MS Dhoni: ಟಿ-20 ವಿಶ್ವಕಪ್​ಗೆ ಧೋನಿ ಬೇಕೋ- ಬೇಡವೋ?; ಕೋಚ್ ರವಿಶಾಸ್ತ್ರಿ ಹೇಳಿದ್ದೇನು ಗೊತ್ತಾ?

ಟಿ-20 ವಿಶ್ವಕಪ್​​ನಲ್ಲಿ ಭಾರತ ಪರ ಆಯ್ಕೆಯಾಗಲಿರುವ 15 ಆಟಗಾರರು ಯಾರೆಲ್ಲ ಎಂಬ ಬಗ್ಗೆ ಐಪಿಎಲ್​​ನಲ್ಲಿ ಗೊತ್ತಾಗಲಿದೆ. ಧೋನಿ ನೀಡುವ ಪ್ರದರ್ಶನ ಸಹ ಇಲ್ಲಿ ಘಣನೆಗೆ ತೆಗೆದುಕೊಳ್ಳಲಾಗುತ್ತದೆ- ರವಿಶಾಸ್ತ್ರಿ

ಎಂಎಸ್ ಧೋನಿ

ಎಂಎಸ್ ಧೋನಿ

  • Share this:
ಬೆಂಗಳೂರು (ನ. 27): ಮುಂದಿನ ತಿಂಗಳು ನಡೆಯಲಿರುವ ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಈಗಾಗಲೇ ಪ್ರಕಟವಾಗಿದೆ. ಆದರೆ, ಮಹೇಂದ್ರ ಸಿಂಗ್ ಧೋನಿ ಮಾತ್ರ ಇದರಲ್ಲೂ ಕಣಕ್ಕಿಳಿಯುತ್ತಿಲ್ಲ.

ಏಕದಿನ ವಿಶ್ವಕಪ್ ಅಂತ್ಯಕಂಡು ಸುಮಾರು 4 ತಿಂಗಳು ಕಳೆದರು ಧೋನಿ ಮಾತ್ರ ಮೈದಾನಕ್ಕಿಳಿಯಲಿಲ್ಲ. ಇಂಜುರಿಯಿಂದ ಧೋನಿ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ವಿಶ್ರಾಂತಿಯಲ್ಲಿದ್ದಾರೆ.

ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ನಡೆಯಲಿದ್ದು ಎಲ್ಲಾ ತಂಡಗಳು ಈಗಿನಿಂದಲೇ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದೆ. ಇತ್ತ ಧೋನಿ ಟಿ-20 ವಿಶ್ವಕಪ್​ಗೆಕೆ ಲಭ್ಯರಿದ್ದಾರ? ಎಂಬ ಮಾಹಿತಿ ಈವರೆಗೆ ಹೊರಬಿದ್ದಿಲ್ಲ. ರಿಷಭ್ ಪಂತ್ ಪದೇಪದೇ ವೈಫಲ್ಯ ಅನುಭವಿಸುತ್ತಿದ್ದಾರೆ.

MS Dhoni: Don't speculate on MS Dhoni, wait till the IPL: Ravi Shastri
ರವಿಶಾಸ್ತ್ರಿ, ಟೀಂ ಇಂಡಿಯಾ ಕೋಚ್


ವಿಂಡೀಸ್ ವಿರುದ್ಧದ ಸರಣಿಯಿಂದ ಟೀಂ ಇಂಡಿಯಾ ಸ್ಟಾರ್ ಆಟಗಾರ ಔಟ್?; ಹೊಸ ವಿಕೆಟ್ ಕೀಪರ್​ಗೆ ಸ್ಥಾನ!

ಹೀಗಿರುವಾಗ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ಧೋನಿ ವಿಚಾರವಾಗಿ ಮಾತನಾಡಿದ್ದಾರೆ. 2020 ಟಿ-20 ವಿಶ್ವಕಪ್ ಕೂಟದಲ್ಲಿ ಧೋನಿ ಭಾಗವಹಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಶಾಸ್ತ್ರಿ ಹೇಳಿಕೆ ನೀಡಿದ್ದು, "ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಧೋನಿ ನೀಡುವ ಪ್ರದರ್ಶನದ ಮೇಲೆ ಅವರ ಕ್ರಿಕೆಟ್​​ ಭವಿಷ್ಯ ನಿರ್ಧಾರವಾಗಲಿದೆ" ಎಂದು ತಿಳಿಸಿದ್ದಾರೆ.

"ಟಿ-20 ವಿಶ್ವಕಪ್​​ನಲ್ಲಿ ಭಾರತ ಪರ ಆಯ್ಕೆಯಾಗಲಿರುವ 15 ಆಟಗಾರರು ಯಾರೆಲ್ಲ ಎಂಬ ಬಗ್ಗೆ ಐಪಿಎಲ್​​ನಲ್ಲಿ ಗೊತ್ತಾಗಲಿದೆ. ಧೋನಿ ನೀಡುವ ಪ್ರದರ್ಶನ ಸಹ ಇಲ್ಲಿ ಘಣನೆಗೆ ತೆಗೆದುಕೊಳ್ಳಲಾಗುತ್ತದೆ" ಎಂದಿದ್ದಾರೆ.

ಐಪಿಎಲ್​​ಗೂ ಮುನ್ನ ಎಂಎಸ್​​ಡಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾಗವಹಿಸಲಿದ್ದಾರೆ. ಆದರೆ, ಭಾರತ ತಂಡದ ಪರವಾಗಿ ಅಲ್ಲ. ಐಸಿಸಿ ಮಾನ್ಯತೆ ನೀಡಿರುವ ವಿಶ್ವ ಇಲೆವೆನ್ ವಿರುದ್ಧ ಸೆಣೆಸಾಡಲು ಏಷ್ಯಾ ಇಲೆವೆನ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಭಾರತದ 7 ಆಟಗಾರರನ್ನು ನೀಡಲು ಬಾಂಗ್ಲಾ ಕ್ರಿಕೆಟ್ ಬೋರ್ಡ್ ಬಿಸಿಸಿಐಗೆ ಮನವಿ ಮಾಡಿದೆ.

ನೂತನ ಟೆಸ್ಟ್​ ರ‍್ಯಾಂಕಿಂಗ್‌ ಪಟ್ಟಿ ಪ್ರಕಟ: ಕನ್ನಡಿಗನ ಸರ್ವಶ್ರೇಷ್ಠ ಸಾಧನೆ

ಇದಕ್ಕೆ ಬಿಸಿಸಿಐ ಅನುಮತಿ ನೀಡಿದ್ದೆ ಆದಲ್ಲಿ ಧೋನಿ ಆಟವನ್ನು ಅಭಿಮಾನಿಗಳು ನೋಡಬಹುದು. ಕೇವಲ ಧೋನಿ ಮಾತ್ರವಲ್ಲದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್​ಪ್ರೀತ್​​ ಬುಮ್ರಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ರವೀಂದ್ರ ಜಡೇಜಾ ಹೆಸರನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನೀಡಿದೆ.

First published: