​ಜೋನ್ಸ್​ ಕನಸಿನ ಟಿ-20 ತಂಡದಲ್ಲಿ ಧೋನಿಯ ಜೊತೆ ಮೃತ ಆಟಗಾರ ಕೂಡ ಇದ್ದಾರೆ!

ಜೋನ್ಸ್​​ರ 11 ಆಟಗಾರರ ಟಿ-20 ಕನಸಿನ ತಂಡದಲ್ಲಿ ಏಕೈಕ ಭಾರತೀಯ ಸ್ಥಾನ ಪಡೆದಿದ್ದು, ಅದು ಎಂ ಎಸ್ ಧೋನಿ ಆಗಿದ್ದಾರೆ. ಉಳಿದವರೆಲ್ಲ ಮಾಜಿ ಆಟಗಾರರಾದರೆ, ಮೃತ ಆಟಗಾರ ಮಾರ್ಟಿನ್ ಕ್ರೋವ್ ಕೂಡ ಇದ್ದಾರೆ.

Vinay Bhat | news18
Updated:August 12, 2019, 3:45 PM IST
​ಜೋನ್ಸ್​ ಕನಸಿನ ಟಿ-20 ತಂಡದಲ್ಲಿ ಧೋನಿಯ ಜೊತೆ ಮೃತ ಆಟಗಾರ ಕೂಡ ಇದ್ದಾರೆ!
ಡೀನ್ ಜೋನ್ಸ್ ಹಾಗೂ ಎಂ ಎಸ್ ಧೋನಿ
  • News18
  • Last Updated: August 12, 2019, 3:45 PM IST
  • Share this:
ಬೆಂಗಳೂರು (ಆ. 12): ಕ್ರಿಕೆಟ್ ಲೋಕದಲ್ಲಿ ಸದ್ಯ ಹೆಚ್ಚು ವೀಕ್ಷಣೆ ಕಾಣುವ ಮತ್ತು ಜನರು ಇಷ್ಟ ಪಡುವ ಆಟ ಎಂದರೆ ಅದು ಟಿ-20 ಪಂದ್ಯಗಳನ್ನು. ಟೆಸ್ಟ್​ ಕ್ರಿಕೆಟ್​ನಂತೆ ಈಗ ಏಕದಿನ ಪಂದ್ಯಕೂಡ ಮೂಲೆಗುಂಪಾಗುತ್ತಿದೆ. 2003 ರಲ್ಲಿ ಆರಂಭವಾದ ಟಿ-20 ಕ್ರಿಕೆಟ್ 80, 90ರ ದಶಕದಲ್ಲಿ ಇರುತ್ತಿದ್ದರೆ ಯಾವೆಲ್ಲ ಆಟಗಾರರು ಇರುತ್ತಿದ್ದರು?.

ಈ ಪ್ರಶ್ನೆಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್​​ ಉತ್ತರ ನೀಡಿದ್ದಾರೆ. ವಿಶೇಷ ಎಂದರೆ ಜೋನ್ಸ್​​ರ 11 ಆಟಗಾರರ ಟಿ-20 ಕನಸಿನ ತಂಡದಲ್ಲಿ ಏಕೈಕ ಭಾರತೀಯ ಸ್ಥಾನ ಪಡೆದಿದ್ದು, ಅದು ಎಂ ಎಸ್ ಧೋನಿ ಆಗಿದ್ದಾರೆ. ಉಳಿದವರೆಲ್ಲ ಮಾಜಿ ಆಟಗಾರರಾದರೆ, ಮೃತ ಆಟಗಾರ ಮಾರ್ಟಿನ್ ಕ್ರೋವ್ ಕೂಡ ಇದ್ದಾರೆ.

MS Dhoni only Indian in Dean Jones’ all-time T20 XI. Former West Indies greats dominate selection
ಮೃತ ಆಟಗಾರ ಮಾರ್ಟಿನ್ ಕ್ರೋವ್


ಟೀಂ ಇಂಡಿಯಾ ಮಧ್ಯಮ ಕ್ರಮಾಂಕಕ್ಕೆ ಸಿಕ್ಕ ಹೊಸ ಆಟಗಾರ; ಐಯರ್ ಮೇಲೆ ಹೆಚ್ಚಿದ ನಿರೀಕ್ಷೆ

ಜೋನ್ಸ್​ ಪ್ರಕಾರ ಆರಂಭಿಕರಾಗಿ ಮ್ಯಾಥ್ಯೂ ಹೇಡನ್ ಹಾಗೂ ಗಾರ್ಡನ್‌ ಗ್ರೀನಿಜ್ ಕಣಕ್ಕಿಳಿದರೆ, 3ನೇ ಕ್ರಮಾಂಕ ವೀವ್ ರಿಚರ್ಡ್ಸ್​ಗೆ ನೀಡಿದ್ದಾರೆ. 4 ಹಾಗೂ 5ನೇ ಸ್ಥಾನದಲ್ಲಿ ಕ್ರಮವಾಗಿ ಬ್ರಿಯಾನ್ ಲಾರ ಹಾಗೂ ಮಾರ್ಟಿನ್ ಕ್ರೋವ್ ಇದ್ದರೆ, ಇಯಾನ್ ಬೋಥಂ 6 ಹಾಗೂ ಎಂ ಎಸ್ ಧೋನಿಗೆ 7ನೇ ಸ್ಥಾನ ನೀಡಲಾಗಿದೆ. ಉಳಿದಂತೆ ಶೇನ್ ವಾರ್ನ್, ವಾಸಿಮ್ ಅಕ್ರಂ, ಕಟ್ಲಿರ್ ಆ್ಯಂಬ್ರೋಸ್, ಜೋಯೆಲ್ ಗಾರ್ನರ್ 11ರ ಬಳಗದಲ್ಲಿ ಇದ್ದರೆ ಬಲಿಷ್ಠ ತಂಡವಾಗುತ್ತಿತ್ತು ಎಂದಿದ್ದಾರೆ.

 ಜೋನ್ಸ್ರ ಕನಸಿನ ಟಿ-20 ತಂಡ: ಮ್ಯಾಥ್ಯೂ ಹೇಡನ್‌, ಗಾರ್ಡನ್‌ ಗ್ರೀನಿಜ್‌, ವಿವಿಯನ್‌ ರಿಚರ್ಡ್ಸ್‌,ಬ್ರಿಯಾನ್‌ ಲಾರಾ, ಮಾರ್ಟಿನ್‌ ಕ್ರೋವ್‌, ಇಯಾನ್‌ ಬೋಥಂ, ಎಂ. ಎಸ್‌. ಧೋನಿ, ಶೇನ್‌ ವಾರ್ನ್, ವಾಸಿಮ್‌ ಅಕ್ರಮ್‌, ಕಟ್ಲಿರ್ ಆ್ಯಂಬ್ರೋಸ್‌, ಜೋಯೆಲ್ ಗಾರ್ನರ್‌.

First published: August 12, 2019, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading