HOME » NEWS » Sports » CRICKET MPL SPORTS BCCI ANNOUNCES MPL SPORTS AS OFFICIAL KIT SPONSOR FOR TEAM INDIA INDIAN CRICKET TEAM VB

MPL Sports: ಭಾರತ ಕ್ರಿಕೆಟ್ ತಂಡಗಳ ಕಿಟ್ ಪ್ರಾಯೋಜಕತ್ವಕ್ಕೆ ಎಂಪಿಎಲ್: 2023 ವರೆಗೆ ಬಿಸಿಸಿಐ ಜೊತೆ ಒಪ್ಪಂದ

ಟೀಂ​ ಇಂಡಿಯಾ ಆಟಗಾರರು ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂಪಿಎಲ್ ಸ್ಪೋರ್ಟ್ಸ್ ಪ್ರಾಯೋಜಕತ್ವದ ಜರ್ಸಿಯಲ್ಲಿ ಆಡಲಿದೆ.

news18-kannada
Updated:November 17, 2020, 2:33 PM IST
MPL Sports: ಭಾರತ ಕ್ರಿಕೆಟ್ ತಂಡಗಳ ಕಿಟ್ ಪ್ರಾಯೋಜಕತ್ವಕ್ಕೆ ಎಂಪಿಎಲ್: 2023 ವರೆಗೆ ಬಿಸಿಸಿಐ ಜೊತೆ ಒಪ್ಪಂದ
Team India
  • Share this:
ಭಾರತ ಕ್ರಿಕೆಟ್‌ ತಂಡಗಳ ನೂತನ ಕಿಟ್‌ ಪ್ರಾಯೋ​ಜ​ಕರಾಗಿ ಬೆಂಗ​ಳೂರು ಮೂಲದ ಎಂಪಿ​ಎಲ್‌ ಸ್ಪೋರ್ಟ್ಸ್ ಸಂಸ್ಥೆ ಬಿಸಿ​ಸಿಐನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿ​ದೆ. ಭಾರತದ ಪುರುಷರ, ಮಹಿಳಾ ಮತ್ತು ಅಂಡರ್ -19 ಕ್ರಿಕೆಟ್​​ ತಂಡಗಳ ಹೊಸ ಕಿಟ್ ಪ್ರಾಯೋಜಕರಾಗಿ ಮತ್ತು ಅಧಿಕೃತ ವಾಣಿಜ್ಯ ಪಾಲುದಾರರನ್ನಾಗಿ ಎಂಪಿ​ಎಲ್‌ ಸ್ಪೋರ್ಟ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿರುವುದಾಗಿ ಬಿಸಿಸಿಐ ಪ್ರಕಟಿಸಿದೆ.

ಎಂಪಿಎಲ್ ಸ್ಪೋರ್ಟ್ಸ್ ಮೂರು ವರ್ಷಗಳವರೆಗೆ ನವೆಂಬರ್ 2020 ರಿಂದ ಡಿಸೆಂಬರ್ 2023 ರವರೆಗೆ ಬಿಸಿಸಿಐನೊಂದಿಗೆ ₹120 ಕೋಟಿಗೆ ಈ ಒಪ್ಪಂದ ಮಾಡಿಕೊಂಡಿದೆ. ಟೀಂ​ ಇಂಡಿಯಾ ಆಟಗಾರರು ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂಪಿಎಲ್ ಸ್ಪೋರ್ಟ್ಸ್ ಪ್ರಾಯೋಜಕತ್ವದ ಜರ್ಸಿಯಲ್ಲಿ ಆಡಲಿದೆ. ಎಂಪಿಎಲ್ ಸ್ಪೋರ್ಟ್ಸ್ ಟೀಂ ಇಂಡಿಯಾ ಜರ್ಸಿಗಳಲ್ಲದೆ, ಪರವಾನಗಿ ಪಡೆದ ಟೀಂ ಇಂಡಿಯಾ ಕಿಟ್​ಗಳನ್ನು ಸಹ ಮಾರಾಟ ಮಾಡುತ್ತದೆ.

ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ವಿಚಿತ್ರ ಘಟನೆ: ಔಟ್ ಮಾಡಿದ್ದಕ್ಕೆ ಬ್ಯಾಟ್ಸ್​ಮನ್​ ಬಳಿ ಮೈದಾನದಲ್ಲೇ ಕ್ಷಮೆ ಕೇಳಿದ ಬೌಲರ್

"ಈ ಸಹಭಾಗಿತ್ವವು ಟೀಂ ಇಂಡಿಯಾ ಮತ್ತು ದೇಶದಲ್ಲಿ ಕ್ರೀಡಾ ವ್ಯಾಪಾರ, ವ್ಯವಹಾರದಲ್ಲಿ ಹೊಸ ಮಜಲಿನೆಡೆಗೆ ನಮ್ಮನ್ನು ಕರೆದೊಯ್ಯುತ್ತದೆ. ಈ ಸಹಭಾಗಿತ್ವವು ದೇಶದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಕ್ರಿಕೆಟ್ ಅಭಿಮಾನಿಗಳಿಗೆ ಅಪೇಕ್ಷಿತ ಭಾರತೀಯ ಕ್ರಿಕೆಟ್ ತಂಡದ ಜರ್ಸಿ ಸೇರಿದಂತೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯಲು ಅನುಕೂಲವಾಗಿದೆ 'ಎಂದು ಬಿಸಿಸಿಐನ ಗೌರವ ಕಾರ್ಯದರ್ಶಿ ಜೈ ಶಾ ಹೇಳಿದರು.





ಆದರೆ, ಇದು ಹಿಂದಿನ ಒಪ್ಪಂದ​ಕ್ಕಿಂತ ಕಡಿಮೆಯಾಗಿದೆ. ಈ ಹಿಂದೆ 5 ವರ್ಷಗಳ ಒಪ್ಪಂದ ಹೊಂದಿದ್ದ ಜಾಗ​ತಿಕ ಮಟ್ಟದ ಸಂಸ್ಥೆ ನೈಕಿ, ಪ್ರತಿ ಪಂದ್ಯಕ್ಕೆ 88 ಲಕ್ಷ ರುಪಾಯಿ ಪಾವ​ತಿ​ಸು​ತ್ತಿತ್ತು. ಅಂದರೆ ಒಟ್ಟು 370 ಕೋಟಿ ರುಪಾಯಿ ಮೌಲ್ಯದ ಒಪ್ಪಂದ ಅದಾ​ಗಿತ್ತು. ಜೊತೆಗೆ 30 ಕೋಟಿ ರುಪಾಯಿ ರಾಯಲ್ಟಿಯನ್ನೂ ಪಾವ​ತಿ​ಸಿತ್ತು.

ಈ ವರ್ಷ ಸೆಪ್ಟೆಂಬರ್‌ಗೆ ನೈಕಿ ಸಂಸ್ಥೆಯ ಒಪ್ಪಂದ ಮುಕ್ತಾ​ಯ​ಗೊಂಡಿತ್ತು. ಆ ಬಳಿಕ ಬಿಸಿ​ಸಿಐ ಹೊಸ​ದಾಗಿ ಟೆಂಡರ್‌ ಆಹ್ವಾ​ನಿಸಿತ್ತಾ​ದ​ರೂ, ಕೊರೋನಾ ಆರ್ಥಿಕ ಸಂಕ​ಷ್ಟ​ದಿಂದಾಗಿ ಯಾವ ಸಂಸ್ಥೆಯೂ ಬಿಡ್‌ ಸಲ್ಲಿ​ಸಿ​ರ​ಲಿಲ್ಲ. ಹೀಗಾಗಿ, ಎಂಪಿ​ಎಲ್‌ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಬಿಸಿ​ಸಿ​ಐ ಸಹಿ ಹಾಕಿದೆ.

AUS vs IND: ಭಾರತದ ಗೆಲುವಿಗೆ ಕಂಟಕ ಆಗಿರುವುದು ಆಸೀಸ್​ನ ಆ ಇಬ್ಬರು ಆಟಗಾರರು ಎಂದ ಚೇತೇಶ್ವರ್ ಪೂಜಾರ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿ, "2023 ರವರೆಗೆ ಭಾರತೀಯ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಕಿಟ್ ಪ್ರಾಯೋಜಕರಾಗಿ ಎಂಪಿಎಲ್ ಸ್ಪೋರ್ಟ್ಸ್ ನೇಮಕಗೊಳ್ಳುವುದರೊಂದಿಗೆ ಭಾರತೀಯ ಕ್ರಿಕೆಟ್​ನ ಹೊಸ ಯುಗವೊಂದು ಉದಯವಾಗಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ಎಂಪಿಎಲ್ ಸ್ಪೋರ್ಟ್ಸ್ ತಂಡದ ಹೊಸ ಚಾಪ್ಟರ್ ಅನ್ನು ಸೇರಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಗಂಗೂಲಿ ಹೇಳಿದರು.
Published by: Vinay Bhat
First published: November 17, 2020, 2:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories