ಮನೆಯ ಗಾರ್ಡನ್​​ನಲ್ಲಿ ಬಿದ್ದಿದ್ದ ಪಕ್ಷಿಯನ್ನ ಆರೈಕೆ ಮಾಡಿ ಹಾರುವಂತೆ ಮಾಡಿದ ಝೀವಾ-ಧೋನಿ!

MS Dhoni:ಪಕ್ಷಿಯೊಂದರ ಆರೈಕೆ ಮಾಡುವ ಮೂಲಕ ಧೋನಿ ಸುದ್ದಿಯಾಗಿದ್ದಾರೆ. ರಾಂಚಿಯಲ್ಲಿನ ತಮ್ಮ ಫಾರ್ಮ್​ಹೌಸ್​ನಲ್ಲಿ ಗಾಯಗೊಂಡು ಬಿದ್ದಿರುವ ಹಕ್ಕಿಯನ್ನು ಕಂಡು ಅದಕ್ಕೆ ನಿರುಣಿಸಿ ಆರೈಕೆ ಮಾಡಿದ್ದಾರೆ.

 ಧೋನಿ-ಝೀವಾ

ಧೋನಿ-ಝೀವಾ

 • Share this:
  ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ರಾಂಚಿಯಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಫಾರ್ಮ್​ಹೌಸ್​ನಲ್ಲಿಯೇ ಇದ್ದುಕೊಂಡು ತಂದೆ-ತಾಯಿ, ಪತ್ನಿ, ಮಗಳೊಂದಿಗೆ ಎಂಜಾಯ್​​ ಮಾಡುತ್ತಿದ್ದಾರೆ. ಬಿಡುವಿದ್ದಾಗ ಮಗಳು ಝೀವಾ ಧೋನಿಯನ್ನು ಕೂರಿಸಿಕೊಂಡು ಬೈಕ್​ ರೈಡ್​​ ಹೋಗುತ್ತಾರೆ. ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಧೋನಿ ಸುದ್ದಿಯಲ್ಲಿದ್ದಾರೆ.

  ಇದೀಗ ಪಕ್ಷಿಯೊಂದರ ಆರೈಕೆ ಮಾಡುವ ಮೂಲಕ ಧೋನಿ ಸುದ್ದಿಯಾಗಿದ್ದಾರೆ. ರಾಂಚಿಯಲ್ಲಿನ ತಮ್ಮ ಫಾರ್ಮ್​ಹೌಸ್​ನಲ್ಲಿ ಗಾಯಗೊಂಡು ಬಿದ್ದಿರುವ ಹಕ್ಕಿಯನ್ನು ಕಂಡು ಅದಕ್ಕೆ ನಿರುಣಿಸಿ ಆರೈಕೆ ಮಾಡಿದ್ದಾರೆ. ಪತಿ ಮತ್ತು ಝೀವಾಳ ಪಕ್ಷಿ ರಕ್ಷಣೆ ಕಾರ್ಯಚರಣೆ ಕಥೆಯನ್ನು ಸಾಕ್ಷಿ ಸಿಂಗ್​​ ತಮ್ಮ ಪುತ್ರಿಯ ಅಧಿಕೃತ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಝೀವಾ ಮತ್ತು ಧೋನಿ ಕಾಪರ್​​ಸ್ಮಿತ್​​ ಬಾರ್ಬೆಟ್​​ ಜಾತಿಯ ಹಕ್ಕಿಯನ್ನು ರಕ್ಷಿಸಿ ಅದಕ್ಕೆ ನೀರುಣಿಸಿ ಚೇತರಿಸುವಂತೆ ಮಾಡಿದ್ದಾರೆ. ನಂತರ ಅದನ್ನು ಬುಟ್ಟಿಯಲ್ಲಿ ಇರಿಸಿದ್ದರು. ನಿಧಾನವಾಗಿ ಚೇತರಿಸಿದ ನಂತರ ಪಕ್ಷಿ ಹಾರಿಹೋಗಿದೆ ಎಂದು ಬರೆದುಕೊಂಡಿದ್ದಾರೆ.

   
  ಇಂದು ಸಂಜೆ ನಮ್ಮ ಮನೆಯ ಗಾರ್ಡನ್​ನಲ್ಲಿ ಪಕ್ಷಿಯೊಂದು ಪ್ರಜ್ನೆತಪ್ಪಿ ಬಿದ್ದಿತ್ತು. ನಾನು ಅದನ್ನು ಕಂಡು ಜೋರಾಗಿ ಅಪ್ಪಾ ಮತ್ತು ಅಮ್ಮಾ ಕರೆದೆ. ಬಳಿಕ ಅಪ್ಪ ಆ ಪಕ್ಷಿಯನ್ನು ಎತ್ತಿಕೊಂಡು ಅದಕ್ಕೆ ನೀರು ಕುಡಿಸಿದರು. ಕೆಲ ಸಮಯದ ಬಳಿಕ ಅದು ಕಣ್ಣು ಬಿಟ್ಟಿತ್ತು. ಅನ್ನು ಕಂಡು ಎಲ್ಲರಿಗೂ ಸಂತೋಷವಾಯಿತು. ನಂತರ ಎಲೆಗಳಿದ್ದ ಬುಟ್ಟಿಯಲ್ಲಿ ಇರಿಸಿದ್ದೆವು. ಅದು ಸಿರ್ಮ್ಸನ್​​​​ ಬ್ರೆಸ್ಟೆಟ್​ ಬಾರ್ಬೆಟ್​​ ಪಕ್ಷಿಯೆಂದು ಅಮ್ಮಾ ಹೇಳಿದರು.

  ಎಷ್ಟು ಮುದ್ದಾದ ಪಕ್ಷಿಯದು. ಇದ್ದಕ್ಕಿಂತೆ ಹಾರಿ ಹೋಯಿತು. ಅದು ಇಲ್ಲೇ ಉಳಿಯಬೇಕಿತ್ತು ಎಂಬುದು ನನ್ನ ಆಸೆಯಾಗಿತ್ತು. ಆದರೆ ಅದು ತನ್ನ ಮನೆಗೆ ಹೋಗಿದೆ ಎಂದು ಅಮ್ಮಾ ಹೇಳಿದರು. ಅದು ಮತ್ತೆ ಬರಲಿದೆ ಎಂಬ ವಿಶ್ವಾಸ ನನಗಿದೆ ಎಂದು ಝೀವಾ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಪಕ್ಷಿಯ ಫೋಟೋದ ಜೊತೆಗೆ ಹೀಗೆ ಬರೆದುಕೊಂಡಿದ್ದಾರೆ.

  WhatsApp: ವಾಟ್ಸ್​ಆ್ಯಪ್​​ ಹೇಗೆ ದುಡ್ಡು ಮಾಡುತ್ತಿದೆ ಎಂದು ನಿಮಗೆ ಗೊತ್ತಿದ್ಯಾ? ಇಲ್ಲಿದೆ ಮಾಹಿತಿ
  First published: