ಟೀಂ ಇಂಡಿಯಾದ ಈ ಆಟಗಾರ ತಂಡದಲ್ಲಿದ್ದರೆ, 2023ರ ವಿಶ್ವಕಪ್​ನಲ್ಲಿ ಆಡುವೆ ಎಂದ ಎಬಿಡಿ

ಈ ಹಿಂದೆ ಫಿಟ್​ನೆಸ್​ನಲ್ಲಿದ್ದಾಗ ತಂಡವನ್ನು ಪ್ರತಿನಿಧಿಸಿದ್ದೆ, ಆದರೆ ಇದೀಗ ಫಿಟ್​ನೆಸ್​ ಸಮಸ್ಯೆಯಿದೆ. ಹೀಗಾಗಿ ನಾನು ಅಂತರಾಷ್ಟ್ರೀಯ ಕ್ರಿಕೆಟ್ ತೊರೆದಿರುವುದಾಗಿ ತಿಳಿಸಿದ್ದಾರೆ. 

zahir | news18
Updated:May 19, 2019, 3:13 PM IST
ಟೀಂ ಇಂಡಿಯಾದ ಈ ಆಟಗಾರ ತಂಡದಲ್ಲಿದ್ದರೆ, 2023ರ ವಿಶ್ವಕಪ್​ನಲ್ಲಿ ಆಡುವೆ ಎಂದ ಎಬಿಡಿ
@cricxtasy.com
  • News18
  • Last Updated: May 19, 2019, 3:13 PM IST
  • Share this:
ವಿಶ್ವದ ಸ್ಪೋಟಕ ಆಟಗಾರ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮೇ 23, 2018ರಂದು​ ಅಂತರಾಷ್ಟ್ರೀಯ ಕ್ರಿಕೆಟ್​ಗೆ  ವಿದಾಯ ಹೇಳಿದ್ದರು. ಇದೀಗ 2019ರ ವಿಶ್ವಕಪ್​ ಆರಂಭವಾಗುವ ಮುನ್ನ ಎಬಿಡಿ ಯಾಕೆ ವರ್ಲ್ಡ್​​ಕಪ್​ನಲ್ಲಿ ಕಾಣಿಸುತ್ತಿಲ್ಲ. ಉತ್ತಮ ಫಾರ್ಮ್​ನಲ್ಲಿದ್ದರೂ ಈ ಆಟಗಾರ ಯಾಕೆ ತಂಡದಲ್ಲಿಲ್ಲ ಎಂಬ ಪ್ರಶ್ನೆಯೊಂದು ಉದ್ಭವಗೊಂಡಿದೆ. ಇದಕ್ಕೆ ಖುದ್ದು ಎಬಿಡಿ ಅಚ್ಚರಿಯ ಉತ್ತರ ನೀಡಿದ್ದಾರೆ.

ಖಾಸಗಿ ಚಾನೆಲ್​ವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಡಿವಿಲಿಯರ್ಸ್​, ಒಂದು ವೇಳೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2023 ರ ವಿಶ್ವಕಪ್​ನಲ್ಲಿ ಭಾಗವಹಿಸಿದರೆ, ಖಂಡಿತ ನಾನು ಅಂತರಾಷ್ಟ್ರೀಯ ಕ್ರಿಕೆಟ್​ಗೆ ಮರಳುವೆ.  2023ರ ವಿಶ್ವಕಪ್​ ವೇಳೆಗೆ ನನಗೆ 39 ವರ್ಷಗಳಾಗಿರುತ್ತವೆ. ಆಗಲೂ ಧೋನಿ ತಂಡದಲ್ಲಿದ್ದರೆ ನಾನು ಕೂಡ ವಿಶ್ವಕಪ್​ ಕ್ರಿಕೆಟ್​ ಆಡುವುದಾಗಿ ಹೇಳಿದ್ದಾರೆ.

ಈ ಹಿಂದೆ ಫಿಟ್​ನೆಸ್​ನಲ್ಲಿದ್ದಾಗ ತಂಡವನ್ನು ಪ್ರತಿನಿಧಿಸಿದ್ದೆ, ಆದರೆ ಇದೀಗ ಫಿಟ್​ನೆಸ್​ ಸಮಸ್ಯೆಯಿದೆ. ಹೀಗಾಗಿ ನಾನು ಅಂತರಾಷ್ಟ್ರೀಯ ಕ್ರಿಕೆಟ್ ತೊರೆದಿರುವುದಾಗಿ ತಿಳಿಸಿದ್ದಾರೆ.  ಸದ್ಯ ಐಪಿಎಲ್​ ಲೀಗ್​ ಅನ್ನು ಮಾತ್ರ ಎಬಿಡಿ ಕೇಂದ್ರೀಕರಿಸಿದ್ದು, ಇತ್ತೀಚೆಗೆ ಆಸ್ಟ್ರೇಲಿಯನ್ ಲೀಗ್ ಬಿಗ್​ಬ್ಯಾಷ್​ ನಿಂದ ಸಹ ಡಿವಿಲಿಯರ್ಸ್​ ನಿವೃತ್ತಿ ಘೋಷಿಸಿದ್ದರು.

37 ವರ್ಷದ ಮಹೇಂದ್ರ ಸಿಂಗ್ ಧೋನಿ ಫಿಟ್​ನೆಸ್​ ಅನ್ನು ಕಾಪಾಡಿಕೊಳ್ಳುವ ಮೂಲಕ ಈಗಲೂ ಇಂಟರ್​ನ್ಯಾಷನಲ್​ ಪಂದ್ಯವಾಡುತ್ತಿರುವುದನ್ನು ಪರೋಕ್ಷವಾಗಿ ಹೊಗಳಿದ ಎಬಿಡಿ, ಮುಂದೆ ಧೋನಿ ತಂಡದಲ್ಲಿದ್ದರೆ  ತಾನು ಕೂಡ ಮರಳುವುದಾಗಿ  ತಿಳಿಸಿದರು.


 

ಇದನ್ನೂ ಓದಿ: ನಿಮಗೆ ಗರ್ಲ್​ಫ್ರೆಂಡ್ ಸಿಗದಿರಲು ಇದು ಕೂಡ ಕಾರಣವಾಗಿರಬಹುದು..!ಇದನ್ನೂ ಓದಿ: VIDEO: ಬಾಲಕಿಯ ಕೆಳಭಾಗವನ್ನು ಮುಟ್ಟಿದ ಬಾಲಕನನ್ನು ನಡುರಸ್ತೆಯಲ್ಲೇ ನಗ್ನಗೊಳಿಸಿದ ತಾಯಿ: ಇದೆಂಥಾ ಶಿಕ್ಷೆ?

ಇದನ್ನೂ ಓದಿ: ಮಾನವೀಯತೆ ಮರೆದ ವಿಶ್ವದ ಶ್ರೇಷ್ಠ ಆಟಗಾರ..!

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?

 
First published:May 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ