ಧೋನಿ ಕಂಬ್ಯಾಕ್ ಮಾಡಲ್ಲ ಎಂದ ಭಜ್ಜಿಗೆ ರೈನಾರಿಂದ ಮುಟ್ಟಿ ನೋಡುವಂತಹ ಏಟು!

Suresh Raina: ಭಜ್ಜಿ ಈ ರೀತಿಯ ಹೇಳಿಕೆ ನೀಡಿದ ಬೆನ್ನಲ್ಲೆ ಟೀಂ ಇಂಡಿಯಾ ಅನುಭವಿ ಬ್ಯಾಟ್ಸ್​ಮನ್​, ಧೋನಿ ಆಪ್ತ ಸುರೇಶ್ ರೈನಾ ಎಂಎಸ್​ಡಿ ಪರವಾಗಿ ನಿಂತಿದ್ದಾರೆ. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಲು ಎಂಎಸ್‌ ಧೋನಿ ಭರ್ಜರಿಯ ತಯಾರಿ ನಡೆಸಿದ್ದಾರೆ. ಭಾರತ ತಂಡದ ಪರ ಅವರು ಆಡುತ್ತಾರೆ ಎಂದು ಹೇಳಿದ್ದಾರೆ.

news18-kannada
Updated:June 3, 2020, 12:49 PM IST
ಧೋನಿ ಕಂಬ್ಯಾಕ್ ಮಾಡಲ್ಲ ಎಂದ ಭಜ್ಜಿಗೆ ರೈನಾರಿಂದ ಮುಟ್ಟಿ ನೋಡುವಂತಹ ಏಟು!
ಎಂ ಎಸ್ ಧೋನಿ ಹಾಗೂ ಸುರೇಶ್ ರೈನಾ.
  • Share this:
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವಿಚಾರಗಳು ದಿನ ಕಳೆದಂತೆ ಭಾರೀ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ಇತ್ತೀಚೆಗಷ್ಟೆ ಟೀಂ ಇಂಡಿಯಾದ ಆಟಗಾರ ಹರ್ಭಜನ್ ಸಿಂಗ್ ಕೂಡ ಧೋನಿ ನಿವೃತ್ತಿ ಬಗ್ಗೆ ಬಹಿರಂಗ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಧೋನಿ ಐಪಿಎಲ್ ಆಡಲಿರುವುದು ನಾನು ಶೇ. 100ರಷ್ಟು ಖಚಿತಪಡಿಸುತ್ತೇನೆ. ಆದರೆ, ಭಾರತ ಪರ ಮತ್ತೆ ಅವರು ಆಡಲು ಬಯಸುತ್ತಾರೆ ಎಂದು ಭಾವಿಸುವುದಿಲ್ಲ ಎಂದಿದ್ದರು.

ಅಲ್ಲದೆ 'ಧೋನಿ ಈಗಾಗಲೇ ಆಟ ಮುಗಿಸಿದ್ದಾರೆ. ಮತ್ತೆ ಮತ್ತೆ ನೀಲಿ ಜರ್ಸಿಯನ್ನು ಧರಿಸಲು ಬಯಸುತ್ತಾರೆ ಎಂದು ನನಗನಿಸುವುದಿಲ್ಲ. 2019ರ ಐಸಿಸಿ ವಿಶ್ವಕಪ್‍ನ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿರುವುದು ಅವರ ಕೊನೆಯ ಪಂದ್ಯ ಎಂಬುದು ನನ್ನ ಅನಿಸಿಕೆ. ಅಲ್ಲಿಗೆ ಅವರು ಭಾರತದ ಪರ ಆಟ ಮುಗಿಸಲಿದ್ದಾರೆ ಎಂದು ಭಾವಿಸುತ್ತೇನೆ' ಎಂದು ಅನುಭವಿ ಆಫ್ ಸ್ಪಿನ್ನರ್ ಹೇಳಿದ್ದರು.

ವಿವಾದದಲ್ಲಿ ಯುವರಾಜ್​ ಸಿಂಗ್: ಕ್ಷಮೆ ಕೋರುವಂತೆ ಆಗ್ರಹ..!

ಸದ್ಯ ಭಜ್ಜಿ ಈ ರೀತಿಯ ಹೇಳಿಕೆ ನೀಡಿದ ಬೆನ್ನಲ್ಲೆ ಟೀಂ ಇಂಡಿಯಾ ಅನುಭವಿ ಬ್ಯಾಟ್ಸ್​ಮನ್​, ಧೋನಿ ಆಪ್ತ ಸುರೇಶ್ ರೈನಾ ಎಂಎಸ್​ಡಿ ಪರವಾಗಿ ನಿಂತಿದ್ದಾರೆ. 'ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಲು ಎಂಎಸ್‌ ಧೋನಿ ಭರ್ಜರಿಯ ತಯಾರಿ ನಡೆಸಿದ್ದಾರೆ. ಭಾರತ ತಂಡದ ಪರ ಅವರು ಆಡುತ್ತಾರೆ' ಎಂದು ಹೇಳಿದ್ದಾರೆ.

ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಸುರೇಶ್ ರೈನಾ, 'ಅಭ್ಯಾಸ ಶಿಬಿರದಲ್ಲಿ ಮೊದಲ ಮೂರು ದಿನಗಳನ್ನು ಅವರು ಬಹಳ ಸರಳವಾಗಿ ತೆಗೆದುಕೊಂಡು ಜಿಮ್​ನಲ್ಲಿ ವರ್ಕ್ ಔಟ್ ಮಾಡುತ್ತಿದ್ದರು. ಆದರೆ, ಬ್ಯಾಟಿಂಗ್ ವೇಳೆ ಅದ್ಭುತ ಹೊಡೆತಗಳನ್ನು ಆಡುತ್ತಿದ್ದರು. ಅವರ ಫಿಟ್ನೆಸ್ ಕೂಡ ಭರ್ಜರಿಯಾಗಿದ್ದು ಕಿಂಚಿತ್ತೂ ದಣಿದವರಂತೆ ಕಾಣಲಿಲ್ಲ' ಎಂದಿದ್ದಾರೆ.

ಹಾರ್ದಿಕ್​​ ಮಾತ್ರವಲ್ಲ ವಿವಾಹಕ್ಕೂ ಮುಂಚೆ ತಂದೆಯಾಗಿದ್ದಾರೆ ಈ ಸ್ಟಾರ್​​ ಕ್ರಿಕೆಟಿಗರು!

'ಕಠಿಣ ಪರಿಶ್ರಮ ವಹಿಸುವವರ ಬೆನ್ನಹಿಂದೆ ಎಲ್ಲರ ಶುಭ ಹಾರೈಕೆ ನಿಲ್ಲುತ್ತದೆ. ಶಿಬಿರದಲ್ಲಿ ನಾನು, ಅಂಬಾಟಿ ರಾಯುಡು, ಮುರಳಿ ವಿಜಯ್ ಮತ್ತು ಧೋನಿ ಜೊತೆಯಾಗಿ ಬ್ಯಾಟಿಂಗ್‌ ಮಾಡುತ್ತಿದ್ದೆವು. ನಮ್ಮ ಬ್ಯಾಟಿಂಗ್‌ ಮುಗಿದರೂ ಕೂಡ, ಧೋನಿ 2-4 ಗಂಟೆಳ ಚೆನ್ನೈನ ಬಿಸಿ ಹವಾಗುಣದಲ್ಲಿ ಬ್ಯಾಟಿಂಗ್‌ ಮುಂದುವರಿಸುತ್ತಿದ್ದರು. ಬೆಳಗ್ಗೆ ಜಿಮ್‌ ಮುಗಿಸಿ ಸಂಜೆ 3 ತಾಸು ಬ್ಯಾಟಿಂಗ್‌ ಮಾಡುತ್ತಿದ್ದರು' ಎಂದು ರೈನಾ ಹೇಳಿದ್ದಾರೆ.
First published: June 3, 2020, 12:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading