾರೆ.

    ಹೌದು, ಐಪಿಎಲ್ 13ನೇ ಆವೃತ್ತಿ ಮುಕ್ತಾಯ ಬಳಿಕ ಧೋನಿ ತವರಿಗೆ ಆಗಮಿಸಿದ್ದು, ಅದರ ಬೆನ್ನಲ್ಲೇ ಕೋಳಿ ಸಾಕಾಣೆಯತ್ತ ಮುಖ ಮಾಡಿದ್ದಾರೆ. ಅದು ಅಂತಿಂಥ ಕೋಳಿಯಲ್ಲ. ಭಾರೀ ಬೇಡಿಕೆಯಿರುವ ಕಡಕ್​ನಾಥ್ ಹೆಸರಿನ ಖಡಕ್​ ಕೋಳಿಗಳು. ಈಗಾಗಲೇ ಧೋನಿ 2 ಸಾವಿರ ಕಡಕ್​ನಾಥ್ ಕೋಳಿ ಮರಿಗಳಿಗೆ ಆರ್ಡರ್ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಕೋಳಿ ಸಾಕಾಣಿಕೆ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ವಿಶೇಷ ತಳಿ ಕೋಳಿಗಳನ್ನು ಸಾವಯವ ಪದ್ಧತಿಯಲ್ಲಿ ಸಾಕಲಿದ್ದಾರೆ ಎಂದು ಹೇಳಲಾಗಿದೆ.

    ಧೋನಿ ಗೆಳೆಯರ ಮೂಲಕ ಜಬುವಾದ ಕಡಕ್‌ನಾಥ್ ಕೋಳಿ ಸಂಶೋಧನಾ ಕೇಂದ್ರಕ್ಕೆ 2 ಸಾವಿರ ಕೋಳಿಮರಿಗಳಿಗಾಗಿ ಸಂಪರ್ಕಿಸಿದ್ದು, ಆದರೆ ಇಷ್ಟೊಂದು ಕೋಳಿಗಳು ಇರದ ಕಾರಣ ತಾಂಡ್ಲದ ರೈತರ ಮೂಲಕ ಪಡೆದುಕೊಳ್ಳುವಂತೆ ತಿಳಿಸಿರುವುದಾಗಿ ಸಂಶೋಧನಾ ಕೇಂದ್ರದ ನಿರ್ದೇಶಕರು ಹೇಳಿದ್ದಾರೆ. ಇದರಿಂದ ಧೋನಿಯ ಕುಕ್ಕುಟೋದ್ಯಮದ ವಿಚಾರ ಬಹಿರಂಗವಾಗಿದೆ.

    ಕಪ್ಪು ಬಣ್ಣವನ್ನು ಹೊಂದಿರುವ ಕಡಕ್​ನಾಥ್ ಕೋಳಿ ತಳಿಯು ಅಪರೂಪದ ತಳಿಯಾಗಿದ್ದು, ಇದರ ರಕ್ತ ಹಾಗೂ ಮಾಂಸ ಬಣ್ಣಗಳೂ ಕೂಡ ಕಪ್ಪಾಗಿರುತ್ತದೆ. ಈ ಕೋಳಿಗಳ ಮೂಲ ಮಧ್ಯ ಪ್ರದೇಶದ ಜಬುವಾ ಜಿಲ್ಲೆ ಎನ್ನಲಾಗಿದ್ದು, ಈ ತಳಿಗಳಲ್ಲಿ ಆರೋಗ್ಯಕರ ಅಂಶಗಳು ಹೇರಳವಾಗಿರುವುದರಿಂದ ಭಾರೀ ಬೇಡಿಕೆಯಿದೆ.

    ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..!
    Published by:zahir
    First published: