ಕಾಂಗರೂಗಳ ನಾಡಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಟೀಂ ಇಂಡಿಯಾ ತವರಿಗೆ ವಾಪಾಸ್ ಆಗಿದೆ. ಭಾರತ ತಂಡದ ಜಯದಲ್ಲಿ ಯುವ ವೇಗಿ ಮೊಹಮ್ಮದ್ ಸಿರಾಜ್ ಪಾತ್ರ ಪ್ರಮುಖವಾಗಿದೆ. ತಂದೆ ಅಗಲಿಕೆಯ ನಡುವೆಯೂ ಸಿರಾಜ್ ದೇಶಕ್ಕಾಗಿ ಆಡಿ, ಭಾರತದ ಐತಿಹಾಸಿಕ ಗೆಲುವಿಗೆ ಕಾರಣರಾದರು. ಇದೀಗ ಆಸೀಸ್ ಪ್ರವಾಸ ಮುಗಿಸಿ ತವರಿಗೆ ಆಗಮಿಸಿದ ಸಿರಾಜ್ ಐಶಾರಾಮಿ BMW ಕಾರು ಖರೀದಿಸಿದ್ದು, ಹೊಸ ಕಾರಿನ ಚಿತ್ರ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾ ಪ್ರವಾಸದ ವೇಳೆ ಸ್ಟೇಡಿಯಂನಲ್ಲಿ ಅಲ್ಲಿನ ಪ್ರೇಕ್ಷಕರಿಂದ ಜನಾಂಗೀಯ ನಿಂದನೆಗೂ ಒಳಗಾಗಿದ್ದರೂ ಟೆಸ್ಟ್ ಸರಣಿಯಲ್ಲಿ ಸಿರಾಜ್ ಗಮನಾರ್ಹ ಪ್ರದರ್ಶನ ನೀಡಿದ್ದರು. 13 ವಿಕೆಟ್‌ಗಳನ್ನು ಕಿತ್ತು ಗಮನ ಸೆಳೆದಿದ್ದು ಅಲ್ಲದೆ ಬಾರ್ಡರ್-ಗವಾಸ್ಕರ್ ಟ್ರೋಫಿಯ 4 ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
IPL 2021 Auction : ಈ ದಿನದಂದು ನಡೆಯಲಿದೆ ಬಹುನಿರೀಕ್ಷಿತ ಐಪಿಎಲ್ 2021ರ ಹರಾಜು ಪ್ರಕ್ರಿಯೆ
ಇನ್ನೂ ಆಸ್ಟ್ರೇಲಿಯಾ ಪ್ರವಾಸ ಸರಣಿಯ ವೇಳೆ ಸಿರಾಜ್ ಅವರ ತಂದೆ ಮೊಹಮ್ಮದ್ ಘೌಸ್ ಸಾವನ್ನಪ್ಪಿದ್ದರು. ಆದರೆ, ಸಿರಾಜ್ ಭಾರತಕ್ಕೆ ವಾಪಸ್ಸಾಗದೆ ತಂಡದ ಬೆಂಬಲಕ್ಕೆ ನಿಂತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆಸ್ಟ್ರೇಲಿಯಾದಿಂದ ಹೈದರಾಬಾದ್ಗೆ ಬಂದಿಳಿದ ಸಿರಾಜ್ ಮೊದಲು ನೇರವಾಗಿ ತಂದೆಯ ಸಮಾಧಿಗೆ ತೆರಳಿ ನಮನ ಸಲ್ಲಿಸಿದ್ದರು.
ಮೊದಲು ತಂದೆ ಸಮಾಧಿಗೆ ಭೇಟಿ ನೀಡಿದ ಬಳಿಕ ಮನೆಗೆ ಭೇಟಿ ನೀಡಿದ್ದಾರೆ. ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗುವಲ್ಲಿ ತಂದೆ ಪಾತ್ರ ದೊಡ್ಡದು. ಆದರೆ, ಟೆಸ್ಟ್ ತಂಡದಲ್ಲಿ ಮಿಂಚಿ ತವರಿಗೆ ಬಂದಾಗ ಸ್ವಾಗತಿಸಲು ತಂದೆ ಇಲ್ಲ ಅನ್ನೋ ನೋವು ಸಿರಾಜ್ಗೆ ಕಾಡುತ್ತಿದೆ. ಅಂದ್ಗಾಗೆ ಸಿರಾಜ್ ತಾನು ಖರೀದಿಸಿರುವ ಹೊಸ ಕಾರಿನ ವಿಡಿಯೋ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಿ ಮಿಂಚಿದ ಮೊಹಮ್ಮದ್ ಸಿರಾಜ್ ಅವರ ಸಾಧನೆಯನ್ನು ಕ್ರಿಕೆಟ್ ದಿಗ್ಗಜರು ಕೂಡ ಹಾಡಿಹೊಗಳಿದ್ದಾರೆ. ಮುಖ್ಯ ಕೋಚ್ ರವಿ ಶಾಸ್ತ್ರಿ ಗುಣಗಾನ ಮಾಡಿದ್ದಾರೆ.
ಚೊಚ್ಚಲ ಪಂದ್ಯದಲ್ಲೇ ಹಲವು ವಿಶ್ವ ದಾಖಲೆ ಬರೆದ 19ರ ಹರೆಯದ ಯುವ ಬ್ಯಾಟ್ಸ್ಮನ್..!
"ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡಕ್ಕೆ ನಿಧಿ ಈತ. ಆತ ಬೌಲಿಂಗ್ ದಾಳಿ ಸಂಘಟಿಸಿದ ರೀತಿ ನಿಜಕ್ಕೂ ಅಮೋಘ. ತಂದೆಯ ಸಾವಿನ ಸುದ್ದಿಯ ಆಘಾತಕ್ಕೊಳಗಾದರೂ, ಜನಾಂಗೀಯ ನಿಂದನೆ ಅನುಭವಿಸಿದರೂ ವಿಶ್ವಾಸ ಕಳೆದುಕೊಳ್ಳದೆ ಏಕಾಗ್ರತೆ ಕಾಯ್ದುಕೊಂಡು ಭಾರತ ತಂಡಕ್ಕೆ ಯಶಸ್ಸು ತಂದುಕೊಟ್ಟರು," ಎಂದು ರವಿ ಶಾಸ್ತ್ರಿ ಯುವ ವೇಗಿಯ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ