Siraj: ಕೊಹ್ಲಿ ತಮ್ಮ ಮನೆಗೆ ಬಂದಾಗ ಘಟನೆ ನೆನಪಿಸಿಕೊಂಡು ಭಾವುಕರಾದ ಸಿರಾಜ್

Siraj and kohli: ವಿರಾಟ್ ಕೊಹ್ಲಿ ಬಳಿಗೆ ತೆರಳಿ ತಮ್ಮ ಮನೆಗೆ ಬಂದು ಬಿರಿಯಾನಿ ಸವಿಯಲು ಸಿರಾಜ್ ಮನವಿ ಮಾಡಿಕೊಂಡಿದ್ದಾರೆ.. ಆದರೆ ವಿರಾಟ್ ಕೊಹ್ಲಿ ತಮಗೆ ಬೆನ್ನುನೋವಿನ ಕಾರಣ ಬರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.. ಇದರಿಂದ ಬೇಸರ ಮಾಡಿಕೊಂಡವರ ಸಿರಾಜ್ ಇತರ ಆಟಗಾರರು ಮನೆಗೆ ಆಹ್ವಾನಿಸಿ ಸುಮ್ಮನಾಗಿದ್ದಾರೆ.

ವಿರಾಟ್ ಕೊಹ್ಲಿ,  ಮೊಹಮ್ಮದ್ ಸಿರಾಜ್

ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್

  • Share this:
    ಭಾರತ(India) ತಂಡದ ಉತ್ತಮ ವೇಗಿಗಳಲ್ಲಿ ಮಹಮ್ಮದ್ ಸಿರಾಜ್(Mohamad Siraj) ಕೂಡ ಒಬ್ಬರು.. 2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal challengers Bangalore) ತಂಡ ಸೇರಿದ್ದ ಮೊಹಮ್ಮದ್ ಸಿರಾಜ್ ಅವರು ಅಷ್ಟಾಗಿ ಗುರುತಿಸಿಕೊಂಡಿರಲಿಲ್ಲ.. ಆದ್ರೆ 2019ರಲ್ಲಿ ನಡೆದ ಐಪಿಎಲ್ ನಲ್ಲಿ(IPL) ಸಿರಾಜ್ ನೀಡಿದ್ದ ಕೆಟ್ಟ ಪ್ರದರ್ಶನ ಎಲ್ಲರಿಂದಲೂ ಟೀಕೆಗೆ ಗುರಿಯಾಗಿತ್ತು.. ಆದ್ರೆ ಅದೇ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ವಿ ಬೌಲರುಗಳಲ್ಲಿ ಒಬ್ಬರಾದ ಮೊಹಮ್ಮದ್ ಸಿರಾಜ್ ಇಂದು ಟೀಂ ಇಂಡಿಯಾದಲ್ಲಿ(Team India) ತಮ್ಮ ಸ್ಥಾನ ಭದ್ರಪಡಿಸಿ ಕೊಂಡಿದ್ದಾರೆ..

    2020ರ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ಯುಎಇ ಪಿಚ್‌ಗಳಲ್ಲಿ ಅಬ್ಬರಿಸಿದ್ದ ಮೊಹಮ್ಮದ್‌ ಸಿರಾಜ್‌ಗೆ ಅದೇ ವರ್ಷ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಟೀಮ್ ಇಂಡಿಯಾ ಪರ ಆಡುವ ಸುವರ್ಣಾವಕಾಶ ಲಭ್ಯವಾಗಿತ್ತು. ಇದನ್ನು ಸದ್ಬಳಕೆ ಮಾಡಿಕೊಂಡ ಸಿರಾಜ್‌ ಭಾರತ ಟೆಸ್ಟ್‌ ತಂಡದ ಮೂರನೇ ವೇಗಿ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಹೀಗಾಗಿ ತಮ್ಮ ಕ್ರಿಕೆಟ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೇಗೆ  ಜೀವನವನ್ನು ಬದಲಾಯಿಸಿದೆ ಎಂಬುದರ ಬಗ್ಗೆ ಆರ್ಸಿಬಿ ಪ್ರಾಡ್ ಕ್ಯಾಸ್ಟ್ ನಲ್ಲಿ ಸಿರಾಜ್ ಮಾತನಾಡಿದ್ದು ಹಲವು ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ..

    ಇದನ್ನೂ ಓದಿ: RCB ಅಭಿಮಾನಿಗಳಲ್ಲೂ ಶುರುವಾಯಿತು ಕೆಜಿಎಫ್ ಟ್ರೆಂಡ್

    ವಿರಾಟ್ ತಮ್ಮ ಮನೆಗೆ ಬಂದ ನೆನಪಿಸಿಕೊಂಡ ಮೊಹಮ್ಮದ್ ಸಿರಾಜ್

    2018ರಲ್ಲಿ ಹೈದರಾಬಾದ್ನಲ್ಲಿ ಸನ್ರೈಸರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೈದರಾಬಾದ್ ನಲ್ಲಿ ಇತ್ತು. ಈ ವೇಳೆ ಮಹಮದ್ ಸಿರಾಜ್ ತಮ್ಮ ಮನೆಗೆ ಬರುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ಆಹ್ವಾನ ಮಾಡಿದ್ದಾರೆ. ಅದರಂತೆ ವಿರಾಟ್ ಕೊಹ್ಲಿ ಬಳಿಗೆ ತೆರಳಿ ತಮ್ಮ ಮನೆಗೆ ಬಂದು ಬಿರಿಯಾನಿ ಸವಿಯಲು ಸಿರಾಜ್ ಮನವಿ ಮಾಡಿಕೊಂಡಿದ್ದಾರೆ.. ಆದರೆ ವಿರಾಟ್ ಕೊಹ್ಲಿ ತಮಗೆ ಬೆನ್ನುನೋವಿನ ಕಾರಣ ಬರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.. ಇದರಿಂದ ಬೇಸರ ಮಾಡಿಕೊಂಡವರ ಸಿರಾಜ್ ಇತರ ಆಟಗಾರರು ಮನೆಗೆ ಆಹ್ವಾನಿಸಿ ಸುಮ್ಮನಾಗಿದ್ದಾರೆ.

    ಸಿರಾಜ್ ಗೆ ಸರ್ಪ್ರೈಸ್ ನೀಡಿದ್ದ ವಿರಾಟ್

    ನನಗೆ ಬೆನ್ನು ನೋವಿದೆ ರೆಸ್ಟ್ ಮಾಡಬೇಕು ಎಂದು ಹೇಳಿದ್ದ ವಿರಾಟ್ ಕೊಹ್ಲಿ ಹೈದರಾಬಾದಿನ ಟೌಲಿ ಚೌಕಿಯಲ್ಲಿ ಸಿರಾಜ್ ಮನೆಗೆ ಹೋಗಿದ್ದಾರೆ. ಬರಲ್ಲ ಎಂದು ಹೇಳಿದ್ದ ವಿರಾಟ್ ಕಾರಿನಿಂದ ಇಳಿದು ಸಿರಾಜ್ ಮನೆಗೆ ಹೋಗುವುದನ್ನು ನೋಡಿ ಸಂತೋಷಕ್ಕೆ ಪಾರವೇ ಇರಲಿಲ್ಲ... ತಮ್ಮ ತಂಡದ ಇತರ ಆಟಗಾರರದ ಪಾರ್ಥಿವ್‌ ಪಟೇಲ್‌, ಯುಜ್ವೇಂದ್ರ ಚಹಾಲ್‌ ಮತ್ತು ಮನ್‌ದೀಪ್‌ ಸಿಂಗ್‌, ನವ್ದೀಪ್ ಸೈನಿ ಸೇರಿ ಹಲವಾರು ಆಟಗಾರರು ಸಿರಾಜ್ ಮನೆಗೆ ಭೇಟಿ ನೀಡಿ ಬಿರಿಯಾನಿ ಸವಿದಿದ್ದರು.. '

    ಅಲ್ಲದೆ ನೆಲದ ಮೇಲೆಯೇ ಕುಳಿತು ಸರಳತೆಯನ್ನು ವಿರಾಟ್ ಹಾಗೂ ಇತರ ಆಟಗಾರರು ಪ್ರದರ್ಶನ ಮಾಡಿದರು. ಇನ್ನು ವಿರಾಟ್ ಸಿರಾಜ್ ಮನೆಗೆ ಬರುತ್ತಿದ್ದಂತೆ ಭಾವುಕರಾದ ಸಿರಾಜ್ ಓಡಿಹೋಗಿ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡಿದ್ದೆ ಎಂದು ಮೊಹಮ್ಮದ್ ಸಿರಾಜ್ ಅಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ.

    ಇನ್ನು ಆರ್‌ಸಿಬಿ ತಂಡದ ಇತರರೊಂದಿಗೆ ಕೊಹ್ಲಿ ಅವರು ಸಿರಾಜ್ ಅವರ ಹೈದರಾಬಾದ್ ನಿವಾಸದಲ್ಲಿ ಬಿರಿಯಾನಿ ಸವಿಯುತ್ತಿರುವ ಫೋಟೋ ವೈರಲ್ ಆಗಿತ್ತು. ಸಿರಾಜ್ ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ `ನಿಮ್ಮೆಲ್ಲರನ್ನು ಸ್ವಾಗತಿಸಲು ನನಗೆ ಮತ್ತು ನನ್ನ ಕುಟುಂಬಕ್ಕೆ ಗೌರವ. ನಿಮ್ಮ ಅಮೂಲ್ಯ ಸಮಯವನ್ನು ನಮ್ಮ ಮನೆಯಲ್ಲಿ ಔತಣದಲ್ಲಿ ಭಾಗವಹಿಸಲು ವ್ಯಯಿಸಿದ್ದಕ್ಕೆ ಧನ್ಯವಾದಗಳು" ಎಂದು ಬರೆದಿದ್ದರು.

    ಇದನ್ನೂ ಓದಿ: ಇವರೇ ನೋಡಿ RCB ತಂಡದ ಮುಂದಿನ ನಾಯಕ

    ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೊಹಮ್ಮದ್ ಸಿರಾಜ್ ನೀಡಿದ ಅದ್ಭುತ ಪ್ರದರ್ಶನದಿಂದಾಗಿ 15ನೇ ಆವೃತ್ತಿಯ ಐಪಿಎಲ್ ಗೆ ಆರ್ಸಿಬಿ ಹರಾಜಿಗೂ ಮುನ್ನವೇ ಏಳು ಕೋಟಿ ರೂಪಾಯಿ ಮಹಮ್ಮದ್ ಸಿರಾಜ್ ಅವರನ್ನು ರಿಟೈನ್ ಮಾಡಿಕೊಂಡಿತ್ತು.
    Published by:ranjumbkgowda1 ranjumbkgowda1
    First published: