ತಂದೆಯ ನಿಧನದ ಹೊರತಾಗಿಯೂ ಆಸ್ಟ್ರೇಲಿಯಾದಲ್ಲಿ ಭಾರತ ತಂಡದೊಂದಿಗೆ ದೇಶಕ್ಕೆ ಸೇವೆ ಸಲ್ಲಿಸಲು ಉಳಿಯಲು ನಿರ್ಧರಿಸಿದ ಟೀಂ ಇಂಡಿಯಾ ವೇಗಿ ಬೌಲರ್ ಮೊಹಮ್ಮದ್ ಸಿರಾಜ್ ಕಾರ್ಯಕ್ಕೆ ಎಲ್ಲರೂ ತಲೆದೂಗಿದ್ದಾರೆ. ಸದ್ಯ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಉತ್ಸಾಹದಲ್ಲಿ ಸಿರಾಜ್ ಈ ಬಾರಿ ಟೆಸ್ಟ್ ಸೆರಣಿ ಗೆದ್ದು ದಿವಂಗತ ತಮ್ಮ ತಂದೆಯನ್ನು ಗೌರವಿಸುವುದಾಗಿ ಭರವಸೆ ನೀಡಿದ್ದಾರೆ. ಸಿರಾಜ್ ತಂದೆ ಮೊಹಮ್ಮದ್ ಘೌಸ್ ಕಳೆದ ಶುಕ್ರವಾರ ನಿಧನರಾದರು.
ಸಿರಾಜ್ ಅವರ ಕ್ರಿಕೆಟಿಂಗ್ ವೃತ್ತಿಜೀವನದ ಮೊದಲು ಆಟೋರಿಕ್ಷಾ ಚಾಲಕರಾಗಿದ್ದ 53 ವರ್ಷದ ಅವರು ಶ್ವಾಸಕೋಶದ ಕಾಯಿಲೆಯಿಂದ ಕೊನೆಯುಸಿರೆಳೆದರು. ಆದರೆ, ಕ್ಯಾರೆಂಟೈನ್ ನಿಯಮಗಳು ಜಾರಿಯಲ್ಲಿರುವುದರಿಂದ ಭಾರತೀಯ ಟೆಸ್ಟ್ ತಂಡದ ಭಾಗವಾಗಿರುವ ಸಿರಾಜ್ ಅಂತ್ಯಕ್ರಿಯೆಗಾಗಿ ಭಾರತಕ್ಕೆ ಹಿಂತಿರುಗಲು ಸಾಧ್ಯವಾಗಲಿಲ್ಲ.
IPL 2020: ಐಪಿಎಲ್ 2020ರಲ್ಲಿ ಬಿಸಿಸಿಐ ಗಳಿಸಿದ ಲಾಭವೆಷ್ಟು?: ಅಧಿಕೃತವಾಗಿ ಹೊರಬಿತ್ತು ಲೆಕ್ಕಾಚಾರ
ಈ ನಡುವೆ ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಸಿರಾಜ್, ಮುಂದಿನ ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ ತಂಡಕ್ಕಾಗಿ ಉತ್ತಮ ಪ್ರದರ್ಶನ ತೋರುವ ಮೂಲಕ ಅಪ್ಪನ ಕನಸನ್ನು ನನಸು ಮಾಡುತ್ತೇನೆ ಎಂದಿದ್ದಾರೆ.
ವಿರಾಟ್ ಕೊಹ್ಲಿ ಅವರು 2007ರಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ತಂದೆಯ ನಿಧನದ ನಡುವೆಯೂ ಮರುದಿನ ರಣಜಿ ಪಂದ್ಯದಲ್ಲಿ ದೆಹಲಿ ಪರ ಆಡಿದ್ದರು. ಕರ್ನಾಟಕ ತಂಡದ ವಿರುದ್ಧ 97 ರನ್ ಸಿಡಿಸಿ ಮಾನಸಿಕ ದೃಢತೆ ಪ್ರದರ್ಶಿಸಿದ್ದರು. ಈಗ ಟೀಂ ಇಂಡಿಯಾ ನಾಯಕರಾಗಿರುವ ಅದೇ ವಿರಾಟ್ ಕೊಹ್ಲಿ, 'ಕಠಿಣ ಪರಿಸ್ಥಿತಿಯಲ್ಲಿ ಧೈರ್ಯದಿಂದ ಇರುವಂತೆ' ಹೇಳಿರುವ ಮಾತುಗಳು ತಮಗೆ ಸಾಂತ್ವಾನ ತುಂಬಿವೆ ಎಂದು ಸಿರಾಜ್ ಹೇಳಿದ್ದಾರೆ.
ಕೊಹ್ಲಿ ಇಲ್ಲಾಂದ್ರು ನೋ ಟೆನ್ಷನ್: ಟೀಂ ಇಂಡಿಯಾದಲ್ಲಿ ನಾಯಕನಾಗಲು 3-4 ಆಟಗಾರರಿದ್ದಾರೆ: ವಾರ್ನರ್
"ತಂದೆಯ ಮರಣ ನನಗೆ ಬಹುದೊಡ್ಡ ನಷ್ಟ, ಏಕೆಂದರೆ ಅವರು ನನ್ನನ್ನು ಹೆಚ್ಚು ಬೆಂಬಲಿಸುವ ವ್ಯಕ್ತಿಯಾಗಿದ್ದರು. ನನ್ನನ್ನು ಭಾರತ ತಂಡದಲ್ಲಿ ಕಾಣುವುದು ಮತ್ತು ದೇಶವನ್ನು ಹೆಮ್ಮೆ ಪಡುವಂತೆ ಮಾಡುವುದು ನನ್ನ ತಂದೆಯ ಕನಸಾಗಿತ್ತು. ಈಗ ನಾನು ಅದನ್ನು ಇಡೇರಿಸುವ ಗುರಿಯನ್ನು ಹೊಂದಿದ್ದೇನೆ" - ಮೊಹಮ್ಮದ್ ಸಿರಾಜ್.
ಸಿರಾಜ್ ಭಾರತಕ್ಕಾಗಿ ಒಂದು ಏಕದಿನ ಮತ್ತು ಮೂರು ಟಿ 20 ಪಂದ್ಯಗಳನ್ನು ಆಡಿದ್ದಾರೆ. 50 ಓವರ್ಗಳ ಸ್ವರೂಪದಲ್ಲಿ ಇನ್ನೂ ವಿಕೆಟ್ ಪಡೆದಿಲ್ಲ, ಆದರೆ ಟಿ 20 ಐಗಳಲ್ಲಿ ಮೂರು ವಿಕೆಟ್ಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಿದ್ದು ಸಾಕಷ್ಟು ಸುಧಾರಣೆ ಕಂಡು ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ