ಧೋನಿ ಭವಿಷ್ಯವನ್ನು ಕಗ್ಗಂಟಾಗಿಸಬೇಡಿ, ಗೌರವಯುತವಾಗಿ ನಡೆಸಿಕೊಳ್ಳಿ; ಬಿಸಿಸಿಐಗೆ ಕುಂಬ್ಳೆ ಕಿವಿಮಾತು!

ವಿಶ್ವ ಕ್ರಿಕೆಟ್​ ಕಂಡ ಚಾಣಾಕ್ಷ ನಾಯಕನಾಗಿ, ಅತ್ಯುತ್ತಮ ವಿಕೆಟ್ ಕೀಪರ್​ ಆಗಿ, ವಿಶ್ವದ ಗ್ರೇಟ್ ಫಿನಿಶರ್ ಆಗಿ, ಇಡೀ ವಿಶ್ವ ಹಾಗೂ ಭಾರತ ಕ್ರಿಕೆಟ್ ಕ್ಷೇತ್ರಕ್ಕೆ ಧೋನಿ ನೀಡಿರುವ ಕೊಡುಗೆ ಅಪಾರ. ಇಂತಹ ಮಹಾನ್ ಆಟಗಾರನಿಗೆ ಸಚಿನ್ ಅವರಿಗೆ ನೀಡಿದಂತಹ ವಿದಾಯ ನೀಡಿದರೆ ತಪ್ಪೇನು? ಎಂಬುದು ಅವರ ಅಭಿಮಾನಿಗಳ ಮನದಾಸೆ. ಇದಕ್ಕೆ ಈಗ ಕುಂಬ್ಳೆ ಕೂಡ ಧ್ವನಿ ಗೂಡಿಸಿದ್ದಾರೆ.

Rajesh Duggumane | news18-kannada
Updated:September 9, 2019, 4:11 PM IST
ಧೋನಿ ಭವಿಷ್ಯವನ್ನು ಕಗ್ಗಂಟಾಗಿಸಬೇಡಿ, ಗೌರವಯುತವಾಗಿ ನಡೆಸಿಕೊಳ್ಳಿ; ಬಿಸಿಸಿಐಗೆ ಕುಂಬ್ಳೆ ಕಿವಿಮಾತು!
ಎಂಎಸ್​ ಧೋನಿ
  • Share this:
ಎಂಎಸ್​ ಧೋನಿ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಆಡಲಿದ್ದಾರಾ ಅಥವಾ ನಿವೃತ್ತಿ ಪಡೆದುಕೊಳ್ಳುತ್ತಾರಾ? ನಿವೃತ್ತಿ ಹೊಂದುತ್ತಾರೆ ಎಂದಾದರೆ ಅದು ಯಾವಾಗ? ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಕ್ಕೆ ಅವರನ್ನು ಆಯ್ಕೆ ಮಾಡಿಕೊಳ್ಳದೆ ಇರುವುದೇಕೆ? ಹೀಗೆಯೆ ಧೋನಿ ಅಭಿಮಾನಿಗಳು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ. ಭಾರತ ಮಾಜಿ ಸ್ಪಿನ್​ ಮಾಂತ್ರಿಕ ಅನಿಲ್​ ಕುಂಬ್ಳೆ ಈ ವಿಚಾರದಲ್ಲಿ ಮೌನ ಮುರಿದಿದ್ದಾರೆ.

28 ವರ್ಷಗಳ ಬಳಿಕ ಭಾರತದ ವಿಶ್ವಕಪ್ ಕನಸು ನನಸು ಮಾಡಿದ್ದ ಹಾಗೂ ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ವಿಶ್ವದ ಗ್ರೇಟ್ ಫಿನಿಶರ್​ಗಳಲ್ಲಿ ಒಬ್ಬರು ಎನಿಸಿಕೊಂಡವರು ಧೋನಿ. ವಿಶ್ವ ಕ್ರಿಕೆಟ್​ ಕಂಡ ಚಾಣಾಕ್ಷ ನಾಯಕನಾಗಿ, ಅತ್ಯುತ್ತಮ ವಿಕೆಟ್ ಕೀಪರ್​ ಆಗಿ, ವಿಶ್ವದ ಗ್ರೇಟ್ ಫಿನಿಶರ್ ಆಗಿ, ಇಡೀ ವಿಶ್ವ ಹಾಗೂ ಭಾರತ ಕ್ರಿಕೆಟ್ ಕ್ಷೇತ್ರಕ್ಕೆ ಧೋನಿ ನೀಡಿರುವ ಕೊಡುಗೆ ಅಪಾರ. ತಮ್ಮ ತಾಳ್ಮೆಯ ನಾಯಕತ್ವ ಗುಣದಿಂದಲೇ ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಇಂತಹ ಮಹಾನ್ ಆಟಗಾರನಿಗೆ ಸಚಿನ್ ಅವರಿಗೆ ನೀಡಿದಂತಹ ವಿದಾಯ ನೀಡಿದರೆ ತಪ್ಪೇನು? ಎಂಬುದು ಅವರ ಅಭಿಮಾನಿಗಳ ಮನದಾಸೆ. ಇದಕ್ಕೆ ಈಗ ಕುಂಬ್ಳೆ ಕೂಡ ಧ್ವನಿ ಗೂಡಿಸಿದ್ದಾರೆ.

ಸಿಎನ್​ಎನ್​ ನ್ಯೂಸ್​18 ಜೊತೆ ಮಾತನಾಡಿದ ಕುಂಬ್ಳೆ, ಧೋನಿ ಅವರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂದು ಬಿಸಿಸಿಐಗೆ ಕಿವಿಮಾತು ಹೇಳಿದರು. “ಧೋನಿ ನಿವೃತ್ತಿ ಹೊಂದುತ್ತೇನೆ ಎಂದು ಘೋಷಿಸಿದಾಗ ಅವರಿಗೆ ಸರಿಯಾದ ರೀತಿಯಲ್ಲಿ ಸೆಂಡ್​ಆಫ್​ ಕೊಡಬೇಕು. ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಅವರು ಎಲ್ಲ ಪಂದ್ಯ ಆಡಬೇಕು,” ಎಂದು ಕುಂಬ್ಳೆ ಒತ್ತಾಯಿಸಿದರು.

ಇದನ್ನೂ ಓದಿ:  ಧೋನಿ ಗುಡ್​ಬೈ? ನಿವೃತ್ತಿ ಬಳಿಕ ಮಾಡ್ತಾರಂತೆ ಈ ಕೆಲಸ..!

ಒಂದೊಮ್ಮೆ ಧೋನಿ ಟಿ20ಗೆ ಆಯ್ಕೆ ಆಗದ್ದಿದ್ದರೆ ಎನ್ನುವ ಪ್ರಶ್ನೆಗೆ ಕುಂಬ್ಳೆ ಉತ್ತರಿಸುವ ರೀತಿಯೇ ಬೇರೆ. “ಧೋನಿ ಚುಟುಕು ವಿಶ್ವಕಪ್​ಗೆ ಆಯ್ಕೆಯಾಗಬೇಕು. ಅದಕ್ಕೆ ಅಗತ್ಯವಿರುವ ಕ್ರಮದ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರು ಚರ್ಚೆ ನಡೆಸಬೇಕು. ಏಕೆಂದರೆ ಅವರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುವುದು ನಮ್ಮ ಕರ್ತವ್ಯ,” ಎಂದಿದ್ದಾರೆ ಭಾರತದ ಮಾಜಿ ಬೌಲರ್​. ಈ ಮೂಲಕ ಈ ಬಾರಿಯ ಚುಟುಕು ವಿಶ್ವಕಪ್​ನಲ್ಲಿ ಧೋನಿ ಆಡಲೇಬೇಕು ಎಂದು ಒತ್ತಾಯಿಸಿದರು.

First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ