ಆರ್​​ಸಿಬಿ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್​ಗೆ ಪಿತೃ ವಿಯೋಗ; ಅಪ್ಪನ ಕನಸನ್ನು ಈಡೇರಿಸುತ್ತೇನೆ ಎಂದ ಮಗ

ಪಂದ್ಯದ ಕೊನೆಯಲ್ಲಿ ಮೊಹಮ್ಮದ್​ ಸಿರಾಜ್​ ತಂದೆಯ ಕುರಿತು ಮಾತನಾಡಿದ್ದರು. ‘ನನ್ನ ತಂದೆಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಶ್ವಾಸಕೋಶ ತೊಂದರೆಯಿಂದಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ನನಗೆ ಅವರ ಬಗ್ಗೆ ಚಿಂತೆಯಾಗಿದೆ. ಆದರೀಗ ಅವರನ್ನು ಭೇಟಿ ಮಾಡಲು ಮತ್ತು  ಮನೆಗೆ ಹೋಗಲು ಸಾಧ್ಯವಿಲ್ಲ. ಆದರೆ ಫೋನ್‌ನಲ್ಲಿ ಮಾತನಾಡುತ್ತೇನೆ’ ಎಂದರು

ಮೊಹಮ್ಮದ್ ಸಿರಾಜ್

ಮೊಹಮ್ಮದ್ ಸಿರಾಜ್

 • Share this:
  ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್​ ಅವರ ತಂದೆ ಮೊಹಮ್ಮದ್​​ ಫೌಸ್​ (53) ಶುಕ್ರವಾರದಂದು ನಿಧನರಾಗಿದ್ದಾರೆ. ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್​​ ಆಸ್ಪತ್ರೆಯಲ್ಲಿ  ಕೊನೆಯುಸಿರೆಳೆದಿದ್ದಾರೆ. 

  ಮೊಹಮ್ಮದ್ ಸಿರಾಜ್​ (26) ಸಿಡ್ನಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಭ್ಯಾಸದಿಂದ ಹಿಂತಿರುಗಿ ಬಂದ ಮೇಲೆ ತಂದೆ ಸಾವಿನ ಸುದ್ದಿಯನ್ನು ಅವರಿಗೆ ತಿಳಿಯಿತು ಎಂದು ಕ್ರೀಡಾ ವೆಬ್​ಸೈಟ್​ವೊಂದು ವರದಿ ಮಾಡಿದೆ.

  ತಂದೆಯ ಕುರಿತಾಗಿ ಮಾತನಾಡಿದ್ದ ಸಿರಾಜ್​, ‘ನನ್ನ ತಂದೆಯ ಆಸೆ ಹೀಗಿತ್ತು, ನನ್ನ ಮಗ ನೀನು.. ನಿನ್ನನ್ನು ದೇಶ ಹೆಮ್ಮೆ ಪಡುವಂತೆ ಮಾಡಬೇಕು. ನಾನು ನನ್ನ ತಂದೆಯ ಮಾತನ್ನು ಈಡೇರಿಸುತ್ತೇನೆ’ ಎಂದು ಹೇಳಿದ್ದಾರೆ.

  ನಂತರ ಮಾತು ಮುಂದುವರಿಸಿದ ಅವರು ’ಇದು ಆಘಾತಕಾರಿ ಸುದ್ದಿ, ನನ್ನ ಜೀವನದಲ್ಲಿ ಸದಾ ಬೆಂಬಲಿಸುತ್ತಿದ್ದ ತಂದೆಯನ್ನು ಕಳೆದುಕೊಂಡಿದ್ದೇನೆ. ನಾನು ದೇಶಕ್ಕಾಗಿ ಆಡುವುದು ಅವರ ಕನಸಾಗಿತ್ತು’ ಎಂದರು.

  ಸದ್ಯ ಕೊರೋನಾ ಕ್ವಾರಂಟೈನ್​ ನಿಯಮಗಳಿರುವುದರಿಂದ ಸಿರಾಜ್​ ಅವರಿಗೆ ಭಾರತಕ್ಕೆ ಬರಲು ಮತ್ತು ತಂದೆಯ ಅಂತಿಮ ವಿಧಿ ವಿಧಾನಕ್ಕೆ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ.

  ಐಪಿಎಲ್​ ವೇದಿಕೆಯಲ್ಲಿ ತಂದೆಯ ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದ ಸಿರಾಜ್​!

  ಇತ್ತೀಚೆಗೆ ನಡೆದ ಐಪಿಎಲ್​ ಪಂದ್ಯಾವಳಿಯ ವೇಳೆ ಆರ್​ಸಿಬಿ ತಂಡದಲ್ಲಿ ಬೌಲರ್​ ಆಗಿ ಕಾಣಿಸಿಕೊಂಡಿದ್ದರು. ಅಕ್ಟೋಬರ್​​ 21ರಂದು ಅಬುಧಾಬಿಯ ಶೇಖ್​ ಮೈದಾನದಲ್ಲಿ  ಕೊಲ್ಕತ್ತಾ ನೈಟ್​ರೈಡರ್ಸ್​ ತಂಡದ ವಿರುದ್ದ ಮಾಂತ್ರಿಕ ಪದರ್ಶನ ನೀಡಿದ್ದರು.  ಇದೇ ಪಂದ್ಯದ ಕೊನೆಯಲ್ಲಿ ಮೊಹಮ್ಮದ್​ ಸಿರಾಜ್​ ತಂದೆಯ ಕುರಿತು ಮಾತನಾಡಿದ್ದರು. ‘ನನ್ನ ತಂದೆಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಶ್ವಾಸಕೋಶ ತೊಂದರೆಯಿಂದಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ನನಗೆ ಅವರ ಬಗ್ಗೆ ಚಿಂತೆಯಾಗಿದೆ. ಆದರೀಗ ಅವರನ್ನು ಭೇಟಿ ಮಾಡಲು ಮತ್ತು  ಮನೆಗೆ ಹೋಗಲು ಸಾಧ್ಯವಿಲ್ಲ. ಆದರೆ ಫೋನ್‌ನಲ್ಲಿ ಮಾತನಾಡುತ್ತೇನೆ’ ಎಂದರು

  ‘ನಾನು ಕರೆ ಮಾಡಿದಾಗ ಅವರು ಅಳಲು ಪ್ರಾರಂಭಿಸುತ್ತಾನೆ. ಹಾಗಾಗಿ ಹೆಚ್ಚು ಹೊತ್ತು ಮಾತನಾಡಲು ಆಗುತ್ತಿಲ್ಲ. ಏಕೆಂದರೆ ಅವರು ಅಳುವುದನ್ನು ನೋಡುವುದು ನನಗೆ ಇಷ್ಟವಿಲ್ಲ. ಅವರ ಉತ್ತಮ ಆರೋಗ್ಯಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ. ಕೊನೆಯ ಪಂದ್ಯದ ಮೊದಲು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಹೇಳಿದ್ದರು.

  ಆದರೀಗ ಸಿರಾಜ್​ ತನ್ನ ಪ್ರೀತಿಯ ತಂದೆಯನ್ನು ಕಳೆದುಕೊಂಡಿದ್ದಾರೆ. ಕ್ರಿಕಟೆ್​ ಅಭಿಮಾನಿಗಳಿಗೆ ಈ ವಿಚಾರ ಬೇಸರ ತರಿಸಿದೆ.
  Published by:Harshith AS
  First published: