ಸ್ವಾತಂತ್ರ್ಯ ದಿನದಂದು ಲಡಾಖ್​​ನಲ್ಲಿ ಎಂ ಎಸ್ ಧೋನಿ ದ್ವಜಾರೋಹಣ..?

ಹೊಸ ಕೇಂದ್ರಾಡಳಿತ ಪ್ರದೇಶವಾಗಿರುವ ಲೇಹ್ ಪ್ರದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನ ಧೋನಿ ಧ್ವಜಾರೋಹಣ ಮಾಡಲಿದ್ದಾರೆ

Vinay Bhat | news18
Updated:August 9, 2019, 11:07 AM IST
ಸ್ವಾತಂತ್ರ್ಯ ದಿನದಂದು ಲಡಾಖ್​​ನಲ್ಲಿ ಎಂ ಎಸ್ ಧೋನಿ ದ್ವಜಾರೋಹಣ..?
ಎಂ ಎಸ್ ಧೋನಿ
  • News18
  • Last Updated: August 9, 2019, 11:07 AM IST
  • Share this:
ಬೆಂಗಳೂರು (. 09): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ನಿಂದ ಬಿಡುವು ತೆಗೆದುಕೊಂಡು ಕಾಶ್ಮೀರದಲ್ಲಿ ಸೈನಿಕರೊಂದಿಗೆ ಸೇನಾ ಕಾರ್ಯಾಚರಣೆಯಲ್ಲಿದ್ದು ಭಾರೀ ಸುದ್ದಿ ಮಾಡುತ್ತಿದ್ದಾರೆ.

ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯವರೆಗೂ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಧೋನಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಸೈನಿಕರೊಂದಿಗೆ ಅಮೂಲ್ಯವಾದ ಮಾತುಗಳನ್ನು ಆಡಿ, ಹಾಡು ಹಾಡಿ ಯೋಧರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ.

ಈ ಮಧ್ಯೆ ಎಂ ಎಸ್ ಧೋನಿ ಭಾರತೀಯ ಸೇನೆಯ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಗಳೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.

ಗಿಲ್ ಅಜೇಯ 204; ವಿಹಾರಿ ಜೊತೆಗೆ ದಾಖಲೆಯ ಜೊತೆಯಾಟ; ವಿಂಡೀಸ್​ಗೆ 373 ಟಾರ್ಗೆಟ್

ನಾಳೆ ಆಗಸ್ಟ್​ 10ರಂದು ಧೋನಿ ಲಡಾಖ್​ನ ಲೇಹ್​ಗೆ ಪ್ರಯಾಣ ಮಾಡಲಿದ್ದಾರೆ. ಹೊಸ ಕೇಂದ್ರಾಡಳಿತ ಪ್ರದೇಶವಾಗಿರುವ ಲೇಹ್ ಪ್ರದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನ ಧೋನಿ ಧ್ವಜಾರೋಹಣ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಸದ್ಯ 370 ಆರ್ಟಿಕಲ್ ಅನ್ನು ರದ್ದುಗೊಳಿಸಿದ ಕಾರಣ ಕಾಶ್ಮೀರದಲ್ಲಿ ಹೈ ಅಲರ್ಟ್ ಆಗಿರುವ ಸೇನೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತಿದೆ.

First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...