ಕ್ಯಾಪ್ಟನ್ ಕೂಲ್ ಅಂತಾನೆ ಖ್ಯಾತಿ ಹೊಂದಿರುವ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಭಾರತೀಯ ಕ್ರಿಕೆಟ್ ಗೆ ನೀಡಿದ ಕೊಡುಗೆ ಅಪಾರ ಅಂತಾನೆ ಹೇಳಬಹುದು. ಹೌದು, ಟ್ವೆಂಟಿ20 ಪಂದ್ಯಗಳ (T20 Tournament) ಟೂರ್ನಿ, ಏಕದಿನ ಅಂತಾರಾಷ್ಟ್ರೀಯ ಮತ್ತು ಟೆಸ್ಟ್ ಪಂದ್ಯಗಳ ಟೂರ್ನಿಯೇ ಆಗಿರಬಹುದು, ಎಲ್ಲದರಲ್ಲೂ ತಮ್ಮ ಕಮಾಲ್ ತೋರಿಸಿರುವ ಎಂ ಎಸ್ ಧೋನಿ ನಿಜಕ್ಕೂ ಭಾರತ ಕ್ರಿಕೆಟ್ ತಂಡ (TeamIndia) ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಇಡೀ ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ಎಂ ಎಸ್ ಧೋನಿ ಅವರ ಅಭಿಮಾನಿಗಳಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ಏನಪ್ಪಾ ಅದು ಅಂತೀರಾ? ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಅವರನ್ನು ವಯಾಕಾಮ್ 18 ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆಯಂತೆ.
ವಯಾಕಾಮ್ 18 ನ ಬ್ರ್ಯಾಂಡ್ ಅಂಬಾಸಿಡರ್ ಆದ ಮಹಿ
ನಾಲ್ಕು ಬಾರಿ ಐಪಿಎಲ್ ವಿಜೇತ ನಾಯಕ ವಯಾಕಾಮ್ 18 ನೊಂದಿಗೆ ಕೆಲಸ ಮಾಡಲಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಕ್ರೀಡೆಯನ್ನು ವೀಕ್ಷಿಸಲು ಡಿಜಿಟಲ್ ಅನ್ನು ಆದ್ಯತೆಯ ವೇದಿಕೆಯನ್ನಾಗಿ ಮಾಡಲಿದ್ದಾರೆ.
ಇದನ್ನೂ ಓದಿ: ವಡಾ ಪಾವ್ನಿಂದ ಮಸಾಲೆ ದೋಸೆವರೆಗೆ, ಇವೇ ಅಂತೆ ಭಾರತೀಯ ಕ್ರಿಕೆಟಿಗರ ಇಷ್ಟದ ಫುಡ್!
ಚೆನ್ನೈ ಸೂಪರ್ ಕಿಂಗ್ಸ್ ಐಕಾನ್, ಜಿಯೋ ಸಿನೆಮಾ, ಸ್ಪೋರ್ಟ್ಸ್ 18 ಮತ್ತು ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕಾಣಿಸಿಕೊಂಡಿರುವ ಹಲವಾರು ನೆಟ್ವರ್ಕ್ ಉಪಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರೀತಿಯಿಂದ 'ಥಲಾ' ಎಂದೇ ಖ್ಯಾತಿ ಗಳಿಸಿರುವ ಅವರು ಜಿಯೋ ಸಿನೆಮಾದ ಮುಂಬರುವ ಐಪಿಎಲ್ ಅಭಿಯಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಧೋನಿ "ನಿಮ್ಮ ನೆಚ್ಚಿನ ಕ್ರೀಡೆಯನ್ನು ನೀವು ಪ್ರಯಾಣದಲ್ಲಿ ಅಥವಾ ನಿಮ್ಮ ಸ್ವಂತ ಮನೆಯಲ್ಲಿ ಆರಾಮಾಗಿ ಕುಳಿತು ನೋಡಲು ಸಾಧ್ಯವಾದಾಗ ಮಾತ್ರವೇ ನೀವು ಆ ಕ್ರೀಡೆಯನ್ನು ಉತ್ತಮವಾಗಿ ಆನಂದಿಸುತ್ತೀರಿ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಆದರೆ ಹೀಗೆ ಎಲ್ಲವನ್ನೂ ಒಟ್ಟಿಗೆ ಎಂದರೆ ಸಂವಹನ, ಆಯ್ಕೆ ಮತ್ತು ವೈಯಕ್ತೀಕರಣವನ್ನು ನೀಡುವುದು ಈ ಡಿಜಿಟಲ್ ಪ್ಲಾಟ್ಫಾರ್ಮ್ ಮಾತ್ರ" ಎಂದು ಹೇಳಿದರು.
"ಯಾರೂ ಯೋಚಿಸಲಾಗದ ರೀತಿಯಲ್ಲಿ ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಜಿಯೋ ಸಿನೆಮಾ ಈ ಪ್ರಸ್ತಾಪವನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತಿದೆ” ಎಂದು ಕ್ಯಾಪ್ಟನ್ ಕೂಲ್ ಹೇಳಿದರು.
ಇದರ ಬಗ್ಗೆ ವಯಾಕಾಮ್ 18 ನ ಸ್ಪೋರ್ಟ್ಸ್ ಸಿಇಒ ಏನ್ ಹೇಳ್ತಾರೆ?
"ಎಂಎಸ್ ಧೋನಿ ಅವರ ನಾಯಕತ್ವ ಮತ್ತು ಆಟವನ್ನು ಬದಲಾಯಿಸುವ ಸಾಮರ್ಥ್ಯವನ್ನು ಚೆನ್ನಾಗಿ ದಾಖಲಿಸಲಾಗಿದೆ, ಅಷ್ಟೇ ಅಲ್ಲದೆ ಅವರ ವಿನಮ್ರತೆ ಮತ್ತು ಸರಳವಾದ ವ್ಯಕ್ತಿತ್ವವು ಡಿಜಿಟಲ್ ಸ್ಥಳೀಯರೊಂದಿಗೆ ಅನುರಣಿಸುತ್ತದೆ, ಅವರು ಸತ್ಯಾಸತ್ಯತೆ ಮತ್ತು ಪಾರದರ್ಶಕತೆಯನ್ನು ಗೌರವಿಸುತ್ತಾರೆ" ಎಂದು ವಯಾಕಾಮ್ 18 ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ಹೇಳಿದರು.
"ಧೋನಿ ತಮ್ಮ ಜೀವನದಲ್ಲಿ ಸಾಟಿಯಿಲ್ಲದ ಮಾನದಂಡಗಳನ್ನು ನಿಗದಿಪಡಿಸಿಕೊಂಡು ವೇಗವಾಗಿ ಬೆಳೆದಿದ್ದಾರೆ, ಇದು ಡಿಜಿಟಲ್ ನಲ್ಲಿ ಕ್ರೀಡಾ ವೀಕ್ಷಣೆಯನ್ನು ಹೇಗೆ ಉತ್ತಮವಾಗಿ ಅನುಭವಿಸಬಹುದು ಎಂಬುದರ ಕುರಿತು ನಮ್ಮ ದೃಷ್ಟಿಕೋನ ಮತ್ತು ಪ್ರಸ್ತಾಪಕ್ಕೆ ಹೊಂದಿಕೆಯಾಗುತ್ತದೆ” ಎಂದು ಅನಿಲ್ ಜಯರಾಜ್ ಹೇಳಿದರು.
ಮಾರ್ಚ್ 31 ರಿಂದ ಶುರುವಾಗಲಿದೆ ಐಪಿಎಲ್ 2023
ಮಾರ್ಚ್ 31ರಂದು ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗೂ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಈ ಋತುವಿನಲ್ಲಿ ಎಲ್ಲಾ ಪಂದ್ಯಗಳು ಯಾವುದೇ ವೆಚ್ಚವಿಲ್ಲದೆ ಜಿಯೋ ಸಿನೆಮಾದಲ್ಲಿ ನೇರ ಪ್ರಸಾರವಾಗಲಿದೆ. ಇದಲ್ಲದೆ, ಐಪಿಎಲ್ 2023 ರ ಆವೃತ್ತಿಯ ಮೂಲಕ ಜಿಯೋ ಸಿನೆಮಾ ಬಹು ಭಾಷೆಗಳಲ್ಲಿ ಮತ್ತು ಮಲ್ಟಿ-ಕ್ಯಾಮ್ ಪ್ರಸ್ತುತಿ, ಸ್ಟ್ಯಾಟ್ಸ್ ಪ್ಯಾಕ್ ಮೂಲಕ ಇಂಟರ್ ಆಕ್ಟಿವಿಟಿ ಮತ್ತು ಪ್ಲೇ ಅಲಾಂಗ್ ವೈಶಿಷ್ಟ್ಯತೆಯನ್ನು 700 ದಶಲಕ್ಷಕ್ಕೂ ಹೆಚ್ಚು ಇಂಟರ್ನೆಟ್ ಬಳಕೆದಾರರಿಗೆ ನೀಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ