ಧೋನಿ ನಿನ್ನ ಕ್ರಿಕೆಟ್ ಜೀವನವನ್ನೇ ಅಂತ್ಯಗೊಳಿಸಲಿದ್ದಾರೆ; ಸ್ಟೋಕ್ಸ್​ಗೆ ಎಚ್ಚರಿಕೆ ನೀಡಿದ ಶ್ರೀಶಾಂತ್

ಬೆನ್ ಸ್ಟೋಕ್ಸ್ ಅವರು ಧೋನಿ ವಿರುದ್ಧ ಎಂದಿಗೂ ಆಡುವುದಿಲ್ಲ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಅವರು (ಧೋನಿ) ಯಾವುದನ್ನೂ ಮರೆಯುವುದಿಲ್ಲ- ಶ್ರೀಶಾಂತ್

news18-kannada
Updated:June 9, 2020, 10:10 AM IST
ಧೋನಿ ನಿನ್ನ ಕ್ರಿಕೆಟ್ ಜೀವನವನ್ನೇ ಅಂತ್ಯಗೊಳಿಸಲಿದ್ದಾರೆ; ಸ್ಟೋಕ್ಸ್​ಗೆ ಎಚ್ಚರಿಕೆ ನೀಡಿದ ಶ್ರೀಶಾಂತ್
ಬೆನ್ ಸ್ಟೋಕ್ಸ್​, ಎಂಎಸ್ ಧೋನಿ ಹಾಗೂ ಶ್ರೀಶಾಂತ್.
  • Share this:
ಕಳೆದ ವರ್ಷ ನಡೆದ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಇತ್ತೀಚೆಗಷ್ಟೆ ಟೀಕಿಸಿದ್ದ ಇಂಗ್ಲೆಂಡ್ ಆಲ್​ರೌಂಡರ್ ಬೆನ್ ಸ್ಟೋಕ್ಸ್​ಗೆ ಭಾರತದ ವೇಗಿ ಶೀಶಾಂತ್ ಮುಟ್ಟಿನೋಡುವಂತಹ ಉತ್ತರ ಕೊಟ್ಟಿದ್ದಾರೆ. ಮನಸ್ಸು ಮಾಡಿದರೆ ಎಂಎಸ್​ಡಿ ನಿನ್ನ ಕ್ರಿಕೆಟ್ ಜೀವನವನ್ನೇ ಕೊನೆಗೊಳಿಸಲಿದ್ದಾರೆ ಎಂದು ಸ್ಟೋಕ್ಸ್​ಗೆ ಶ್ರೀಶಾಂತ್ ಎಚ್ಚರಿಕೆ ನೀಡಿದ್ದಾರೆ.

2019 ಏಕದಿನ ವಿಶ್ವಕಪ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ಸೋಲು ಅನುಭವಿಸಿತ್ತು. ಬರ್ಮಿಂಗ್‌ಹ್ಯಾಮ್‌ನಲ್ಲಿ ಆತಿಥೇಯರು ನೀಡಿದ್ದ 338 ರನ್‌ ಗುರಿ ಬೆನ್ನತ್ತಿದ್ದ ಭಾರತ 31 ರನ್‌ಗಳಿಂದ ಪರಾಭವಗೊಂಡಿತ್ತು.

Virat Kohli: ವಿರಾಟ್ ಕೊಹ್ಲಿ ಮತ್ತೊಂದು ಮದುವೆಯಾಗಿದ್ದಾರೆ ಎಂದ ಕಿವೀಸ್ ನಾಯಕ ವಿಲಿಯಮ್ಸನ್!

ಈ ಪಂದ್ಯದಲ್ಲಿ ಧೋನಿ ನಿಧಾನಗತಿಯ ಬ್ಯಾಟಿಂಗ್‌ ಮಾಡಿದ್ದರು. ಪಂದ್ಯವನ್ನು ಭಾರತ ಸುಲಭವಾಗಿ ಗೆಲ್ಲಬಹುದಿತ್ತು. ಆದರೆ, ಧೋನಿ ದೊಡ್ಡ ಹೊಡೆತದ ಮೊರೆ ಹೋಗಲಿಲ್ಲ ಎಂದು ಹೇಳಿ, ಭಾರತ ಸೋಲಿಗೆ ಧೋನಿಯೇ ಕಾರಣ ಎಂಬಂತೆ ಸ್ಟೋಕ್ಸ್​​ ತನ್ನ ಪುಸ್ತಕ 'ಆನ್‌ ಫೈಯರ್‌' ಟೀಕಿಸಿದ್ದರು.

ಈ ವಿಚಾರವಾಗಿ ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಮಾತನಾಡಿದ ಶ್ರೀಶಾಂತ್, 'ಬೆನ್ ಸ್ಟೋಕ್ಸ್ ಅವರು ಧೋನಿ ವಿರುದ್ಧ ಎಂದಿಗೂ ಆಡುವುದಿಲ್ಲ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಅವರು (ಧೋನಿ) ಯಾವುದನ್ನೂ ಮರೆಯುವುದಿಲ್ಲ', ಎಂದಿರುವ ಶ್ರೀಶಾಂತ್‌, 'ಐಪಿಎಲ್‌ ನಡೆದರೆ ಅಥವಾ ಭಾರತ- ಇಂಗ್ಲೆಂಡ್‌ ವಿರುದ್ಧ ಪಂದ್ಯ ನಡೆದರೆ, ಬೆನ್‌ ಸ್ಟೋಕ್‌ಗೆ ಶುಭವಾಗಲಿ. ಒಂದು ಅಥವಾ ಎರಡು ದಶಲಕ್ಷ ಸ್ಟೋಕ್ಸ್‌ಗಳು ಸಿದ್ದರಾಗಲಿ, ಆದರೆ, ಪ್ರಯೋಜನವಿಲ್ಲ. ಭವಿಷ್ಯ ಧೋನಿ ತಮ್ಮ ವೃತ್ತಿ ಜೀವನವನ್ನು ಕೊನೆಗೊಳಿಸಬಹುದು,' ಎಂದಿದ್ದಾರೆ.

ಇನ್ನು ವೆಸ್ಟ್​ ಇಂಡೀಸ್​ ಮಾಜಿ ವೇಗಿ ಮೈಕಲ್​ ಹೋಲ್ಡಿಂಗ್​ ಕೂಡ ಧೋನಿ ಪರ ಬ್ಯಾಟಿಂಗ್​ ಮಾಡಿದ್ದಾರೆ. ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ಇಂಗ್ಲೆಂಡ್​ ವಿರುದ್ಧ ಪಂದ್ಯವನ್ನು ಗೆಲ್ಲಬೇಕಾಗಿದೆ ಎಂದು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ.

IPL 2020: ಈ ಬಾರಿ ವಿದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆ?'ಜನರು ಈ ದಿನಗಳಲ್ಲಿ ಪುಸ್ತಕದಲ್ಲಿ ಏನು ಬೇಕಾದರೂ ಬರೆದುಕೊಳ್ಳುತ್ತಾರೆ. ಏಕೆಂದರೆ ಜನರು ತಮ್ಮ ಅಭಿಪ್ರಾಯಗಳೊಂದಿಗೆ ಹೆಚ್ಚು ಮುಕ್ತರಾಗಿರುತ್ತಾರೆ. ಹಾಗೂ ಅವರು ಪುಸ್ತಕ ಬರೆಯುವಾಗ ಕೆಲವೊಂದು ಹೆಡ್​ಲೈನ್​ ಬೇಕಿರುತ್ತದೆ. ಆ ಪಂದ್ಯ ಭಾರತಕ್ಕೆ ಗೆಲ್ಲುವಂತದ್ದಾಗಿರಲಿಲ್ಲ. ಆದರೆ, ಆ ಪಂದ್ಯವನ್ನು ಬೇಕೆಂದೆ ಸೋಲನುಭವಿಸಲಾಯಿತು ಎಂದು ಯಾರಾದರೂ ಹೇಳುತ್ತಾರೆ ಎಂದು ನಾನು ಆಲೋಚಿಸಿಲ್ಲ.' ಎಂದು ಹೋಲ್ಡಿಂಗ್​ ಸ್ಟೋಕ್ಸ್​ಗೆ ತಿರುಗೇಟು ನೀಡಿದ್ದಾರೆ.
First published: June 9, 2020, 10:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading