Happy Birthday Dhoni: ಧೋನಿ ಹುಟ್ಟುಹಬ್ಬಕ್ಕೆ ವಿಂಡೀಸ್​​ ಕ್ರಿಕೆಟಿಗನಿಂದ ಸ್ಮರಣೀಯ ಗಿಫ್ಟ್​; ಬ್ರಾವೊ ಡಿಜೆ ಹಾಡು ರಿಲೀಸ್​

Happy Birthday Dhoni: ಕ್ರಿಕೆಟ್​ ಲೋಕದಲ್ಲಿ ಮಾತ್ರವಲ್ಲದೆ, ಸಂಗೀತ ಲೋಕದಲ್ಲೂ ಪ್ರಸಿದ್ಧಿ ಪಡೆದಿರುವ ಬ್ರಾವೊ ಅವರು ಮಾಹಿ ಹುಟ್ಟುಹಬ್ಬಕ್ಕೆ ‘ನಂಬರ್ 7‘ ಎಂಬ ಹಾಡನ್ನು ಸಿದ್ಧಪಡಿಸಿ ಬೆಸ್ಟ್​ ಗಿಫ್ಟ್​ ನೀಡಿದ್ದಾರೆ. ಹಾಡಿನಲ್ಲಿ ಧೋನಿಯನ್ನು ಕೊಂಡಾದಿದ್ದಾರೆ. ಅಷ್ಟೆ ಅಲ್ಲದೆ, ಮಾಹಿ ಸಾಧನೆಯನ್ನು ಹಾಡಿ ಹೊಗಲಿದ್ದಾರೆ ಜೊತೆಗೆ ಫಾರ್​ ಮೈ ಬ್ರದರ್​ ....ಎನದರ್​ ಮದರ್​ ಎಂದು ಹೇಳಿದ್ದಾರೆ. ಇಷ್ಟರಲ್ಲೇ ಧೋನಿ ಮತ್ತು ಬ್ರಾವೊ ಅವರ ಸಂಬಂಧ ಹೇಗಿದೆ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ

ಮಹೇಂದ್ರ ಸಿಂಗ್​ ಧೋನಿ

 • Share this:
  ಟೀಂ ಇಂಡಿಯಾದ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ನಾಳೆ (ಜು.7) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಾಹಿ ಹುಟ್ಟುಹಬ್ಬಕ್ಕೆ ವೆಸ್ಟ್​ ಇಂಡೀಸ್​ ಆಲ್​ರೌಂಡರ್​​ ಡ್ವೇನ್ ಬ್ರಾವೊ ವಿಶೇಷವಾಗಿ ಶುಭಾಶಯ ಕೋರಲು ‘ನಂಬರ್​ 7’ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಅವರೇ ಹಾಡಿದ್ದು, ಸದ್ಯ  ಡಿಜೆ ಬ್ರಾವೊ ಅವರ ಯ್ಯೂಟೂಬ್​ ಖಾತೆಯಲ್ಲಿ ಹಾಡು ಬಿಡುಗಡೆಗೊಂಡಿದೆ.

  ಕ್ರಿಕೆಟ್​ ಲೋಕದಲ್ಲಿ ಮಾತ್ರವಲ್ಲದೆ, ಸಂಗೀತ ಲೋಕದಲ್ಲೂ ಪ್ರಸಿದ್ಧಿ ಪಡೆದಿರುವ ಬ್ರಾವೊ ಅವರು ಮಾಹಿ ಹುಟ್ಟುಹಬ್ಬಕ್ಕೆ ‘ನಂಬರ್ 7‘ ಎಂಬ ಹಾಡನ್ನು ಸಿದ್ಧಪಡಿಸಿ ಬೆಸ್ಟ್​ ಗಿಫ್ಟ್​ ನೀಡಿದ್ದಾರೆ. ಹಾಡಿನಲ್ಲಿ ಧೋನಿಯನ್ನು ಕೊಂಡಾದಿದ್ದಾರೆ. ಅಷ್ಟೆ ಅಲ್ಲದೆ, ಮಾಹಿ ಸಾಧನೆಯನ್ನು ಹಾಡಿ ಹೊಗಲಿದ್ದಾರೆ ಜೊತೆಗೆ ಫಾರ್​ ಮೈ ಬ್ರದರ್​ ....ಎನದರ್​ ಮದರ್​ ಎಂದು ಹೇಳಿದ್ದಾರೆ. ಇಷ್ಟರಲ್ಲೇ ಧೋನಿ ಮತ್ತು ಬ್ರಾವೊ ಅವರ ಸಂಬಂಧ ಹೇಗಿದೆ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

  ಇನ್ನು ಬ್ರಾವೊಗೆ ತಲ ಧೋನಿ ಮೇಲೆ ಕೊಂಚ ಪ್ರೀತಿ ಜಾಸ್ತಿಯೇ. ಐಪಿಎಲ್​ನಲ್ಲಿ ಇವರಿಬ್ಬರು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಆಡುತ್ತಿದ್ದಾರೆ. ಹಾಗಾಗಿ ಇಬ್ಬರಿಬ್ಬರ ಸಂಬಂಧ  ಅಣ್ಣ-ತಮ್ಮರಂತಿದೆ. ಬ್ರಾವೊ ತನ್ನ ಬ್ರದರ್​​ ಹುಟ್ಟುಹಬ್ಬಕ್ಕೆ ಹಾಡಿನ ಮೂಲಕ ವಿಶ್​ ಮಾಡಿದ್ದಾರೆ. ಮೊದಲ ಬಾರಿಗೆ ವಿದೇಶ ಕ್ರಿಕೆಟ್​ ತಾರೆಯೊಬ್ಬರು ಭಾರತೀಯ ಕ್ರಿಕೆಟ್ ಆಟಗಾರನ ಹುಟ್ಟುಹಬ್ಬಕ್ಕೆ ಹಾಡಿನ ಮೂಲಕ ಶುಭಾಶಯ ಕೋರಿದ್ದಾರೆ.     ಬ್ರಾವೊ ಬಿಡುಗಡೆ ಮಾಡಿದ ‘ನಂಬರ್​ 7’ ಹಾಡು ಯ್ಯೂಟೂಬ್​ನಲ್ಲಿ ಬಿಡುಗಡೆಗೊಂಡ 66 ನಿಮಿಷಗಳಲ್ಲಿ 54 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಕಂಡಿದೆ. ಅನೇಕ ಅಭಿಮಾನಿಗಳು ಕಾಮೆಂಟ್​ ಬರೆಯುವ ಮೂಲಕ ತಲ ಮಾಹಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

  ಇನ್ನು ಬ್ರಾವೊ ಈಗಾಗಲೇ ಕೆಲವು ಹಾಡುಗಳನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ‘ಡಿಜೆ ಬ್ರಾವೊ ಚಾಂಪಿಯನ್’​​​ ಎಂಬ ಹಾಡು ಜನಪ್ರಿಯತೆ ಪಡೆದಿತ್ತು. ಇದೀಗ ಮಾಹಿಗಾಗಿ ನಂಬರ್​​ 7 ಹಾಡು ರಚಿಸಿ, ತಾವೇ ಹಾಡಿ ಬಿಡುಗಡೆ ಮಾಡಿದ್ದಾರೆ.

  ‘ಮಾಸ್ಟರ್ ಪೀಸ್’ ನಿರ್ದೇಶಕನ ಸಿನಿಮಾದಲ್ಲಿ ರಿಯಲ್​ ಸ್ಟಾರ್​; ಕ್ರಾಂತಿಕಾರಿ ಕಥೆ ಹೇಳಲು ಹೊರಟಿರುವ ಉಪೇಂದ್ರ

  ಇದೆಂಥಾ ಫೋಟೋಶೂಟ್!; ತುಂಬಿದ ಗರ್ಭಿಣಿ ಹೊಟ್ಟೆಯನ್ನು ಮುತ್ತಿಕ್ಕಿದ ಜೇನು ನೊಣಗಳು!
  Published by:Harshith AS
  First published: