HOME » NEWS » Sports » CRICKET MOHAMMED SIRAJ FIRST INDIA DEBUTANT TO PICK 5 WICKETS IN A TEST IN 7 YEARS ZP

Mohammed Siraj: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ವಿಶೇಷ ಸಾಧನೆಗೈದ ಮೊಹಮ್ಮದ್ ಸಿರಾಜ್

ಸಿರಾಜ್ ಮೊದಲ ಟೆಸ್ಟ್ ಪಂದ್ಯದಲ್ಲೇ ಮಾರ್ನಸ್ ಲಾಬುಶೇನ್, ಕ್ಯಾಮರೋನ್ ಗ್ರೀನ್ (2 ಇನಿಂಗ್ಸ್​ನಲ್ಲೂ), ಟ್ರಾವಿಸ್ ಹೆಡ್ ಮತ್ತು ನಾಥನ್ ಲಯಾನ್ ವಿಕೆಟ್ ಉರುಳಿಸಿ ಸಾಧಕರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.

news18-kannada
Updated:December 29, 2020, 3:40 PM IST
Mohammed Siraj: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ವಿಶೇಷ ಸಾಧನೆಗೈದ ಮೊಹಮ್ಮದ್ ಸಿರಾಜ್
Mohammed Siraj
  • Share this:
ಆಸ್ಟ್ರೇಲಿಯಾ ವಿರುದ್ದದ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಭಾರತೀಯ ಬೌಲರುಗಳ ಮುಂದೆ ಕ್ರೀಸ್​ ಕಚ್ಚಿ ನಿಲ್ಲಲು ಪರದಾಡಿದ ಆಸೀಸ್ ಬ್ಯಾಟ್ಸ್​ಮನ್​ಗಳು ಹೀನಾಯ ಸೋಲನುಭವಿಸಿತು. ಮೊದಲ ಇನಿಂಗ್ಸ್​ನಲ್ಲಿ ಜಸ್​ಪ್ರೀತ್ ಬುಮ್ರಾ 4 ವಿಕೆಟ್ ಉರುಳಿಸಿ ಮಿಂಚಿದ್ರೆ, 2ನೇ ಇನಿಂಗ್ಸ್​ನಲ್ಲಿ ಸಿರಾಜ್ 3 ವಿಕೆಟ್ ಕಬಳಿಸಿ ಗಮನ ಸೆಳೆದರು.

ಅಷ್ಟೇ ಅಲ್ಲದೆ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮೊಹಮ್ಮದ್ ಸಿರಾಜ್ 36.3 ಓವರ್ ಬೌಲ್ ಮಾಡಿ 77 ರನ್​ ನೀಡಿ 5 ವಿಕೆಟ್ ಕಬಳಿಸಿದರು. ಇದರೊಂದಿಗೆ 7 ವರ್ಷಗಳ ಬಳಿಕ ಭಾರತ ಪರ ಪದಾರ್ಪಣೆ ಪಂದ್ಯದಲ್ಲೇ 5 ವಿಕೆಟ್​ ಕಬಳಿಸಿದ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಅಂದರೆ 2013 ರಲ್ಲಿ ಕೊಲ್ಕತ್ತಾದಲ್ಲಿ ನಡೆದ ವೆಸ್ಟ್ ಇಂಡೀಸ್​ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಪಾದರ್ಪಣೆ ಮಾಡಿದ ಮೊಹಮ್ಮದ್ ಶಮಿ 9 ವಿಕೆಟ್ ಕಬಳಿಸಿ ಮಿಂಚಿದ್ದರು. ಆ ಬಳಿಕ ಟೀಮ್ ಇಂಡಿಯಾ ಪರ ಆಡಿದ ಯಾವುದೇ ಬೌಲರ್ ಚೊಚ್ಚಲ ಟೆಸ್ಟ್​ನಲ್ಲೇ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರಲಿಲ್ಲ.



ಇದೀಗ ಸಿರಾಜ್ ಮೊದಲ ಟೆಸ್ಟ್ ಪಂದ್ಯದಲ್ಲೇ ಮಾರ್ನಸ್ ಲಾಬುಶೇನ್, ಕ್ಯಾಮರೋನ್ ಗ್ರೀನ್ (2 ಇನಿಂಗ್ಸ್​ನಲ್ಲೂ), ಟ್ರಾವಿಸ್ ಹೆಡ್ ಮತ್ತು ನಾಥನ್ ಲಯಾನ್ ವಿಕೆಟ್ ಉರುಳಿಸಿ ಸಾಧಕರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ತಮ್ಮ ಚೊಚ್ಚಲ ಟೆಸ್ಟ್ ಯಶಸ್ಸಿನ ಬಗ್ಗೆ ಮಾತನಾಡಿದ ಸಿರಾಜ್, ತಂಡದಲ್ಲಿರುವ ಅನುಭವಿ ಬೌಲರ್ ಜಸ್​ಪ್ರೀತ್ ಬುಮ್ರಾ ನೀಡಿದ ಮಾರ್ಗದರ್ಶನ ತುಂಬಾ ನೆರವಾಗುತ್ತಿತ್ತು. ಅವರು ಪ್ರತಿ ಬೌಲ್​ ಮಾಡುವಾಗಲೂ ನನ್ನ ಬಳಿ ಬಂದು ಮಾರ್ಗದರ್ಶನ ನೀಡಿ ಆತ್ಮ ವಿಶ್ವಾಸ ತುಂಬುತ್ತಿದ್ದರು. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.
Published by: zahir
First published: December 29, 2020, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories